ದಕ್ಷಿಣ ಕನ್ನಡ

ಕಾಣಿಯೂರು ಪ್ರ.ದ. ಕಾಲೇಜು ಮಾದರಿ ಕಾಲೇಜಾಗಿ ಆಯ್ಕೆ

Published On :

ಉಪ್ಪಿನಂಗಡಿ: ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪದಂತೆ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ 2013-14ರಲ್ಲಿ ಕಾಣಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಾದರಿ ಕಾಲೇಜಾಗಿ ಆಯ್ಕೆ ಮಾಡಲಾಗಿದೆ. ಸುಮಾರು 12 ಕೋಟಿ  ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅವಕಾಶವಿದ್ದು, ಈ ಬಗ್ಗೆ ಮೂಲ ಅವಶ್ಯಕತೆಗಳನ್ನು ಹೊಂದಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿಗಳು ಕಾಣಿಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ. ಮಾದರಿ ಕಾಲೇಜಿನಲ್ಲಿ 24 ತರಗತಿಗಳು, 6 ಪ್ರಯೋಗಾಲಯಗಳು, ಬಾಲಕ- ಬಾಲಕಿಯರ ಪ್ರತ್ಯೇತ ವಸತಿ ನಿಲಯಗಳು, ವಿಶಾಲವಾದ ಪ್ರತ್ಯೇಕ ಎರಡು ಸಭಾಂಗಣಗಳು, 400 ಮೀ ಟ್ರ್ಯಾಕ್ ಇರುವ ಆಟದ ಮೈದಾನ, 25 ಸ್ಟಾಫ್ ಕ್ವಾಟರ್ಸ್, ಗ್ರಂಥಾಲಯ, ಆಸ್ಪತ್ರೆ, ಬ್ಯಾಂಕ್, ಪೋಸ್ಟ್ ಆಫೀಸು, ಸಭಾಭವನ, ಡೇ ಸ್ಕಾಲರ್ ವಸತಿ ನಿಲಯ, ಡೈನಿಂಗ್ ಹಾಲ್, ಆಡಳಿತ ಸೌಧ, ಗೆಸ್ಟ್ ಹೌಸ್, ಹಸು ಸಾಕಾಣೆ ಕೇಂದ್ರ, ಹುಲ್ಲುಗಾವಲು, ವರ್ಕ್‌ಶೆಡ್, ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಶೌಚಾಲಯ, ಪ್ರತ್ಯೇಕ ಗೋಬರ್‌ಗ್ಯಾಸ್ ಪ್ಲಾಂಟ್, ವಿದ್ಯುತ್ ಉತ್ಪಾದಕ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಸದರಿ ಕಾಲೇಜಿನ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಕನಿಷ್ಠ 10 ರಿಂದ 15 ಎಕರೆ ಜಾಗ ಅಗತ್ಯವಿದ್ದು ಇದರ ಬಗ್ಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ. ಈ  ಬಗ್ಗೆ  ಕಾಲೇಜಿನ ಪ್ರಾಂಶುಪಾಲ ರಾಘವ ಎನ್. ಬೆಳಂದೂರು ಗ್ರಾಮದ ಸರ್ವೇ ನಂ. 99ರಲ್ಲಿರುವ 38.06 ಎಕರೆ ಜಾಗ ಕಾಲೇಜಿಗೆ ಯೋಗ್ಯವಾಗಿದೆ. ಕಾಣಿಯೂರು ಪೇಟೆಯಿಂದ 700 ಮೀಟರ್ ದೂರದಲ್ಲಿದ್ದು, ಸರ್ವಋತು ರಸ್ತೆ ವ್ಯವಸ್ಥೆಯಿದೆ ಮತ್ತು ವಿಶಾಲವಾದ ಸಮತಟ್ಟು ಪ್ರದೇಶವಾಗಿರುತ್ತದೆ. ಯಾವುದೇ ಗೊಂದಲಗಳಿಲ್ಲದೆ ವಿದ್ಯಾರ್ಜನೆಗೆ ಅತಿ ಸೂಕ್ತವಾದ ಸ್ಥಳವಾಗಿದೆ. ಇದನ್ನು ಕಾಲೇಜಿಗೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.