ಪಿಯುಸಿ ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು: ಮೊಬೈಲ್ನಲ್ಲಿ ತನ್ನ ಗೆಳೆಯನ ಜತೆ ಮಾತನಾಡುತ್ತಿದ್ದ ಬಜಪೆ ಕೊಂಚಾರಿನ ಯುವತಿ ಏಕಾಏಕಿ ನಾಪತ್ತೆಯಾಗಿದ್ದಾಳೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶಾಂತಿ ವನಿತಾ ನರೋನ್ಹಾ (19) ಶನಿವಾರ ಮನೆಯಿಂದ ಹೊರಹೋದವಳು ಮತ್ತೆ ವಾಪಸ್ ಬಂದಿಲ್ಲ. ಆಕೆ ನಿತಿನ್ ಎಂಬ ಯುವಕನ ಜತೆ ಪ್ರತಿದಿನ ಫೋನ್ನಲ್ಲಿ ಮಾತನಾಡುತ್ತಿದ್ದಳು ಎಂದು ತಾಯಿ ರೋಸಿ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ದರ್ಗಾಕ್ಕೆ ಹೋದ ಯುವತಿ ಕಾಣೆ
ಮಂಗಳೂರು: ಉಳ್ಳಾಲ ದರ್ಗಾಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೋದ ತಂಗಿ ಮನೆಗೆ ವಾಪಸ್ ಬಂದಿಲ್ಲ ಎಂದು ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪೆರ್ಮನ್ನೂರು ಮಾರ್ಗತ್ತಿಲೆ ಕಟ್ಟೆತ್ತಿಲ್ ಹೌಸ್ ನಿವಾಸಿ ಕೌಸರ್ (18) ಶನಿವಾರ ಸಂಜೆ 4 ಗಂಟೆಗೆ ಮನೆ ಬಿಟ್ಟವಳು ವಾಪಸ್ ಬಂದಿಲ್ಲ. ಸಹೋದರ ಮೊಹಮ್ಮದ್ ಶರೀಫ್ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಕ್ ಅಪಘಾತ: ಯುವಕ ಸಾವು
ಮಂಗಳೂರು: ಕೋಟೆಕಾರ್ ನಡುದಾರಿಯಲ್ಲಿ ಬೈಕ್ ಪಲ್ಟಿಯಾಗಿ ಹಿಂಬದಿ ಸವಾರ ತೈಯೂಬ್ ಮೃತಪಟ್ಟಿದ್ದಾರೆ. ತೈಯೂಬ್ ಕಿನ್ಯಾ ಕುತುಬಿ ನಗರ ತಾಹಿರ್ ಮಂಜಿಲ್ ನಿವಾಸಿ. ಪಿ.ಕೆ.ಅಹಮ್ಮದ್ ಪುತ್ರ. ನೌಶಾದ್ ಸೋಮವಾರ ಮಧ್ಯಾಹ್ನ ತೈಯೂಬ್ನನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ಅಪಘಾತವಾಗಿತ್ತು. ಇಬ್ಬರು ರಸ್ತೆಗೆ ಬಿದ್ದಿದ್ದು, ತೈಯೂಬ್ ತಲೆಗೆ ಏಟಾಗಿತ್ತು. ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ವೆನ್ಲಾಕ್ ಗೆ ಕರೆದೊಯ್ದರು. ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ
ಪುತ್ತೂರು: ಗೃಹಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಗುತ್ತಿಗೆ ಎಂಬಲ್ಲಿ ಮಂಗಳವಾರ ನಡೆದಿದೆ. ಚಿಕ್ಕಮುಡ್ನೂರು ಗ್ರಾಮದ ಗುತ್ತಿಗೆ ನಿವಾಸಿ ಸುಂದರ ಅವರ ಪತ್ನಿ ಕಲಾವತಿ (37) ಮೃತರು. ಕಳೆದ ಕೆಲ ಸಮಯದಿಂದೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಲಾವತಿ ಮಂಗಳವಾರ ಮನೆಯೊಳಗೆ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ; ದೂರು
