ದಕ್ಷಿಣ ಕನ್ನಡ

ಕಟೀಲು ದೇವಳದಲ್ಲಿ ಗ್ರಾಮಸ್ಥರಿಂದ ಪ್ರಮಾಣ

Published On :

ಮೂಲ್ಕಿ:  ಯಾವುದೇ ಬೆಲೆ ತೆತ್ತಾದರೂ ಕಟೀಲು ದೇವಳ, ನಂದಿನಿ ನದಿ, ಅಪಾರ ಕೃಷಿ ಭೂಮಿಯನ್ನು ಉಳಿಸಲು ನಿಡ್ಡೋಡಿ ಸ್ಥಾವರದ ವಿರುದ್ಧ ಹೋರಾಡುವುದಾಗಿ ಸ್ಥಳೀಯರು ಕಟೀಲು ದೇವಳದಲ್ಲಿ ಭಾನುವಾರ ಪ್ರಮಾಣ ಮಾಡಿದರು.  ನಿಡ್ಡೋಡಿಯಲ್ಲಿ ಸುಮಾರು 2,000 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸುಮಾರು 4,000 ಮೆಗಾ ವ್ಯಾಟ್ ಸಾಮಾರ್ಥ್ಯದ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದ್ದು, ಭಾನುವಾರ ಕಟೀಲಿನಲ್ಲಿ ಜರಗಿದ ಬೃಹತ್ ಸಭೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಪಕ್ಷಬೇಧ ಮರೆತು ಇದರ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ. ಹೋರಾಟದ ಕುರಿತು ಮಂಗಳವಾರ ಸಂಜೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. ಮುಂದಿನ ವಾರದಲ್ಲಿ ನಿಡ್ಡೋಡಿಯ ಬಂಗೇರ ಪದವಿನಲ್ಲಿ ಸಭೆಯನ್ನು ಸ್ಥಾವರದಿಂದ ಆಗುವ ಅನಾಹುತದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕಾರ್ಯ ನಡೆಯಲಿದ್ದು, ಹೋರಾಟಕ್ಕೆ ಅರ್ಚಕರ ಸಮಿತಿ, ಭಕ್ತರ ಸಮಿತಿ ಹಾಗೂ ಗ್ರಾಮಸ್ಥರ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.