ಮಾರಕ ಯೋಜನೆಗಳಿಗೆ ಅವಕಾಶಬೇಡ: ಆಗ್ರಹ
ಮಂಗಳೂರು: ಕರಾವಳಿ ಪ್ರದೇಶದಲ್ಲಿ ಬಿದ್ದ ಮಳೆ ನೀರನ್ನು ಬೆಂಗಳೂರು, ಕೋಲಾರಕ್ಕೆ ಸಾಗಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ ಎಂದು ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ ಅಧ್ಯಕ್ಷ ಮಂಚಿ ಶ್ರೀನಿವಾಸ್ ಆಚಾರ್ ಹೇಳಿದ್ದಾರೆ.
ಕೋಟಿಗಟ್ಟಲೆ ವೆಚ್ಚದಿಂದ ನಿರ್ಮಾಣಗೊಳಿಸುವ ಎತ್ತಿನಹೊಳೆ ಯೋಜನೆಯ ನೀರು ಕೋಲಾರಕ್ಕೆ ತಲುಪುವ ವಿಶ್ವಾಸವಿಲ್ಲ. ಆದ್ದರಿಂದ ಸರ್ಕಾರ ಅಂತರ್ಜಲ ವೃದ್ಧಿ ಮಾಡುವಂಥ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಎಂಡೋಸಲ್ಫಾನ್ ಹೇಳಿಕೆಗೆ ಖಂಡನೆ: ಕೇರಳ ಮತ್ತು ಕರ್ನಾಟಕದ ಕೊಕ್ಕಡ ಪಟ್ರಮೆ ಮೊದಲಾದ ಪ್ರದೇಶಗಳಲ್ಲಿ ಗೇರು ತೋಟಗಳಿಗ ಸಿಂಪಡಿಸಿದ ಎಂಡೋಸಲ್ಫಾನ್ ವಿಷದಿಂದ ಆ ಪ್ರದೇಶದ ಜನರಿಗೆ ಅಂಗವೈಕಲ್ಯ ಬಂದುದಲ್ಲ ಎಂದಿರುವ ಸರ್ಕಾರದ ಹೇಳಿಕೆ ಖಂಡನೀಯ.
ಎಂಡೋಸಲ್ಫಾನ್‌ನಿಂದ ಅಂಗವೈಕಲ್ಯ ಬಂದಿಲ್ಲ ಎಂದಾದರೆಸರ್ಕಾರ ಸಂಶೋಧನೆ ನಡೆಸಲಿ. ಜವಾಬ್ದಾರಿಯುತವಾಗಿ ಸ್ಪಂದಿಸಲಿ. ಸರ್ಕಾರದ ನುಣುಚಿಕೊಳ್ಳುವ ಪ್ರವೃತ್ತಿಯನ್ನು ಜನರ ಕ್ಷಮಿಸಲಾರರು. ಎಂಡೋಬಾಧಿತರಿಗೆ ಸಿಗುವ ಸೌಲಭ್ಯ ಪಾರದರ್ಶಕವಾಗಿರಲಿ ಎಂದು ಆಗ್ರಹಿಸಿದ್ದಾರೆ.
ಕರಾವಳಿಗೆ ಯೋಜನೆ ಬೇಡ: ಈಗಾಗಲೇ ಪಣಂಬೂರಿನಲ್ಲಿ ಎಂಆರ್‌ಪಿಎಲ್ ಪೆಟ್ರೋಲಿಯಂ ಉತ್ಪನ್ನಗಳ ಪೈಪ್‌ಲೈನ್ ಮತ್ತು ಯುಪಿಸಿಎಲ್ ಸ್ಥಾಪನೆಯಿಂದ ಕರಾವಳಿ ಪ್ರದೇಶದ ಪರಿಸರ ನಾಶಗೊಂಡಿದೆ. ಇದಕ್ಕೆ ಅನುಗುಣವಾಗಿ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಿ ಎಕರೆಗಟ್ಟಲೆ ಕೃಷಿ ಭೂಮಿ ನಾಶಗೊಳಿಸಲಾಗುತ್ತಿದೆ. ಇಂಥ ಯೋಜನೆ ಮೂಲಕ ಜನರ ಬದುಕನ್ನು ಹೊಸಕಿ ಹಾಕುವ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
16ರಿಂದ ಮೂಳೆ ತಪಾಸಣೆ ಶಿಬಿರ
ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆ. 16 ರಿಂದ ಸೆ. 14 ರವರೆಗೆ ಆಸ್ಪತ್ರೆಯಲ್ಲಿ 'ಆಸ್ಟಿಯೊಪೊರೋಸಿಸ್ ತಪಾಸಣೆ ಶಿಬಿರ' ನಡೆಯಲಿದೆ. ಆಸ್ಟಿಯೊಪೊರೋಸಿಸ್ ತೊಂದರೆ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡುಬರುತ್ತದೆ. ಮೂಳೆಯ ಖನಿಜಾಂಶ ಸಾಂದ್ರತೆ ಕಡಿಮೆಯಾಗಿ ಮೂಳೆಯಲ್ಲಿನ ಬಲ ಕಡಿಮೆಗೊಳ್ಳುತ್ತದೆ. ಇದರಿಂದ ಮೂಳೆ ಬೇಗನೆ ಮುರಿತಕ್ಕೆ ಒಳಗಾಗುತ್ತದೆ. ಈ ಕುರಿತು ಶಿಬಿರದಲ್ಲಿ ತಪಾಸಣೆ ನಡೆಸಿ, ಮಾಹಿತಿ ನೀಡಲಾಗುತ್ತದೆ. ಬೆನ್ನೆಲುಬು, ಸೊಂಟದ ಎಲುಬು ಖನಿಜ ಸಾಂದ್ರತೆ ಸ್ಕ್ಯಾನಿಂಗ್‌ಗೆ ಶೇ. 50 ರಿಯಾಯಿತಿ ದರದಲ್ಲಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 0824-2225533.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

