ಉಪ ಚುನಾವಣೆ; ಇಂದು ಮತ ಎಣಿಕೆ
ಪುತ್ತೂರು: ತಾಲೂಕಿನಲ್ಲಿ ಆ.4 ರಂದು ನಡೆದ ಗ್ರಾಪಂ 5 ಸ್ಥಾನಗಳಿಗೆ ಉಪಚುನಾವಣೆಯ ಎಣಿಕೆ ಕಾರ್ಯ ಆ.7ರಂದು ಬೆಳಗ್ಗೆ 8 ಗಂಟೆಗೆ ಎಣಿಕೆ ಕಾರ್ಯಕ್ರಮ ತಾಲೂಕು ಕಚೇರಿಯಲ್ಲಿ ನಡೆಯಲಿದೆ.
ತಾಲೂಕು ಕಚೇರಿಯಲ್ಲಿ ಎರಡು ಮೇಜುಗಳಲ್ಲಿ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಇದರ ನಿರ್ವಹಣೆಗಾಗಿ ಟೇಬಲ್ ಒಂದಕ್ಕೆ 3 ಮಂದಿಯನ್ನು ನೇಮಕ ಮಾಡಲಾಗಿದೆ. ಇಬ್ಬರು ಸಹಾಯಕರು ಹಾಗೂ ಒಬ್ಬರು ಡಿ ಗ್ರೂಪ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಒಬ್ಬರು ಸೂಪರ್ವೈಸರ್ ನೇಮಿಸಲಾಗಿದ್ದು, ಒಟ್ಟು 7 ಮಂದಿ ಈ ಎಣಿಕೆ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಒಂದಕ್ಕಿಂತ ಹೆಚ್ಚು ಮತದಾನ ಕೇಂದ್ರಗಳಿರುವ ಮತ ಪೆಟ್ಟಿಗೆಗಳನ್ನು ಮೊದಲು 25ರ ಬಂಡಲ್ ಮಾಡಿ ನಂತರ ಎಣಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ಎಣಿಕೆ ಕಾರ್ಯದ ಮೇಲುಸ್ತುವಾರಿವಹಿಸಿರುವ ತಹಸೀಲ್ದಾರ್ ಕುಳ್ಳೇ ಗೌಡ ಎಂ.ಟಿ ತಿಳಿಸಿದ್ದಾರೆ. ಈ ಉಪ ಚುನಾವಣೆಯಲ್ಲಿ ಸವಣೂರು ಗ್ರಾಪಂನ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆದಿದ್ದು, ಇಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಾರಿಜಾ, ಬಿಜೆಪಿ ಬೆಂಬಲಿತರಾಗಿ ರೇಖಾ ಹಾಗೂ ಎಸ್ಡಿಪಿಐ ಬೆಂಬಲಿತರಾಗಿ ಸಬೀನಾ ಸ್ಪರ್ಧೆಯಲ್ಲಿದ್ದರು. ಕಾಣಿಯೂರು ಗ್ರಾಪಂನಲ್ಲಿ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಪುಷ್ಪಾವತಿ ಹಾಗೂ ಬಿಜೆಪಿ ಬೆಂಬಲಿತರಾಗಿ ಸುಮಿತ್ರಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಕಬಕ ಗ್ರಾಪಂನಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತರಾಗಿ ಸವಿತಾ ಹಾಗೂ ಬಿಜೆಪಿ ಬೆಂಬಲಿತರಾಗಿ ಶಶಿಕಲಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಅರಿಯಡ್ಕ ಗ್ರಾಪಂನ ಎರಡು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರಾಗಿ ನಾಗಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತೆ ಯಶೋಧಾ ನಡುವೆ ನೇರ ಸ್ಪರ್ಧೆ ಹಾಗೂ ಮಾಡ್ನೂರು ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತೆ ರತ್ನಾವತಿ ಮತ್ತು ಬಿಜೆಪಿ ಬೆಂಬಲಿತೆ ಸುಮತಿ ನಡುವೆ ನೇರ ಸ್ಪರ್ಧೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

