ದಕ್ಷಿಣ ಕನ್ನಡ

8 ಕ್ಷೇತ್ರ, 844 ವಾಹನ

Published On :

ಮಂಗಳೂರು: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಕಾರ್ಯಕ್ಕೆ ಒಟ್ಟು 844 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ 3 ಹಂತದಲ್ಲಿ ಚುನಾವಣೆ ನಡೆಯುತ್ತಿತ್ತು. ಈ ಬಾರಿ ಒಂದೇ ಸಲಕ್ಕೆ ಚುನಾವಣೆ ನಡೆಯುವುದರಿಂದ ವಾಹನಗಳನ್ನು ಬಳಸಿಕೊಳ್ಳುವಲ್ಲೂ ಜಿಲ್ಲಾ ಸಾರಿಗೆ ಪ್ರಾಧಿಕಾರ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ.
 ಸೆಕ್ಟರ್ ಅಧಿಕಾರಿಗಳಿಗೆ 24 ಕಾರುಗಳನ್ನು ನೀಡಲಾಗಿದೆ. ಅಧಿಕಾರಿಗಳಿಗೆ ವಾಹನ ನೀಡುವ ಪ್ರಕ್ರಿಯೆ ಏ.21ರಿಂದ ಶುರುವಾಗಿದೆ. ಚುನಾವಣೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಒಟ್ಟು 570 ವಾಹನ ಕೊಡಲಾಗುತ್ತಿದೆ. ಮೇ 4 ಮತ್ತು 5ರಂದು ಈ ವಾಹನಗಳು ಬಳಕೆಯಾಗಲಿವೆ.
ಶಾಲಾ ವಾಹನಗಳಿಗೆ ಒತ್ತು: ಈ ಬಾರಿ ಶಾಲಾ ವಾಹನಗಳಿಗೆ ಒತ್ತು ನೀಡಲಾಗಿದೆ. 56 ಶಾಲಾ ವಾಹನಗಳು ಚುನಾವಣೆ ಕಾರ್ಯಕ್ಕೆ ತೆರಳಲಿದೆ. 90 ಕೆಎಸ್‌ಆರ್‌ಟಿಸಿ ಬಸ್‌ಗಳು, 110 ಖಾಸಗಿ ಬಸ್‌ಗಳು ಸೇರಿ ಒಟ್ಟು 256 ಬಸ್, 128 ಮ್ಯಾಕ್ಸಿಕ್ಯಾಬ್, 9 ಮಿನಿ ಬಸ್, 111 ಜೀಪು, ಕ್ಷೇತ್ರಕ್ಕೆ ತಲಾ 2ರಂತೆ ಮತಯಂತ್ರ ಸಾಗಾಟಕ್ಕೆ 16 ಲಾರಿ ನಿಗದಿಪಡಿಸಲಾಗಿದೆ. 14 ವಾಟರ್ ಟ್ಯಾಂಕರ್ ಇರಲಿದೆ.
ಪೊಲೀಸರಿಗೆ 274 ವಾಹನ: ಭದ್ರತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಪೊಲೀಸ್ ಇಲಾಖೆಗೆ 274 ವಾಹನ ನೀಡಲಾಗುತ್ತಿದೆ. ಈಗಾಗಲೇ ಅರೆ ಸೇನಾ ಪಡೆ ಯೋಧರು ಆಗಮಿಸಿರುವುದರಿಂದ ಅವರ ಓಡಾಟಕ್ಕೆ ಪ್ರತ್ಯೇಕ ವಾಹನ ಕೊಡಲಾಗಿದೆ. 206 ಜೀಪು, 60 ಟ್ರಕ್, 8 ಮಿನಿ ವ್ಯಾನ್ ಸೇರಿ ಒಟ್ಟು 274 ವಾಹನ ನೀಡಲಾಗಿದೆ. ಹಳದಿ ನಾಮಫಲಕ ಇರುವ ಖಾಸಗಿ ಟೂರಿಸ್ಟ್ ವಾಹನಗಳನ್ನು ಮಾತ್ರ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ತರಹೇವಾರಿ ವಾಹನಗಳಿಗೆ ಆಯೋಗವೇ ಬಾಡಿಗೆ ನಿಗದಿಪಡಿಸಿದೆ.

ಚುನಾವಣೆ ಬಳಿಕ ಬಾಕಿ ಪಾವತಿ: ಆರ್‌ಟಿಒ
ಈಗ ಹಂಚಿಕೆ ಮಾಡಿರುವುದಕ್ಕಿಂತ ಹೆಚ್ಚಿನ ವಾಹನ ಬೇಕಾದಲ್ಲಿ ಅದನ್ನು ಪೂರೈಸಲು ಸಾರಿಗೆ ಪ್ರಾಧಿಕಾರ ಸಿದ್ಧವಿದೆ. ಸ್ಥಳೀಯಾಡಳಿತ ಚುನಾವಣೆಗೆ ಬಳಸಲಾದ ವಾಹನಗಳಿಗೆ ಇನ್ನಷ್ಟೆ ಬಾಡಿಗೆ ಪಾವತಿಸಬೇಕು. ಸ್ಥಳೀಯಾಡಳಿತ ಚುನಾವಣೆ ಮುಕ್ತಾಯವಾಗುತ್ತಲೇ ವಿಧಾನಸಭಾ ಚುನಾವಣೆ ಘೋಷಣೆಯಾದ್ದರಿಂದ ನೀತಿಸಂಹಿತೆ ಹಿನ್ನಲೆಯಲ್ಲಿ ಬಾಡಿಗೆ ಮೊತ್ತವನ್ನು ಆಯೋಗ ಬಿಡುಗಡೆ ಮಾಡಿಲ್ಲ. ಚುನಾವಣೆ ಮುಗಿದ ಕೂಡಲೇ ಬಾಕಿ ಮೊತ್ತ ನೀಡಲಾಗುವುದು ಎಂದು ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.