ದಕ್ಷಿಣ ಕನ್ನಡ

ಇಂದಿನಿಂದ ಅಭ್ಯರ್ಥಿಗಳ ಖರ್ಚು ವೆಚ್ಚ ಪರಿಶೀಲನೆ

Published On :

ಮಂಗಳೂರು: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ವೀಕ್ಷಕರು, ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏ.24ರಿಂದ ಮೇ 3ರ ವರೆಗೆ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರ ವೆಚ್ಚಗಳ ಪರಿಶೀಲನೆ ನಡೆಸುವರು.
ಬೆಳ್ತಂಗಡಿಯಲ್ಲಿ ವಿನೀಶ್ ಚೌಧುರಿ ಏ.24, 28 ಹಾಗೂ ಮೇ 2ರಂದು ಮಧ್ಯಾಹ್ನ 2ರಿಂದ 5ರ ವರೆಗೆ, ಮೂಡುಬಿದಿರೆಯಲ್ಲಿ ಇವರು ಇದೇ ದಿನಾಂಕದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1, ಮೊಹಮ್ಮದ್ ಶಂಷದ್ ಆಲಂ ಏ.24, 28, ಮೇ 2ರಂದು ಮಂಗಳೂರು ಉತ್ತರದಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆ, ದಕ್ಷಿಣ ಕ್ಷೇತ್ರದಲ್ಲಿ ಏ.25, 29, ಮೇ.3ರಂದು ಬೆಳಗ್ಗೆ 10.30ರಿಂದ 1 ಗಂಟೆ ವರೆಗೆ ವೆಚ್ಚ ತಪಾಸಣೆ ನಡೆಸುವರು. ಮಂಗಳೂರು ಕ್ಷೇತ್ರದಲ್ಲಿ ಆರ್.ಆರ್.ಅಗರ್‌ವಾಲ್ ಏ.24, 28, ಮೇ 2ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ, ಬಂಟ್ವಾಳದಲ್ಲಿ ಇವರು ಏ.25, 29 ಮತ್ತು ಮೇ 3ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪರಿಶೀಲನೆ ಮಾಡುವರು. ಪುತ್ತೂರಿನಲ್ಲಿ ವಿನೀಶ್ ಚೌಧುರಿ ಏ.25, 29, ಮೇ 3ರಂದು ಬೆಳಗ್ಗೆ 10ರಿಂದ 1ರ ವರೆಗೆ, ಸುಳ್ಯದಲ್ಲಿ ಏ.25, 29 ಮತ್ತು ಮೇ 3ರಂದು ಮಧ್ಯಾಹ್ನ 2ರಿಂದ ಸಂಜೆ 5ರ ವರೆಗೆ ತಪಾಸಣೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.