ಗ್ರಾಪಂ ಸಿಬ್ಬಂದಿಯಿಂದಲೇ ಅನ್ನಭಾಗ್ಯ ಅಕ್ಕಿ ಮಾರಾಟ
ವಿಟ್ಲ: ಗ್ರಾಮ ಪಂಚಾಯಿತಿ ಸಿಬ್ಬಂದಿ ಕಸ ವಿಲೇವಾರಿ ಕಾರ್ಮಿಕರಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಸುಮಾರು 140 ಕಿಲೋ ಅನ್ನ ಭಾಗ್ಯ ಯೋಜನೆ ಅಕ್ಕಿಯನ್ನು ಆಹಾರ ಇಲಾಖಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳವಾರ ವಿಟ್ಲ ಸಮೀಪದ ಪಳಿಕೆಯಲ್ಲಿ ನಡೆದಿದೆ.
ಕಸ ವಿಲೇವಾರಿ ಘಟಕದ ಕಾರ್ಮಿಕರು ವಿಟ್ಲ ಗ್ರಾಮ ಪಂಚಾಯಿತಿಯ ಪಳಿಕೆಯಲ್ಲಿ ಎರಡು ಕೊಠಡಿಯಲ್ಲಿ ವಾಸವಾಗಿದ್ದರು. ಇವರಲ್ಲಿ ಕಾರ್ಮಿಕರಾಗಿರುವ ವೆಂಕಮ್ಮ ಎಂಬವರ ಕೊಠಡಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯನ್ನು ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭ ಸುಮಾರು 140 ಕಿಲೋ ಅಕ್ಕಿ ಪತ್ತೆಯಾಗಿದೆ. ಮಹಿಳೆ ಹೇಳುವಂತೆ ಪಂಚಾಯಿತಿ ನೀರು ಬಿಡುವ ಉದ್ಯೋಗದಲ್ಲಿರುವ ನೆಕ್ಕರೆಕಾಡು ನಿವಾಸಿ ಸತೀಶ್ ಎಂಬವರು ಸುಮಾರು 20 ಕೆ.ಜಿ. ಅಕ್ಕಿಯನ್ನು 15 ರುಪಾಯಿಯಂತೆ ಮಾರಾಟ ಮಾಡಿದ್ದು, ಉಳಿದುದನ್ನು ಅಲ್ಲೇ ದಾಸ್ತಾನು ಮಾಡಿದ್ದರು. ಬಂಟ್ವಾಳ ತಹಸೀಲ್ದಾರ್ ಮಲ್ಲೇಸ್ವಾಮಿ ಆದೇಶದಂತೆ ಸ್ಥಳಕ್ಕೆ ಬಂಟ್ವಾಳ ಆಹಾರ ನಿರೀಕ್ಷಕ ಶ್ರೀನಿವಾಸ್, ಉಪ ನಿರೀಕ್ಷಕ ಶ್ರೀಧರ್, ವಿಟ್ಲ ವಿ.ಎ. ಪ್ರಕಾಶ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದರು. ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

