ಮಂಗಳೂರಿನಲ್ಲಿ ಶೂಟೌಟ್: ಉದ್ಯಮಿ ಕೊಲೆಗೆ ಯತ್ನ
ಮಂಗಳೂರು: ನಗರದಲ್ಲಿ ಭೂಗತ ಜಗತ್ತಿನ ಮಾಫಿಯಾಗಳಿಂದ ಮತ್ತೆ ಗುಂಡಿನ ಸದ್ದು ಮೊಳಗಿಸಿದೆ. ಬಲ್ಲಾಳ್ಬಾಗ್ ವೇರ್ಹೌಸ್ ರಸ್ತೆಯಲ್ಲಿ ಸ್ಕಾರ್ಪಿಯೊದಲ್ಲಿ ತೆರಳುತ್ತಿದ್ದ ಉದ್ಯಮಿಯ ಮೇಲೆ ವಿಕ್ಕಿ ಶೆಟ್ಟಿ ಗ್ಯಾಂಗ್ನ ಬಾಡಿಗೆ ಹಂತಕರು ಗುಂಡಿಕ್ಕಿದ್ದು, ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಕ್ತಿನಗರದಲ್ಲಿ ಫ್ಯಾಕ್ಟರಿ ಹೊಂದಿರುವ ವಿಜಯೀಂದ್ರ ಭಟ್ ಸ್ಕಾರ್ಪಿಯೊದಲ್ಲಿ ಶುಕ್ರವಾರ ಮಣ್ಣಗುಡ್ಡದಿಂದ ವೇರ್ಹೌಸ್ ಮಾರ್ಗವಾಗಿ ರಥಬೀದಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಸಂಜೆ 6.15ಕ್ಕೆ ವೇರ್ಹೌಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು, ಪಿಸ್ತೂಲ್ನಿಂದ ಸ್ಕಾರ್ಪಿಯೋ ಚಾಲಕನ ಬದಿಯ ಡೋರ್ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಗುಂಡು ಡೋರ್ ಬೀಡಿಂಗ್ಗೆ ತಾಗಿ ದಿಕ್ಕು ಬದಲಿಸಿದೆ. ಡೋರ್ನ ಗಾಜುಗಳು ಪುಡಿಯಾಗಿದೆ.
ಮೊರಾರ್ಜಿ ವಸತಿ ಶಾಲೆ ಮಕ್ಕಳು ಅಸ್ವಸ್ಥ
ಹರಪನಹಳ್ಳಿ: ಕಲುಷಿತ ನೀರು ಅಥವಾ ವಿಷ ಆಹಾರ ಸೇವನೆಯಿಂದ 22 ಬಾಲಕಿಯರು ವಾಂತಿ -ಭೇದಿಯಿಂದ ಅಸ್ವಸ್ಥಗೊಂಡ ಘಟನೆ ತಾಲೂಕಿನ ನಜೀರ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದಿದೆ. 6, 7 ಹಾಗೂ 8ನೇ ತರಗತಿ ಓದುತ್ತಿರುವ ಶಿಲ್ಪ, ಲಕ್ಷ್ಮೀ, ಕಾವ್ಯ, ಸಂಗೀತಾ, ದೀಪಾ ಸೇರಿದಂತೆ 22 ಮಕ್ಕಳು ಅಸ್ವಸ್ಥಗೊಂಡಿದ್ದು, ಇವರಲ್ಲಿ 18 ಮಕ್ಕಳಿಗೆ ಗ್ಲುಕೋಸ್ ನೀಡಲಾಗುತ್ತಿದೆ. ಉಳಿದವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಗುರುವಾರ ಸಂಜೆ ಅನ್ನ ಹಾಲು ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿತು. ನರ್ಸ್ಗೆ ಹೇಳಿದೆವು, ಅವರು ಗುಳಿಗೆ ಕೊಟ್ಟರೂ ಕಡಿಮೆ ಆಗಲಿಲ್ಲ, ಶುಕ್ರವಾರ ಬೆಳಗ್ಗೆ ವಾಂತಿ ಆಯಿತು. ಅದಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದರು ಎನ್ನುತ್ತಾಳೆ ಅಸ್ವಸ್ಥೆ ಭೂಮಿಕಾ.
ಕಲುಷಿತ ಆಹಾರ ಅಥವಾ ಕಲುಷಿತ ನೀರಿನಿಂದ ಈ ರೀತಿ ಆಗಿರಬಹುದು, ಅಪಾಯವಿಲ್ಲ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೇಣುಗೋಪಾಲ ದೇಶಪಾಂಡೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

