ದಕ್ಷಿಣ ಕನ್ನಡ

ಪತ್ರಕರ್ತೆಗೆ ಕಿರುಕುಳ: ಇಬ್ಬರ ಸೆರೆ

Published On :

ಮಂಗಳೂರು:  ನಗರದ ವೆಬ್‌ಸೈಟ್ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.  ಗರೋಡಿ ನಿವಾಸಿಗಳಾದ ಜಾಕ್ಸನ್ ಮತ್ತು ಡೆನ್ವರ್ ಬಂಧಿತರು.
ಮಂಗಳೂರಿನ ವೆಬ್‌ಸೈಟ್‌ನಲ್ಲಿ ವರದಿಗಾರ್ತಿಯಾಗಿರುವ ಯುವತಿ ಭಾನುವಾರ ರಾತ್ರಿ ಹಾಸ್ಟೆಲ್‌ಗೆ ತೆರಳುತ್ತಿರುವಾಗ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ಕಿರುಕುಳ ನೀಡಿದ್ದು, ಪತ್ರಕರ್ತೆ ಬೊಬ್ಬೆ ಹೊಡೆದಾಗ ಆರೋಪಿಗಳು ಪರಾರಿಯಾಗಿದ್ದರು.
ಘಟನೆ ವಿವರ: ಭಾನುವಾರ ರಾತ್ರಿ 9 ಗಂಟೆ ವೇಳೆಗೆ ಪತ್ರಕರ್ತೆ ತನ್ನ ಕಚೇರಿಯಿಂದ ಕೆಲಸಮ ಮುಗಿಸಿ ನಗರದ ಆಗ್ನೆಸ್ ಕಾಲೇಜ್ ಬಳಿಯ ತನ್ನ ಪೇಯಿಂಗ್ ಗೆಸ್ಟ್ ಕಡೆ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಆಕೆಯನ್ನು ಅಡ್ಡಗಟ್ಟಿ ಕೈ ಹಿಡಿದು ಎಳೆದಾಡಿದ್ದಾರೆ. ಅಪಾಯ ಅರಿತ ಆಕೆ ಜೋರಾಗಿ ಬೊಬ್ಬೆ ಹೊಡೆದಿದ್ದು ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಒಟ್ಟು ಸೇರಿದ್ದಾರೆ. ಬೆದರಿದ ಯುವಕರಿಬ್ಬರು ಬೈಕ್ ಅಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
 ಬೈಕ್‌ನ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಥಳೀಯರು ಆರೋಪಿಯೊಬ್ಬನ ಮನೆಯ ವರೆಗೆ ತೆರಳಿದ್ದಾರೆ. ಅದರಲ್ಲಿ ಒಬ್ಬಾತನನ್ನು ಹಿಡಿದು ವಾಪಸ್ ಆಗ್ನೇಸ್ ಕಾಲೇಜ್ ವರೆಗೆ ಎಳೆ ತಂದು ಚೆನ್ನಾಗಿ ತದಕಿದ್ದಾರೆ. ಬಳಿಕ ಪತ್ರಕರ್ತೆ ಬೈದು ಬುದ್ಧಿವಾದ ಹೇಳಿದ್ದು ಆತ ಕ್ಷಮಾಪಣೆ ಕೇಳಿದ್ದಾನೆ.
ಆರೋಪಿ ಪರ ವಕಾಲತ್ತು: ಈ ವೇಳೆ ಮಹಿಳೆಯೊಬ್ಬರು ಅಲ್ಲಿಗೆ ಬಂದು ಆರೋಪಿ ಪರವಾಗಿ ಮಾತನಾಡಿ, ಯುವಕನ ಅಕ್ಕನಿಗೆ ಶೀಘ್ರದಲ್ಲಿ ಮದುವೆಯಿದೆ. ಪ್ರಕರಣ ದಾಖಲಾದರೆ ಶುಭ ಸಮಾರಂಭಕ್ಕೆ ತೊಂದರೆಯಾಗುತ್ತದೆ. ದೂರು ದಾಖಲಿಸಬೇಡಿ ಎಂದು ಮನವಿ ಮಾಡಿದರು. ಬಳಿಕ, ಆರೋಪಿಗೆ ಹೊಡೆಯುವುದು ನಿಲ್ಲಿಸಿದ ಸ್ಥಳೀಯರು ಆತನನ್ನ ಕದ್ರಿ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. ಸೋಮವಾರ ಬೆಳಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದು ಇಬ್ಬರನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.