ವಿನಾಕಾರಣ ಬ್ರಾಹ್ಮಣರ ದೂಷಣೆ: ರಾಘವೇಶ್ವರಶ್ರೀ
ಕ.ಪ್ರ.ವಾರ್ತೆ , ಮಂಗಳೂರು , ಏ. 21
ತಮಗಾಗಿ ಸ್ವಲ್ಪ, ಪ್ರಪಂಚವೇ ಸರ್ವಸ್ವ ಎನ್ನುತ್ತಾ ಜಗತ್ತಿಗೇ ಬೆಳಕು ಕೊಟ್ಟವರು ಬ್ರಾಹ್ಮಣರು. ನಿಸ್ವಾರ್ಥದಿಂದ ಜೀವನ ಸಾಗಿಸುವ ಬ್ರಾಹ್ಮಣರ ವಿರುದ್ಧ ವಿನಾ ಕಾರಣ ದೂಷಣೆ ಯಾಕೆ ಎಂದು ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಸಂಜೆ ನಡೆದ ಬ್ರಾಹ್ಮಣ ಜಾಗೃತಿ ಸಮ್ಮೇಳನ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಈಗಲೂ ಬ್ರಾಹ್ಮಣರನ್ನು ನಿಂದಿಸುವುದು ಮುಂದುವರಿದಿದೆ, ಬ್ರಾಹ್ಮಣರು ಜಾತಿವಾದ ಮಾಡುತ್ತಿಲ್ಲ, ರಾಜಕೀಯವಾಗಿಯೂ ಬ್ರಾಹ್ಮಣರು ಮುಂದೆ ಬಂದಿಲ್ಲ. ಈ ಗೊಂದಲಗಳ ಮಧ್ಯೆ 'ಬ್ರಾಹ್ಮಣಿಸಂ' ಆಗಬೇಕು. ಇದರಿಂದ ಇನ್ನೊಂದು ಸಮಾಜಕ್ಕೆ ತೊಂದರೆಯಾಗದು. ಬ್ರಾಹ್ಮಣರ ಜೀವನ ನಂದಾದೀಪವಾಗಲಿ ಎಂದು ಹೇಳಿದರು.
ಬೆಂಗಳೂರು ಮಯ್ಯಾಸ್ ಬೆವರೇಜಸ್ ಮತ್ತು ಫುಡ್ಸ್ನ ಅಧ್ಯಕ್ಷ ಡಾ.ಪಿ.ಸದಾನಂದ ಮಯ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಜ್ಞಾನವಿದ್ದರೆ ಬ್ರಾಹ್ಮಣರನ್ನು ಗೌರವಿಸುತ್ತಾರೆ: ವಿದ್ವಾಂಸ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಸಮಾರೋಪದಲ್ಲಿ ಮಾತನಾಡಿ, ವೇದಗಳು ಉಲ್ಲೇಖಿಸಿದ ವರ್ಣ ವ್ಯವಸ್ಥೆ ಬ್ರಾಹ್ಮಣರಿಗೆ ಸಂಬಂಧಿಸಿದ್ದಲ್ಲ. ಬ್ರಹ್ಮಜ್ಞಾನ ಇದ್ದರೆ ಎಲ್ಲರೂ ಬ್ರಾಹ್ಮಣರನ್ನು ಗೌರವಿಸುತ್ತಾರೆ. ಬ್ರಾಹ್ಮಣರು ತಮ್ಮ ಮಕ್ಕಳನ್ನು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಳೆಸುತ್ತಿದ್ದಾರೆ. ಬ್ರಾಹ್ಮಣ ವಿರೋಧಿ ನಿಲವುಗಳ ವಿರುದ್ಧ ಬ್ರಾಹ್ಮಣರು ಹೋರಾಟ ನಡೆಸಬೇಕು. ಬ್ರಾಹ್ಮಣರ ಹೆಣ್ಣು ಮಕ್ಕಳ ಮತಾಂತರ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದರು.
ಸಿನಿಮಾದಲ್ಲಿ ಜುಟ್ಟುಬಿಟ್ಟರೆ ಮಾತ್ರ ನಂಬ್ತಾರೆ!
ಬ್ರಾಹ್ಮಣ ಯುವಕರಿಗೆ ಮದುವೆಗೆ ಹುಡುಗಿ ಸಿಗುವುದಿಲ್ಲ, ಸಿಕ್ಕಿದರೂ ಜುಟ್ಟುಬಿಟ್ಟವರನ್ನು, ಪ್ಯಾಂಟ್ ಹಾಕಿದವರನ್ನು ಒಪ್ಪುವುದಿಲ್ಲ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಇದಕ್ಕೆ ಧರ್ಮಶಾಸ್ತ್ರ ಮಾತನಾಡಿದರೆ ಹುಡುಗಿಯರು ಒಪ್ಪುವುದಿಲ್ಲ. ಅದರ ಬದಲು ಇನ್ನು ಸಿನಿಮಾದಲ್ಲಿ ಜುಟ್ಟುಬಿಟ್ಟು ಪ್ಯಾಂಟ್ ಹಾಕಿಕೊಂಡು ಬಂದರೆ ಮಾತ್ರ ಅದನ್ನು ಸ್ವೀಕರಿಸಬಹುದು! ಅಷ್ಟರಮಟ್ಟಿಗೆ ಯುವಜನಾಂಗವನ್ನು ಸಿನಿಮಾ ಮೋಡಿ ಮಾಡಿದೆ. ಅದರಲ್ಲಿರುವುದೇ ಸರಿ ಎನ್ನುವಂತಾಗಿದೆ ಎಂದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಸಮಾರೋಪ ಭಾಷಣದಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

