ದಕ್ಷಿಣ ಕನ್ನಡ

'ಕೆಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ'

Published On :

ಮಂಗಳೂರು: ಬಿಎಸ್‌ವೈ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಕೆಜೆಪಿ ಸೇರಿದ್ದೆ. ಆದರೆ ಪಕ್ಷದೊಳಗಿನ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಪಕ್ಷ ತ್ಯಜಿಸುತ್ತಿದ್ದೇನೆ ಎಂದು ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಹೇಳಿದರು. ಗುರುವಾರ ಮಾತನಾಡಿದ ಮರಿಯಮ್ಮ, ಯಡಿಯೂರಪ್ಪ ಬೆಂಗಳೂರಿಗೆ ಕರೆದು ಮಾತನಾಡಿದ್ದರು, ಆಲೋಚನೆ ಮಾಡಿ ಹೇ ಳುತ್ತೇನೆ ಎಂದು ಭರವಸೆ ನೀಡಿ ದ್ದೆ. ಆದರೆ, ಮಂಗಳೂರಿಗೆ ಬರುವುದರೊಳಗೆ ಕೆಜೆಪಿ ಪ್ರಾಥಮಿಕ ಸದಸ್ಯರನ್ನಾಗಿ ಮಾಡಿದ್ದರು. ಕೆಜೆಪಿ ಸೇರಿದ ಬಳಿಕ ಪಕ್ಷದ ಒಳಜಗಳ ಸರಿಮಾಡಲೇ ಕಾಲ ಹರಣವಾಗಿದ್ದರಿಂದ ರಚನಾತ್ಮಕ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಜನರಿಗೆ ಅಪರಿಚಿತರಾಗಿರುವರಿಗೆ ಟಿಕೆಟ್ ನೀಡಲಾಯಿತು. ಪಕ್ಷಕ್ಕೆ ಭವಿಷ್ಯ ಇಲ್ಲದ ಕಾರಣ ಈಗ ಕೆಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊಗೆ ಬೆಂಬಲ ಸೂಚಿಸುತ್ತಿದ್ದೇನೆ, ಲೋಬೊ ಪರ ಪ್ರಚಾರಕ್ಕೆ ತೆರಳುತ್ತೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.