ಕೊಳೆರೋಗ ಆತಂಕ ಪರಿಹಾರ ಯತ್ನ: ಸಚಿವ ರೈ
ಮಂಗಳೂರು: ಜಿಲ್ಲೆಯಲ್ಲಿ ಅಡಕೆ ತೋಟದಲ್ಲಿ ಕಾಣಿಸಿದ ಕೊಳೆರೋಗದಿಂದ ಕೃಷಿಕರು ಆತಂಕದಲ್ಲಿರುವುದು ಗಮನಕ್ಕೆ ಬಂದಿದೆ. ಕೊಳೆರೋಗ ಪರಿಹಾರಕ್ಕೆ ಸರ್ಕಾರ ಪ್ರಯತ್ನಿಸಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ಗೇರುಬೆಳೆ ಪುನಶ್ಚೇತನ ಹಾಗೂ ಜೇನುಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರ ಸಮಸ್ಯೆಯನ್ನು ರೈತರೇ ಪರಿಹರಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಹೆಚ್ಚು ಮಳೆಯಿಂದ ಅಡಕೆಗೆ ಕೊಳೆರೋಗ ಕಾಣಿಸಿದೆ. ಈ ಬಗ್ಗೆ ರೈತರಿಗಾದ ತೊಂದರೆಯನ್ನು ಸರ್ಕಾರದ ಗಮನಕ್ಕೆ ತರವಾಗುವುದು ಎಂದರು. ಜಿಲ್ಲೆಯಲ್ಲಿ ಬತ್ತದ ಕೃಷಿ ತೋಟಗಾರಿಕಾ ಬೆಳೆಗೆ ಪರಿವರ್ತನೆಯಾಗುತ್ತಿದೆ. ಬತ್ತದ ಬದಲು ಅಡಕೆ, ತೆಂಗು, ಗೇರು, ರಬ್ಬರ್, ಕಾಳುಮೆಣಸು, ಕೋಕೋ, ವೆನಿಲ್ಲಾ ಮುಂತಾದ ಆರ್ಥಿಕ ಬೆಳೆಯತ್ತ ರೈತರು ಮುಖಮಾಡಿದ್ದಾರೆ. ಸಣ್ಣ ಹಿಡುವಳಿದಾರರಿಗೆ ಬದುಕಲು ತೋಟಗಾರಿಕಾ ಬೆಳೆ ಅನಿವಾರ್ಯವಾಗಿದೆ ಎಂದರು.
ಗೇರು ಕೃಷಿಗೆ ಒತ್ತು: ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ, ಜನರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಇದಕ್ಕೆ ಇಲಾಖೆಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕು. ಬೇಕಾದಷ್ಟು ಗೇರು ತಳಿ ಇರುವಾಗ ಗೇರು ಬೀಜ ಆಮದು ಮಾಡಲಾಗುತ್ತಿದೆ. ಹಾಗಾಗಿ ಗೇರು ಬೆಳೆಸಲು ಒತ್ತು ನೀಡಬೇಕು ಎಂದರು.
ಸಾಂಪ್ರದಾಯಿಕ ಕೃಷಿ ಮಾಡಿ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಮಾತನಾಡಿ, ಯಾಂತ್ರೀಕೃತ ಕೃಷಿಯಿಂದ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಆದ್ದರಿಂದ ಸಾಂಪ್ರದಾಯಿಕ ಕೃಷಿ ಜತೆಗೆ ಉಪ ಬೆಳೆಗಳಿಗೆ ಆದ್ಯತೆ ಕೊಡಬೇಕು. ಈಗ ಉದ್ಯೋಗ ಖಾತರಿ ಯೋಜನೆಯಲ್ಲಿ 'ಕಾಯಕಸಂಘ' ರಚಿಸಿ 15-10 ಗುಂಪಿಗೆ ತ್ವರಿತಕೆಲಸ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ತೋಟಗಾರಿಕಾ ಸಂಚಿಕೆ ಹಾಗೂ ಇಲಾಖಾ ಕಾರ್ಯಕ್ರಮಗಳ ಕೈಪಿಡಿಯನ್ನು ಜಿ.ಪಂ.ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಹಾರ್ಟಿ ಕ್ಲಿನಿಕ್ ಸಂಚಿಕೆಯನ್ನು ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ, ಗೇರು ಪುನಶ್ಚೇತನ ಕೈಪಿಡಿಯನ್ನು ಶಿಕ್ಷಣ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಬಿಡುಗಡೆಗೊಳಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್ ಹಾಜರಿದ್ದರು. ಬಳಿಕ ತಜ್ಞರಿಂದ ವಿಚಾರಗೋಷ್ಠಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

