ದಕ್ಷಿಣ ಕನ್ನಡ

ಹಿನ್ನೆಲೆ ಅರಿತು ಮತ ನಿರ್ಧರಿಸಬೇಕು

Published On :

ಜನಸಾಮಾನ್ಯನಿಗೆ ಯಾರನ್ನು ಆರಿಸಬೇಕು ಎಂಬ ಗೊಂದಲ ಆರಂಭವಾದಂತಿದೆ. ಅನೇಕ ಬಾರಿ ಕನಿಷ್ಠ ಅರ್ಹತೆ ಇಲ್ಲದಿರುವ ಅಭ್ಯರ್ಥಿಗಳು ಆರಿಸಿ ಬರುತ್ತಿದ್ದಾರೆ. ಇಂತಹ ಸಮಯದಲ್ಲಿ ಮತದಾರ ಅಭ್ಯರ್ಥಿಯ ವಯಸ್ಸು, ವಿದ್ಯಾರ್ಹತೆ, ರಾಜಕೀಯದಲ್ಲಿ ಆತನಿಗಿರುವ ಅನುಭವ, ಆತನ ಕ್ರಿಮಿನಲ್ ಹಿನ್ನೆಲೆ, ತೆರಿಗೆ ಪಾವತಿ ಇತ್ಯಾದಿ ಕೆಲವೊಂದು ಅಂಶಗಳನ್ನಾದರೂ ತಿಳಿದು ಯೋಗ್ಯ ಯಾರು, ಆಯೋಗ್ಯ ಯಾರು ಎನ್ನುವುದನ್ನು ನಿರ್ಧರಿಸಬೇಕು. ಯಾವುದೇ ಕಾರಣಕ್ಕೆ ಮತದಾರರು ತಮ್ಮ ಅಮೂಲ್ಯ ಮತವನ್ನು ಚಲಾಯಿಸದೇ ಇರುವುದು ಸರಿಯಲ್ಲ. ಮತ ಹಾಕದೇ ಚುನಾವಣೆ ಮುಗಿದ ನಂತರ ಕೆಟ್ಟ ಅಭ್ಯರ್ಥಿ ಆಯ್ಕೆಯಾಗಿದ್ದಾನೆ ಎಂದು ಟೀಕಿಸುವುದರ ಬದಲು, ಚುನಾವಣೆಯ ದಿನ ಮತಗಟ್ಟೆಗೆ ಹೋಗಿ ಮತವನ್ನು ನೀಡಿ, ಯೋಗ್ಯ ವ್ಯಕ್ತಿಯನ್ನು ಆರಿಸಿ ಆವರ ಕೈಗೆ ಆಡಳಿತವನ್ನು ನೀಡಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.
- ಎಚ್.  ಶಾಂತರಾಜ್  ಐತಾಳ್, ಸಾಹಿತಿ
ಕೆಲವೊಮ್ಮೆ ಸಂಹಿತೆ ಅತಿರೇಕ ಎನಿಸುವುದು
ರಾಷ್ಟ್ರ, ರಾಜ್ಯದ ಹಿತಾಸಕ್ತಿಗಾಗಿ ಹಾಗೂ ಆತ್ಮಸಾಕ್ಷಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವುದು ಕಡ್ಡಾಯ. ಮತದಾನ ಮಾಡದ ಪ್ರಜೆ ಬದುಕುವ ಹಕ್ಕು ಕಳೆದುಕೊಂಡಂತೆ, ಪ್ರಜಾಪ್ರಭುತ್ವ ನೆಲೆಯಲ್ಲಿ ಜಡತ್ವದ ಸಂಕೇತ. ಸೃಜನ ಪಕ್ಷಪಾತ ಮೌಲ್ಯ ಕಳೆದುಕೊಂಡ ವಾತಾವರಣ ಸೃಷ್ಟಿಯಾಗಿದ್ದು, ಇವುಗಳನ್ನು ಹೊಡೆದೊಡಿಸಲು ಸೂಕ್ತ ವ್ಯಕ್ತಿಯನ್ನು ಆರಿಸುವುದು ಮತದಾರರ ಕರ್ತವ್ಯ. ನಾನು ಸಣ್ಣವನಿದ್ದಾಗ ಚುನಾವಣೆ ಎಂದರೆ ಉತ್ಸವದ ಎಂಬ ಅನುಭವವಾಗುತ್ತಿತ್ತು. ಆದರೆ ಇಂದು  ಭ್ರಷ್ಟಾಚಾರ, ಅವ್ಯವಹಾರಗಳ ದಾಳಿಯಿಂದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದು ಉತ್ತಮ ಎನಿಸಿದರೂ, ಕೆಲವೊಂದು ಬಾರಿ ಅತಿರೇಕ ಎನಿಸುತ್ತದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
-ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.