ದಕ್ಷಿಣ ಕನ್ನಡ

ಸಾಂಸ್ಕೃತಿಕ ಸ್ಪರ್ಧೆಗೆ ಅರ್ಜಿ ಆಹ್ವಾನ

Published On :

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವತಿಯಿಂದ ಸೆ. 4 ರಿಂದ 6ರವರೆಗೆ ವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ 'ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ' ನಡೆಯಲಿದೆ.
ಸ್ಪರ್ಧೆ ವಿವರ: ಸಾಹಿತ್ಯ- ರಸಪ್ರಶ್ನೆ, ಭಾಷಣ, ಚರ್ಚಾಸ್ಪರ್ಧೆ(ಇಂಗ್ಲಿಷ್ ಮತ್ತು ಕನ್ನಡ), ಲಲಿತಕಲೆ- ಸ್ಥಳದಲ್ಲಿ ವರ್ಣಚಿತ್ರಲೇಖನ, ಕೋಲಾಜ್, ಪೋಸ್ಟರ್ ಮೇಕಿಂಗ್, ಕ್ಲೇ ಮಾಡೆಲಿಂಗ್, ವ್ಯಂಗ್ಯಚಿತ್ರಗಳು, ರಂಗೋಲಿ, ಆಶು ಛಾಯಾಚಿತ್ರ, ನೃತ್ಯ- ಜನಪದ ನೃತ್ಯ, ಶಾಸ್ತ್ರೀಯ ನೃತ್ಯ, ಸಂಗೀತ- ಶಾಸ್ತ್ರೀಯ ಸಂಗೀತ(ಹಿಂದೂಸ್ಥಾನಿ-ಕರ್ನಾಟಕ), ಶಾಸ್ತ್ರೀಯ ವಾದ್ಯ ಸಂಗೀತ, ರಂಗಭೂಮಿ- ಏಕಾಂಕ ನಾಟಕ, ಕಿರು ಪ್ರಹಸನ, ಮೂಕಾಭಿನಯ, ಮಿಮಿಕ್ರಿ. ಪ್ರವೇಶ ಪತ್ರ ಕಳುಹಿಸಲು ಆ. 22 ಕೊನೆ ದಿನ. ಸ್ಪರ್ಧೆಯ ಪ್ರವೇಶಪತ್ರಕ್ಕಾಗಿ www.mangaloreuniversity.ac.in ನಿಂದ ಪಡೆಯಬಹುದು.
--
ಅರ್ಜಿ ಆಹ್ವಾನ
ಮಂಗಳೂರು: ಸ್ವರ ಸಂಜೀವಿನಿ ಸಂಗೀತ ಸಭಾ ವತಿಯಿಂದ ಸೆ. 7 ರಂದು ಪುರಭವನದಲ್ಲಿ ಸಂಗೀತೋತ್ಸವ- 2013 ಗಾಯನ ಸ್ಪರ್ಧೆ ನಡೆಯಲಿದೆ. ಸಂಗೀತ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಹಾಡುಗಾರಿಕೆ(ಕರ್ನಾಟಕ ಸಂಗೀತ), ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆ ನಡೆಯಲಿದೆ. ಆಸಕ್ತ ವಿದ್ಯಾಸಂಸ್ಥೆಗಳು ರಘುಚಂದ್ರ ರಾವ್ ಸುರತ್ಕಲ್- 9844792616 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ವಿಷ ಸೇವಿಸಿ ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನಿಡ್ಲೆ ಗ್ರಾಮದ ಬೂಡುಜಾಲು ಕೊಡಂಗೆ ಮನೆ ನಿವಾಸಿ ಪ್ರವೀಣ (29) ಎಂಬವರು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಇವರು ಮದ್ಯವ್ಯಸನಿಯಾಗಿದ್ದು, ತನ್ನ ಚಿಕ್ಕಪ್ಪನ ಕೋಳಿ ಫಾರಂ ಶೆಡ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದಾರೆ. ಮೃತರಿಗೆ ಪತ್ನಿ , ಒಂದು ಹೆಣ್ಣುಮಗು ಇದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.