ದಕ್ಷಿಣ ಕನ್ನಡ

ಕಲ್ಲಡ್ಕ: ವಿದ್ಯಾರ್ಥಿಗಳು ಸೃಷ್ಟಿಸಿದ 'ಅದ್ಭುತ ಲೋಕ'

Published On :

ಬಂಟ್ವಾಳ: ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ ಜನಸಮೂಹವನ್ನು ಮಂತ್ರಮುಗ್ಧಗೊಳಿಸಿತು.
 ಸುಮಾರು 900 ವಿದ್ಯಾರ್ಥಿಗಳು ಮೈದಾನದಲ್ಲಿ ಲಯಬದ್ಧವಾಗಿ ವಿವಿಧ ಚಿತ್ರಣ, ಮಂಗಳಯಾನದ ಅಣಕು ಪ್ರದರ್ಶನ ಹಾಗೂ ವಿವಿಧ ದೃಶ್ಯಾವಳಿಗಳು ಅದ್ಭುತ ಲೋಕ ಸೃಷ್ಟಿಸಿದರು.
 ವಿವೇಕಾನಂದ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕ್ರೀಡೋತ್ಸವಕ್ಕೆ ಚಾಲನೆ ದೊರೆಯಿತು. ಶಿಶು ಮಂದಿರ ಪುಟಾಣಿಗಳಿಂದ ಆಕರ್ಷಕ ನೃತ್ಯ, ಘೋಷ್ ಪ್ರದರ್ಶನ, ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕೊಡಗು ಭಾಷೆಯ ಹಾಡಿನೊಂದಿಗೆ ಜಡೆ ಕೋಲಾಟ ವಿಶೇಷ ಗಮನ ಸೆಳೆಯಿತು.
ನೀಯುದ್ಧ, ಯೋಗಾಸನ, ದೀಪಾರತಿ, ಮಲ್ಲಕಂಬ ಮೊದಲಾದ ಮೈ ನವಿರೇಳಿಸುವ ಕಸರತ್ತು ಜನಸಮೂಹವನ್ನು ರೋಮಾಂಚನಗೊಳಿಸಿತು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ತುಳುನಾಡಿನ ಜಾತ್ರೆಯ ವೈಭವವನ್ನು ಸಾರುವ ಸಾಮೂಹಿಕ ಪ್ರದರ್ಶನ ವಿಶೇಷ ರಂಜನೆ ನೀಡಿತ್ತು. ಕುಣಿತ, ನೃತ್ಯ ಭಜನೆ, ಕಾಲ್ಚಕ್ರ, ಯೋಗಚಾಪ ನೃತ್ಯ, ಯಕ್ಷರೂಪಕ,   ಸೈಕಲ್, ಬೈಕ್‌ಗಳಲ್ಲಿ ಮಾಡಿದ ಕಸರತ್ತುಗಳು ಅದ್ಭುತವಾಗಿದ್ದವು. ಬೆಂಕಿಯಲ್ಲಿ ಸಾಹಸ, ಕೂಪಿಕ ಪ್ರದರ್ಶನ ವಿಶೇಷ ಆಕರ್ಷಣೆಗೆ ಪಾತ್ರವಾಯಿತು.
 ವಿದ್ಯಾ ಕೇಂದ್ರದ ಸಂಚಾಲಕ ಡಾ. ಪ್ರಭಾಕರ್ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಇದೇ ವೇಳೆ ಶಿಶು ಮಂದಿರದ 25ನೇ ವರ್ಷದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಪತಂಜಲಿ ಯೋಗ ಮಂದಿರದ ಉದ್ಘಾಟನೆ ನೆರವೇರಿಸಲಾಯಿತು. ರಾಧಾಕೃಷ್ಣ ಅಡ್ಯಂತಾಯ ನಿರೂಪಿಸಿದರು.
ಚಿತ್ರನಟ ಜಗ್ಗೇಶ್, ನಟಿ ರಾಗಿನಿ ದ್ವಿವೇದಿ, ಸಂಗತ ನಿರ್ದೇಶಕ ಗುರುಕಿರಣ್, ಅರುಣ್ ಕಿರೋಡಿಯನ್ ಸಮಾರಂಭಕ್ಕೆ ಮೆರುಗು ತಂದರು. ಶ್ರೀರಾಮ ವಿದ್ಯಾ ಕೇಂದ್ರದ 2473 ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳ ಕಸರತ್ತನ್ನು ಅತಿಥಿಗಳು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.