ದಕ್ಷಿಣ ಕನ್ನಡ

ಅವ್ಯವಸ್ಥೆ ಆಗರ- ಮೂಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿ

Published On :

ಮೂಲ್ಕಿ: ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಮೂಲ್ಕಿಯ ಸಬ್ ರಿಜಿಸ್ಟ್ರಾರ್ ಕಚೇರಿಯ ಕಟ್ಟಡ ಶತಮಾನಕ್ಕೂ ಹಳೆಯದಾಗಿದ್ದು ಇಂದಿಗೂ ಯಾವುದೇ ದುರಸ್ತಿ ಕಾಣದೇ ಕಾರ್ಯ ನಿವರ್ಹಿಸುತ್ತಿದೆ.
ಕಟ್ಟಡ ಹಳೆಯ ಕಾಲದ ಒಳಗಿಂದ ಒಂದು ಹಾಗೂ ಹೊರಗಿಂದ ಒಂದು ಸೇರಿದಂತೆ ಎರಡು ಹಂಚುಗಳನ್ನು ಹೊಂದಿರುವ ಛಾವಣಿ ಹೊಂದಿದ್ದು ಗಟ್ಟಿ ಮುಟ್ಟಾದ ಮರಗಳ ಜಂತಿಗಳಿಂದ ಕೂಡಿದೆ. ಆದರೆ ಕಟ್ಟಡದ ಗೋಡೆ ಮಾತ್ರ ಬಿರುಕು ಬಿಡಲು ಆರಂಭಿಸಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮಂಗಳೂರಿನಿಂದ ಉಡುಪಿಯವರೆಗೆ ಇಲ್ಲಿ ನೋಂದಾವಣೆ ನಡೆಯುತ್ತಿದ್ದು ಮೂಲ್ಕಿಯಲ್ಲಿ ಬಂದರು ಇದ್ದುದರಿಂದ ಹೆಚ್ಚಿನ ಕಾರ್ಯ ಚಟುವಟಿಕೆಯಿಂದ ಕೂಡಿತ್ತು. ಸ್ವಾತಂತ್ರ್ಯದ ಬಳಿಕ ರಾಜ್ಯದಲ್ಲಿ ಹಲವಾರು ಸರ್ಕಾರಗಳು ಬಂದರೂ ಇಲ್ಲಿನ ಕಚೇರಿ ಯಾವುದೇ ದುರಸ್ತಿ ಕಂಡಿಲ್ಲ.
ಉದ್ಘಾಟನೆ ಕಾಣದ ಹೊಸ ಕಟ್ಟಡ: ಆಧುನಿಕ ತಂತ್ರಜ್ಞಾನದ ಫಲವಾಗಿ ಕಂಪ್ಯೂಟರ್‌ಗಳು ಬಂದಿದ್ದು ಈಗ ಆನ್‌ಲೈನ್‌ನಲ್ಲಿ ನೋಂದಣಿ ಕಾರ್ಯ ನಡೆಯುತ್ತಿದೆ. ಸರ್ಕಾರದ ಅನುದಾನದಲ್ಲಿ ಹತ್ತು ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಉದ್ಘಾಟನೆಗೊಂಡಿಲ್ಲದ ಕಾರಣ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿಲ್ಲ.
ಮೂಲ್ಕಿ, ಮುಂಡ್ಕೂರು, ಸಂಕಲಕರಿಯ, ಕಿನ್ನಿಗೋಳಿ, ಹಳೆಯಂಗಡಿ, ಕಟೀಲು, ಸುರತ್ಕಲ್ ಸೇರಿದಂತೆ ಹೆಚ್ಚಿನ ಪ್ರದೇಶದವರು ತನ್ನ ಜಾಗದ ನೋಂದಣಿಗೆ ಇಲ್ಲಿಗೆ ಬರುತ್ತಿದ್ದು ಇಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ, ಕಚೇರಿ ಸಿಬ್ಬಂದಿಗೂ ಶೌಚಾಲಯವಿಲ್ಲ.
