ಬುದ್ಧಿಮಾಂದ್ಯೆಗೆ ಅತ್ಯಾಚಾರ: ಆರೋಪಿಯ ಕಟ್ಟಿಹಾಕಿ ಥಳಿತ
ಮಂಗಳೂರು: 16 ಹರೆಯದ ಬುದ್ಧಿಮಾಂದ್ಯ ಬಾಲಕಿ ಮೇಲೆ ನೆರೆಮನೆಯ ಮಧ್ಯವಯಸ್ಕ ಕಳೆದ 2 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ ಘಟನೆ ಬಜ್ಪೆ ಬಳಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಸ್ಥಳೀಯ ಮಹಿಳೆಯರು ಮರಕ್ಕೆ ಕಟ್ಟಿಹಾಕಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಪ್ಪೆಪದವು ಕಲ್ಲಾಡಿಯ ಸುಂದರ(45) ಎಂದು ಹೇಳಲಾಗಿದೆ.
ಘಟನೆ ವಿವರ: ನೆರೆಮನೆಯ ಬುದ್ಧಿಮಾಂದ್ಯ ಯುವತಿ ಜತೆ ಸಲುಗೆಯಿಂದ ವರ್ತಿಸುತ್ತಿದ್ದ ಸುಂದರ, ಆಕೆಯ ಮುಗ್ಧತೆ ಬಳಸಿಕೊಂಡು 2 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಆಗಲೇ ವಿಷಯ ತಿಳಿದಿದ್ದ ಸ್ಥಳೀಯರು ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಅತ್ಯಾಚಾರ ಸಾಬೀತಾಗದ ಹಿನ್ನಲೆಯಲ್ಲಿ ಆತನಿಗೆ ಬುದ್ದಿಹೇಳಿ ಬಿಟ್ಟಿದ್ದರು. ಇಷ್ಟಾದರೂ ಆತ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಬಾಲಕಿ ಮನೆಯವರು ಕೆಲಸಕ್ಕೆ ಹೊರಗಡೆ ಹೋಗುತ್ತಿದ್ದಾಗ ಆತ ತನ್ನ ಕೃತ್ಯ ಮುಂದುವರಿಸುತ್ತಿದ್ದ ಎಂದು ದೂರಲಾಗಿದೆ.
ಬಾಲಕಿಗೆ ನಶ್ಯ ಎಳೆಯುವ ಚಟ ಇದ್ದು, ಅದನ್ನೇ ಆತ ಕೃತ್ಯಕ್ಕೆ ಬಳಸಿಕೊಂಡಿದ್ದ. ಯುವತಿಗೆಂದು ನಶ್ಯ ತೆಗೆದುಕೊಂಡು ಹೋಗಿ ಬಳಿಕ ಅತ್ಯಾಚಾರ ನಡೆಸುತ್ತಿದ್ದ. ಶುಕ್ರವಾರವೂ ಯುವತಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಮನಗಂಡು ಆಕೆಯ ಮನೆಗೆ ನಶ್ಯ ಹಿಡಿದುಕೊಂಡು ಹೋಗಿದ್ದನು. ಇದರ ನೆಪದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಆತ ಹೊರಬರುತ್ತಿದ್ದಂತೆ ಆತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಬಿಡಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಂಧಿತ ಸುಂದರನಿಗೆ ಮೂರು ಮಂದಿ ಮಕ್ಕಳಿದ್ದಾರೆ. ಈ ಸಂಬಂಧ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

