ದಕ್ಷಿಣ ಕನ್ನಡ

ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್‌ಗೆ

Published On :

ಮಂಗಳೂರು: ಮಾಜಿ ಕಾರ್ಪೊರೇಟರ್ ಬಜಿಲಕೇರಿ ಕಮಲಾಕ್ಷ, ಹೋಮ್‌ಸ್ಟೇ ದಾಳಿ ವಿವಾದ ಬಳಿಕ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮೋಹನ್ ಪಡೀಲ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಶರ್ಮಿಳಾ ಡಿ.ಕರ್ಕೆರ, ಪಿ.ಬಿ.ಬಶೀರ್, ಉಮೇಶ್ ಶೆಟ್ಟಿ, ಜಗದೀಶ್ ಸಹಿತ 160ಕ್ಕೂ ಹೆಚ್ಚು ಕಾರ್ಯಕರ್ತರು ಗುರುವಾರ ಕಾಂಗ್ರೆಸ್ ಪಕ್ಷ ಸೇರಿದರು.
ಕದ್ರಿ ಕಾಂಗ್ರೆಸ್ ಚುನಾವಣೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಡಿಸ್ ಸಮ್ಮುಖ ಪಕ್ಷ ಸೇರುವುದೆಂದರೆ ಅದು ನಿಜಕ್ಕೂ ಗೌರವ ವಿಚಾರ. ಪಕ್ಷ ಸೇರಿದ ಬಳಿಕ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಎಲ್ಲರ ಜತೆಗೂಡಿ ಕೆಲಸ ಮಾಡಿಕೊಂಡು ಹೋಗಬೇಕು. ಆಗ ಸೌಹಾರ್ದ ಬೆಳೆಯುತ್ತದೆ ಎಂದರು.
ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆ ಜನಪರವಾಗಿದೆ. ಅಭಿವೃದ್ಧಿ ಸದುದ್ದೇಶದಿಂದ ಇಂತಹ ಪ್ರಣಾಳಿಕೆ ಮಾಡಲಾಗಿದೆ. ಇದನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಜನ ಕಾಂಗ್ರೆಸ್ ಪರವಾಗಿ ಮತಚಲಾಯಿಸುವಂತೆ ಮಾಡಬೇಕು. ಚುನಾವಣೆಯಲ್ಲಿ ಎಸ್‌ಡಿಪಿಐ, ಕೆಜೆಪಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಒಂದು ಮತ ಬಿದ್ದರೆ ಅದು ಬಿಜೆಪಿ ಅಭ್ಯರ್ಥಿಗಳಿಗೆ ಬೀಳುವ ಎರಡು ಮತಗಳಿಗೆ ಸಮ. ಹೀಗಾಗಿ ಜನರು ಆ ಪಕ್ಷಗಳತ್ತ ಆಕರ್ಷಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ನಾವು ಗೆದ್ದರೆ ನಮ್ಮ ಪ್ರಣಾಳಿಕೆ, ಬಿಜೆಪಿ ಗೆದ್ದರೆ ಅವರ ಪ್ರಣಾಳಿಕೆ ಈಡೆರಿಸಲಿ- ಆಸ್ಕರ್: ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಪ್ರಣಾಳಿಕೆಯಲ್ಲಿರುವ ಎಲ್ಲ ವಾಗ್ದಾನ ಪೂರೈಸಲಿದೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಬಿಜೆಪಿಯಿಂದ ಭಟ್ಟಿ ಇಳಿಸಿದ್ದು, ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಆಸ್ಕರ್, ನಾವು ನಕಲು ಮಾಡಿಲ್ಲ. ನಾವು ಗೆದ್ದರೆ ನಮ್ಮ ಪ್ರಣಾಳಿಕೆ ಈಡೇರಿಸುತ್ತೇವೆ. ಬಿಜೆಪಿ ಗೆದ್ದರೆ ಅವರ ಪ್ರಣಾಳಿಕೆ ಜಾರಿಗೆ ತರಲಿ ಎಂದರು. ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ, ಕಾಂಗ್ರೆಸ್ ಜಿಲ್ಲಾ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಆಶ್ರಫ್, ಅರುಣ್ ಕುವೆಲ್ಲೊ, ಎಂ.ಎ.ಗಫೂರ್, ನಾಗೇಂದ್ರ, ಕೃಪಾ ಅಮರ್ ಆಳ್ವ, ಮಾಜಿ ಸಚಿವ ಬಿ.ಎ.ಮೊಯ್ದಿನ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.