ಯಾವುದೇ ವ್ಯವಸ್ಥೆಯಿಲ್ಲ: ಮಳೆ ಬಂದರೆ ಹೊರಗೆ ಯಾವುದೇ ವ್ಯವಸ್ಥೆಯಿಲ್ಲದಿದ್ದು ಕೊಡೆ ಹಿಡಿದುಕೊಂಡು ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ. ಬಾಯಾರಿಕೆಯಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಾಯಾರಿಕೆಯಾದರೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ನೀರಿನ ಟ್ಯಾಂಕ್ ಇದ್ದು ಅದ್ದು ಬೀಳುವ ಸ್ಥಿತಿಯಲ್ಲಿದೆ. ಕೋಟ್ಯಂತರ ಮೌಲ್ಯದ ದಾಖಲೆಗಳು ಇಲ್ಲಿದ್ದು ಅದರೆ ಭದ್ರತೆಗೆ ಯಾವುದೇ ಸಿಬ್ಬಂದಿಯಿಲ್ಲ. ಪ್ರತಿದಿನಕ್ಕೆ ಲಕ್ಷಾಂತರ ರು. ಆದಾಯವಿರುವ ಇಲ್ಲಿ ಆನ್‌ಲೈನ್ ಆಗುವ ಮುಂಚೆ ಪ್ರತಿದಿನಕ್ಕೆ 40 ನೋಂದಣಿ ನಡೆಯುತ್ತಿದ್ದು ಆನ್‌ಲೈನ್ ಆದ ಬಳಿಕ ಕೇವಲ 15 ಮಾತ್ರ ನಡೆಯುತ್ತಿದೆ. ಈಗ ಟೋಕನ್ ನೀಡುವ ಪದ್ಧತಿ ಜಾರಿಯಲ್ಲಿದ್ದು ಸೆಪ್ಟಂಬರ್ ತಿಂಗಳ ಕೊನೆಯವರೆಗೆ ಈಗಾಗಲೇ ಟೋಕನ್ ನೀಡಿಯಾಗಿದೆ.
ಜನರಿಗೆ ಸಮಸ್ಯೆಯಾಗಿರುವ 9ನೇ ಮತ್ತು 11ನೇ ಅರ್ಜಿ ನಮೂನೆ ಸದ್ಯದಲ್ಲಿ ಬಗೆಹರಿಯಲಿದ್ದು ಟೋಕನ್ ವ್ಯವಸ್ಥೆಯಿಂದಾಗಿ ಜನ ತಮ್ಮ ಜಾಗದ ಮಾರಾಟದ ಬಗ್ಗೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಶಾಸಕರು ಈಗ ಸಚಿವರಾಗಿದ್ದು ಇಲ್ಲಿನ ಸಮಸ್ಯೆ ಬಗ್ಗೆ ವಕೀಲರು ಸಚಿವರ ಗಮನಕ್ಕೆ ತಂದಿದ್ದು ಅವರು ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ.
ಮಳೆ ಬಂದರೆ ಹೊರಗೆ ಯಾವುದೇ ವ್ಯವಸ್ಥೆಯಿಲ್ಲದಿದ್ದು ಕೊಡೆ ಹಿಡಿದುಕೊಂಡು ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ. ಬಾಯಾರಿಕೆಯಾದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಾಯಾರಿಕೆಯಾದರೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ನೀರಿನ ಟ್ಯಾಂಕ್ ಇದ್ದು ಅದ್ದು ಬೀಳುವ ಸ್ಥಿತಿಯಲ್ಲಿದೆ. ಕೋಟ್ಯಂತರ ಮೌಲ್ಯದ ದಾಖಲೆಗಳು ಇಲ್ಲಿದ್ದು ಅದರೆ ಭದ್ರತೆಗೆ ಯಾವುದೇ ಸಿಬ್ಬಂದಿಯಿಲ್ಲ. ಪ್ರತಿದಿನಕ್ಕೆ ಲಕ್ಷಾಂತರ ರು. ಆದಾಯವಿರುವ ಇಲ್ಲಿ ಆನ್‌ಲೈನ್ ಆಗುವ ಮುಂಚೆ ಪ್ರತಿದಿನಕ್ಕೆ 40 ನೋಂದಣಿ ನಡೆಯುತ್ತಿದ್ದು ಆನ್‌ಲೈನ್ ಆದ ಬಳಿಕ ಕೇವಲ 15 ಮಾತ್ರ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.