ದಕ್ಷಿಣ ಕನ್ನಡ

ರಾಮ ಮಂದಿರ ಕಟ್ಟಿಯೇ ಸಿದ್ಧ: ಡಾ. ಪ್ರಭಾಕರ್ ಭಟ್

Published On :

ಕ.ಪ್ರ.ವಾರ್ತೆ  , ಮಂಗಳೂರು  , ಏ.21
ಶ್ರೀರಾಮ ಮಂದಿರ ಹಿಂದುಗಳ ಸ್ವಾಭಿಮಾನದ ಸಂಕೇತವಾಗಿದ್ದು, ಅದು ಅಯೋಧ್ಯೆಯಲ್ಲಿಯೇ ನಿರ್ಮಾಣವಾಗಬೇಕೆಂಬ ಛಲವಿದೆ ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಕಲ್ಲಡ್ಕ ಡಾ.ಪ್ರಭಾಕರ ಭಟ್ ಹೇಳಿದರು.
ಭಾನುವಾರ ನೆಹರೂ ಮೈದಾನದಲ್ಲಿ ನಡೆದ ಶ್ರೀರಾಮೋತ್ಸವ ಸಭೆ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಗಳಲ್ಲಿ ಒಗ್ಗಟ್ಟು ಇಲ್ಲದಿರುವುದೇ ದೇಶದಲ್ಲಿ ನಡೆಯುತ್ತಿರುವ ದುರಂತಗಳಿಗೆ ಕಾರಣ. ಇಂದು ಮಹಿಳೆಯರ, ಹಸುಗಳ ಅಪಹರಣ ನಡೆಯುತ್ತಿದ್ದರೂ ನಮಗೆ ಸಂಬಂಧಪಟ್ಟಿದ್ದಲ್ಲ ಎಂದು ಸುಮ್ಮನಿರುವುದು ದುರಂತ ಎಂದರು.
ಅಪಘಾತ, ಸ್ಫೋಟ, ದುರಂತಗಳು ಸಂಭವಿಸಿದಾಗ ಒಬ್ಬರೊಬ್ಬರನ್ನು ಸಾಂತ್ವಾನಿಸುವ ಮನಸ್ಥಿತಿ ಎಲ್ಲರಲ್ಲೂ ಇರಬೇಕು. ಇತ್ತೀಚೆಗೆ ಅದು ಕಡಿಮೆಯಾಗಿದ್ದು, ಹಿರಿಯರ ಮಾರ್ಗದರ್ಶನದಿಂದ ಯುವಜನತೆಯನ್ನು ಬದಲಾಯಿಸುವ ಕಾರ್ಯವಾಗಬೇಕು ಎಂದರು.
ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನಸಿಕ, ಆಧ್ಯಾತ್ಮಿಕ ಸ್ವಾಸ್ಥ್ಯ ಉತ್ತಮಗೊಳ್ಳಬೇಕಾದರೆ ರಾಮಾಯಣ ಅರಿತುಕೊಳ್ಳುವುದು ಉತ್ತಮ. ಆದರ್ಶ ಪುರುಷನಿಗೆ ರಾಮಮಂದಿರ ಕಟ್ಟಲು ಜಾತೀಯತೆ ಅಡ್ಡಿಯಾಗಬಾರದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.