ಖಾಸಗಿ ಬಸ್ ದರ ಶೇ.10ರಿಂದ 15ರಷ್ಟು ಏರಿಕೆ
ಕ.ಪ್ರ.ವಾರ್ತೆ ಮಂಗಳೂರು ಆ.17
ಖಾಸಗಿ ಬಸ್ ಮಾಲೀಕರು ಬಸ್ ಪ್ರಯಾಣ ದರವನ್ನು ಶೇ.10ರಿಂದ 15ಕ್ಕೆ ಏರಿಸುವುದಾಗಿ ಘೋಷಿಸಿದ್ದಾರೆ. ಆ.20ರಿಂದ ಎಕ್ಸ್ಪ್ರೆಸ್, ಸರ್ವೀಸ್ ಬಸ್ಗಳ ನವೀಕರಿಸಿದ ದರ ಪ್ರಯಾಣ ದರ ಜಾರಿಗೆ ಬರಲಿದೆ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಬಸ್ಗಳ ಪ್ರಯಾಣ ದರ ಪರಿಷ್ಕರಣೆ ಮಾಡುವ ಅಧಿಕಾರ ಇಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶದಲ್ಲಿ ಹೇಳಿದೆ. ಡೀಸೆಲ್ ದರ ಏರಿಕೆಯಿಂದ ಶೇ.60ರಷ್ಟು ವೆಚ್ಚ ಇಂಧನಕ್ಕೆ ವ್ಯಯವಾಗುತ್ತಿದೆ. ಬಿಡಿಭಾಗಗಳ ದರವೂ ಸಿಕ್ಕಾಪಟ್ಟೆ ಏರಿರುವುದರಿಂದ ಲಾಭಾಂಶ ಇಳಿಮುಖವಾಗಿ ದರ ಏರಿಕೆಗೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ನೋಟಿಫಿಕೇಷನ್ ಪ್ರಕಾರ ಶೇ.25ರವರೆಗೆ ಏರಿಕೆ ಅವಕಾಶವಿದ್ದರೂ ಜನರಿಗೆ ಹೊರೆಯಾಗುವ ಹಿನ್ನೆಲೆಯಲ್ಲಿ ಶೇ.10ರಿಂದ 15ರಷ್ಟು ಮಾತ್ರ ಏರಿಸುತ್ತಿದ್ದೇವೆ. ಮುಂದಿನ ಹಂತಗಳಲ್ಲಿ ಕ್ರಮೇಣ ಶೇ.25ರಷ್ಟು ಏರಿಸಲಾಗುವುದು ಎಂದರು.
ಆರ್ಎಫ್ಐಡಿ ಕಾರ್ಡ್ ವ್ಯವಸ್ಥೆ
ನಿತ್ಯ ಪ್ರಯಾಣಿಕರಿಗೆ ಆರ್ಎಫ್ಐಡಿ ಕಾರ್ಡ್ ನೀಡುವ ಅತ್ಯಾಧುನಿಕ ಸ್ವೈಪ್ ಕಾರ್ಡ್ ಟಿಕೆಟ್ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಡ್ನಲ್ಲಿ ಒಂದು ತಿಂಗಳು ಮುಂಚಿತವಾಗಿ ಟಿಕೆಟ್ ದರದ ಮೌಲ್ಯವನ್ನು ನೀಡಿದರೆ ಶೇ.35 ರಿಯಾಯಿತಿ ನೀಡಲಾಗುವುದು ಎಂದು ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ. ಪ್ರತಿಬಾರಿ ಪ್ರಯಾಣಿಸುವಾಗ ನಿರ್ವಾಹಕನ ಬಳಿ ಈ ಕಾರ್ಡ್ ಸ್ವೈಪ್ ಮಾಡಿದರೆ, ಬಳಕೆಯಾದ ಹಣ ಹಾಗೂ ಬಾಕಿ ಉಳಿದಿರುವ ಮೊತ್ತದ ಮಾಹಿತಿ ಪ್ರಯಾಣಿಕನಿಗೆ ಲಭಿಸುತ್ತದೆ. ಈ ವ್ಯವಸ್ಥೆಯನ್ನು ಕರ್ನಾಟಕ ಸಾರಿಗೆ ಸಂಸ್ಥೆಯಲ್ಲೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಬಳಿ ಬಂದು ಮಾತುಕತೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

