ದಕ್ಷಿಣ ಕನ್ನಡ

ಪುತ್ತಿಗೆ ಹೊಳ್ಳರಿಗೆ 60ರ ಅಭಿನಂದನೆ

Published On :

ಮಂಗಳೂರು: ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಶ್ರೇಷ್ಠತೆ ಮೆರೆದ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಗೆ ಕಲಾಭಿಮಾನಿಗಳು ಅಭಿನಂದಿಸಲು ಸಿದ್ದತೆ ನಡೆಸಿದ್ದಾರೆ.
 5,55,555 ಗೌರವಧನ ನೀಡುವ ಮೂಲಕ ಯಕ್ಷ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮೊತ್ತ ನೀಡಿ ಸನ್ಮಾನಿಸಲು 'ರಘುರಾಮಾಭಿನಂದನಮ್‌' ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಕಾರ್ಯದರ್ಶಿ ವಾಸುದೇವ ರಂಗ ಭಟ್ಟ  ಮಧೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಪುರಭವನದಲ್ಲಿ ಜು. 5 ರಿಂದ 7ರವರೆಗೆ ಅಭಿನಂದನೆ, ವಿಚಾರಗೋಷ್ಠಿ, ಗುರು ಸ್ಮರಣೆ ನಡೆಯಲಿದೆ. ಹೊಳ್ಳರ ಅಭಿನಂದನಾ ಗ್ರಂಥ ಹೊರತರಲಾಗುವುದು. ಮೂರು ದಿನಗಳಲ್ಲಿ ಸಿಡಿ ಬಿಡುಗಡೆ, ಆಯ್ದ ಪ್ರಸಂಗ ಸನ್ನಿವೇಶಗಳ ಪ್ರಸ್ತುತಿ, ಯಕ್ಷಗಾನ ತಾಳಮದ್ದಲೆ, ವಿಚಾರಗೋಷ್ಠಿ, ಶಾಸ್ತ್ರೀಯ, ಯಕ್ಷಗಾನೀಯ ತೌಲನಿಕ ಪ್ರಾತ್ಯಕ್ಷಿಕೆ, ಗಾನತಾಳಮದ್ದಲೆ, ತುಳು ಯಕ್ಷಗಾನ, ಸಾಕ್ಷ್ಯಚಿತ್ರ ಪ್ರದರ್ಶನ, ಸಂದರ್ಶನ, ಯಕ್ಷಗಾನ ಪ್ರದರ್ಶನಗಳು ಹೊಳ್ಳರನ್ನು ಕೇಂದ್ರವಾಗಿರಿಸಿ ನಡೆಯಲಿದೆ.
 ಐಎಎಸ್ ಅಧಿಕಾರಿ ಟಿ.ಶ್ಯಾಂ ಭಟ್ ಸಮಿತಿ ಗೌರವಾಧ್ಯಕ್ಷರಾಗಿದ್ದು, 100 ಕ್ಕೂ ಹೆಚ್ಚು ಮಂದಿ ಸಮಿತಿಯಲ್ಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 15 ಲಕ್ಷ ವೆಚ್ಚವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿದ್ಯಾ ಕೂಳ್ಯೂರು, ಸುಧಾಕರ ರಾವ್ ಪೇಜಾವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.