ದಕ್ಷಿಣ ಕನ್ನಡ

ಗ್ಯಾಸ್ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಮಂಗಳೂರು: ಪೆರ್ನೆ ಗ್ಯಾಸ್ ಟ್ಯಾಂಕರ್ ಅಪಘಾತ ಹಾಗೂ ಬೆಂಕಿ ದುರಂತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಓಡಾಡುವ ಗ್ಯಾಸ್ ಟ್ಯಾಂಕರ್‌ಗಳ ಅಭದ್ರತೆ ಕಾರಣ, ಗ್ಯಾಸ್ ಕಂಪನಿಗಳು ಹಾಗೂ ವಿತರಕ ಕುರಿತು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ಯಾಸ್ ಮತ್ತು ಪಡಿತರ ಬಳಕೆದಾರರ ವೇದಿಕೆ ಒತ್ತಾಯಿಸಿದೆ. ಗ್ಯಾಸ್ ತುಂಬಿದ ಸಿಲಿಂಡರ್‌ಗಳನ್ನು ಮನೆಗಳಿಗೆ ಸರಬರಾಜು ಮಾಡುವಾಗ ಹಾಗೂ ಗೋಡೌನ್‌ಗಳಲ್ಲಿ ದಾಸ್ತಾನಿಡುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಿಲ್ಲ. ಈ ಕುರಿತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲವಾಗಿಲ್ಲ ಎಂದು ವೇದಿಕೆ ಅಧ್ಯಕ್ಷ ಧರ್ಮೇಂದ್ರ ಹೇಳಿದ್ದಾರೆ.
ಬೇಡಿಕೆಗಳು: ಗ್ಯಾಸ್ ಟ್ಯಾಂಕರ್‌ಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕು. ಟ್ಯಾಂಕರ್ ನಿರ್ಮಿಸುವಾಗ ಸಮರ್ಪಕ ತಂತ್ರಜ್ಞಾನದೊಂದಿಗೆ ನಿರ್ಮಿಸಿ ಆರ್‌ಟಿಒ ಪ್ರಮಾಣ ಪತ್ರ ಪಡೆಯಬೇಕು. ಸರಕುಗಳನ್ನು ತುಂಬಿಸಿ ಕೊಂಡೊಯ್ಯುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ಯಾಸ್ ದಾಸ್ತಾನು ಗೋಡೌನ್‌ಗಳ ಬಳಿ ಗ್ಯಾಸ್ ಕಂಪನಿ ವತಿಯಿಂದ ಅಗ್ನಿಶಾಮಕ ವ್ಯವಸ್ಥೆ ಹೊಂದಿರಬೇಕು.
ಅಲ್ಪಸಂಖ್ಯಾತರಿಗೆ ಟಿಕೆಟ್: ಅಬೂಬಕ್ಕರ್ ಭರವಸೆ
ಮಂಗಳೂರು: ಕರಾವಳಿಯಲ್ಲಿ ಮುಂದೆ ಸಮರ್ಥ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುವುದು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಅಬೂಬಕ್ಕರ್ ಎನ್.ಬಿ. ಹೇಳಿದ್ದಾರೆ.
 ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಬಿಜೆಪಿ ಸರ್ಕಾರ ಕೊಟ್ಟಷ್ಟು ಅನುದಾನವನ್ನು ಹಿಂದಿನ ಸರ್ಕಾರ ನೀಡಿಲ್ಲ ಎಂದು ಪಟ್ಟಿ ನೀಡಿದರು.
ಧನಂಜಯ್‌ಗೆ ಸವಾಲು: ಬಿಜೆಪಿ ನಾಯಕ ಆಡ್ವಾಣಿ ವಿರುದ್ಧ ಬೇಕಾಬಿಟ್ಟಿ ಮಾತನಾಡಿದ ಕೆಜೆಪಿ ಮುಖಂಡ ಧನಂಜಯ ಕುಮಾರ್ ಮತ್ತೆ ಅವರ ಮಾತನ್ನು ಸಮರ್ಥಿಸಿದ್ದಾರೆ. ಅವರು ತಾಕತ್ತಿದ್ದರೆ ಹಣ ನೀಡಿದ್ದಕ್ಕೆ ದಾಖಲೆ ಬಿಡುಗಡೆ ಮಾಡಲಿ, ತಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಜಿಲ್ಲಾ ವಕ್ತಾರ ಮೋನಪ್ಪ ಭಂಡಾರಿ ಸವಾಲು ಹಾಕಿದರು. ಧನಂಜಯ ಕುಮಾರ್ ಸರಿಯಾಗಿ ಆಲೋಚಿಸಿ ಮಾತನಾಡುವುದು ಕ್ಷೇಮ ಎಂದರು.
ಮುಖಂಡರಾದ ರಹೀಂ ಉಚ್ಚಿಲ್, ರಾಜಗೋಪಾಲ ರೈ, ಅನ್ವರ್ ರಿಕೋ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.