ಸುಳ್ಯ: ಅನ್ಯಕೋಮಿನ ವ್ಯಕ್ತಿಯೊಬ್ಬರೊಂದಿಗೆ ಮಹಿಳೆ ಮಾತನಾಡಿದ ಬಗ್ಗೆ ಪ್ರಶ್ನಿಸಿ ಹಲ್ಲೆ ನಡೆಸಿದ ಘಟನೆ ಕಾಯರ್ತೋಡಿಯಲ್ಲಿ ನಡೆದಿದೆ. ಕಾಯರ್ತೋಡಿಯ ಪುರುಷೋತ್ತಮ ಅವರ ಹೆಂಡತಿ ಹೇಮಾವತಿ ಬಶೀರ್ ಎಂಬಾತನೊಂದಿಗೆ ಮಾತನಾಡುತ್ತಿದ್ದಾಗ ನೆರೆಮನೆಯ ಸುರೇಶ ಬಂದು ಬಶೀರ್ ಜತೆ ಮಾತನಾಡಿದ್ದೇಕೆ ಎಂದು ಪ್ರಶ್ನಿಸಿದ್ದಾನೆ. ತಾನು ಅವರಲ್ಲಿ ಸಾಲ ಪಡೆದಿದ್ದು, ಅದನ್ನು ಕೇಳಲು ಬಂದಿದ್ದರು ಎಂದು ಹೇಮಾವತಿ ಉತ್ತರಿಸಿದಾಗ ಅವರಲ್ಲಿ ಸಾಲ ಕೇಳಿದ್ದು ಯಾಕೆಂದು ಬೈದು ಹೇಮಾವತಿಯವರ ತಲೆಯನ್ನು ಗೋಡೆಗೆ ಗುದ್ದಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಪುರುಷೋತ್ತಮ ಸುರೇಶರ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು ಪುರುಷೋತ್ತರ ಸುರೇಶರ ಪತ್ನಿ ಶೋಭಾರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ ಇತ್ತಂಡಗಳೂ ದೂರು ನೀಡಿದ್ದು, ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತನ್ನ ಮನೆಗೇ ಕನ್ನ ಹಾಕಿದ!
ಕಾರ್ಕಳ: ವ್ಯಕ್ತಿಯೊಬ್ಬ ಪತ್ನಿ ಮನೆಯಲ್ಲಿಲ್ಲದ ವೇಳೆ ತನ್ನ ಮನೆಗೇ ನುಗ್ಗಿ ನಗ- ನಗದು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ದಿನೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ. ಹೆಬ್ರಿಯ ಶಿವಪುರ ಗ್ರಾಮದ ನಿವಾಸಿ ದಿನೇಶ್ ಏ.19ರಂದು ತನ್ನ ಮನೆಗೆ ಹಿಂಬಾಗಿಲಿನಿಂದ ನುಗ್ಗಿ ಆರು ಸಾವಿರ ನಗದು, ಚಿನ್ನ ಹಾಗೂ ಆರು ಜತೆ ಚಪ್ಪಲಿ ಕಳವು ಮಾಡಿದ್ದಾನೆ. ಈ ಸಂಬಂಧ ಜ್ಯೋತಿ ಶೆಟ್ಟಿ ಅವರು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಶಿವಪುರ ಗ್ರಾಮದ ನಿವಾಸಿ ಸುರೇಶ್ ಶೆಟ್ಟಿ ಕಳವು ಮಾಡಿದ್ದಾರೆಂದು ಹೇಳಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಜ್ಯೋತಿ ಶೆಟ್ಟಿಯವರು ಪತಿ ದಿನೇಶ್ ಶೆಟ್ಟಿಯೇ ಕಳವು ಮಾಡಿರುವದು ತಿಳಿದು ಬಂದಿದ್ದು, ಆತನನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

