ದಕ್ಷಿಣ ಕನ್ನಡ

ನಾಪತ್ತೆಯಾಗಿದ್ದ ವಿವಾಹಿತೆ ಮೈಸೂರಲ್ಲಿ ಆತ್ಮಹತ್ಯೆ

Published On :

ಕ.ಪ್ರ.ವಾರ್ತೆ ,  ಬಂಟ್ವಾಳ ,  ಏ. 21
ಮಗಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಮೈಸೂರಿನಲ್ಲಿ ಪ್ರಿಯಕರನ ಜತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಮಹಿಳೆ ಮೃತಪಟ್ಟು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ.  ಕರಿಯಂಗಳ ನಿವಾಸಿ ಬಾಬು ಪೂಜಾರಿ ಎಂಬವರ ಪತ್ನಿ ಮೋಹಿನಿ (35) ಮೃತಪಟ್ಟವರು.ಪ್ರಿಯಕರ ನರೇಂದ್ರ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಅನಾಥಳಾಗಿದ್ದ ಮೋಹಿನಿ ಮಗಳು ಮನಿಷಾ (9)ಳನ್ನು ಮೈಸೂರು ದೇವರಾಜ ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ನಿವಾಸಿಯಾಗಿದ್ದ ಮೋಹಿನಿ, ಮೂರು ವಾರಗಳ ಹಿಂದೆ ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿದ್ದರು. ಅಲ್ಲಿಂದ ತಲೆನೋವಿಗೆ ಔಷಧಿ ತರುತ್ತೇನೆಂದು ಮನಿಷಾಳೊಂದಿಗೆ ತೆರಳಿ, ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಬಾಬು ಪೂಜಾರಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ತನ್ನ ಪತ್ನಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನರೇಂದ್ರ ಎಂಬವನ ಪರಿಚಯವಿದ್ದು, ಆತನೊಂದಿಗೆ ತೆರಳಿರಬೇಕೆಂದು ದೂರಿನಲ್ಲಿ ತಿಳಿಸಿದ್ದರು. ಶನಿವಾರ ರಾತ್ರಿ ಮೈಸೂರಿನ ಸುದರ್ಶನ್ ಲಾಡ್ಜ್‌ನಲ್ಲಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೋಹಿನಿ ಸ್ಥಳದಲ್ಲಿಯೇ ಮೃತಪಟ್ಟರೆ, ನರೇಂದ್ರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಇಬ್ಬರ ನಡುವೆ ಪ್ರೇಮವಿದ್ದು, ಅವರಿಬ್ಬರೂ ಏ.9ರಂದು ಮೈಸೂರಿಗೆ ತೆರಳಿದ್ದರು. ಆರ್ಥಿಕ ಅಡಚಣೆ ತೀವ್ರವಾದ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.