ದಕ್ಷಿಣ ಕನ್ನಡ

ಸಾಹಿತಿ ಪ್ರಭಾಕರ ಶಿಶಿಲ 'ಸಂವತ್ಸರ ಸಂಭ್ರಮ'

Published On :

ಸುಳ್ಯ: ಸುಳ್ಯ ನೆಹರೂ ಸ್ಮಾರಕ ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಡಾ. ಪ್ರಭಾಕರ ಶಿಶಿಲರ 60ನೇ ಹುಟ್ಟುಹಬ್ಬ ಆಚರಣೆ ಸಂವತ್ಸರ ಸಂಭ್ರಮದ ಅಂಗವಾಗಿ ಅಕ್ಷರ ವಂದನೆ ಹಾಗೂ ಗುರುವಂದನೆ ಕಾರ್ಯಕ್ರಮ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಕೆವಿಜಿ ಷಷ್ಟ್ಯಬ್ಧ ರಂಗಮಂದಿರದಲ್ಲಿ ಭಾನುವಾರ ನಡೆಯಿತು.
ಅಕ್ಷರ ವಂದನೆ ಕಾರ್ಯಕ್ರಮದಲ್ಲಿ ಡಾ. ಶಿಶಿಲರ 7 ಕೃತಿಗಳು ಬಿಡುಗಡೆಗೊಂಡವು. ರಾಮಾಯಣ ಆಧಾರಿತ  'ಮೂಗು' ಕೃತಿಯನ್ನು ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ, 60 ಭಾಷಣಗಳ ಸಂಕಲನ 'ಒಳಗಣ್ಣು' ಕೃತಿಯನ್ನು ಶಿಕ್ಷಕ ಡಾ. ಸುಂದರ್ ಕೇನಾಜೆ, 'ಪಂಚಕಾದಂಬರಿ' ಕೃತಿಯನ್ನು ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್, ಬಡ್ಡಡ್ಕ ಅಪ್ಪಯ್ಯ ಗೌಡರ ಅನುಭವ ಕಥನ ಶಿಕಾರಿಯ 'ಸೀಳು ನೋಟ' ಕೃತಿಯನ್ನು ಪುತ್ತೂರು ಇಂಡಸ್ ಕಾಲೇಜು ಪ್ರಾಂಶುಪಾಲ ಪ್ರೊ. ಸೀತಾರಾಮ ಕೇವಳ, 15 ಕಥೆಗಳ 'ಗಗ್ಗರ' ಕೃತಿಯನ್ನು ಕವಯತ್ರಿ  ಸ್ಮಿತಾ ಅಮೃತರಾಜ್, 11 ಕಥೆಗಳ 'ಬೆಟ್ಟದ ಮೇಲೊಂದು' ಕೃತಿಯನ್ನು ಕ್ಷೇತ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು ಹಾಗೂ ಶಿಶಿಲರ ಸಮಗ್ರ ಕೃತಿ ದರ್ಶನ 'ಸಾಹಿತ್ಯ ಶಿಶಿಲ' ಕೃತಿಯನ್ನು ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಬಿಡುಗಡೆಗೊಳಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಬಿ. ದಿವಾಕರ ರೈ, ದ.ಕ. ಜಿಲ್ಲಾ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಹಳೆ ವಿದ್ಯಾರ್ಥಿ ಸಂಘದ ಕೇರಳ ಘಟಕದ ಅಧ್ಯಕ್ಷ ಪುರುಷೋತ್ತಮ ಬಂದಡ್ಕ, ಬೆಂಗಳೂರು ಘಟಕದ ಅಧ್ಯಕ್ಷ ಪದ್ಮಾ ಕೋಲ್ಚಾರ್, ಕ.ಸಾ.ಪ. ನಿರ್ದೇಶಕಿ ಲತಾ ಮಧುಸೂದನ್ ಕೃತಿಗಳನ್ನು ಸ್ವೀಕರಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಾರ್ಯದರ್ಶಿ ಪಡ್ಡಂಬೈಲು ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಗುರುವಂದನೆ: ಡಾ. ಶಿಶಿಲರ ಜೀವನಕ್ಕೆ ಮಹತ್ತರ ತಿರುವು ನೀಡಿದ ಆರು ಮಂದಿ ಅಧ್ಯಾಪಕರನ್ನು ಸನ್ಮಾನಿಸಲಾಯಿತು. ಮೈಸೂರು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ, ಉಜಿರೆ ಎಸ್‌ಡಿಎಂ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಅಳಿಕೆಯ ವಿಶ್ರಾಂತ ಉಪನ್ಯಾಸಕ ಕೆ.ವಿ. ಸುಬ್ರಾಯ, ಶಿರ್ತಾಡಿ ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್‌ನ ಜಗತ್ಪಾಲ ಅರಿಗ ಧರ್ಮಸ್ಥಳ, ನಿವೃತ್ತ ಮುಖ್ಯಶಿಕ್ಷಕ ರಮಾನಂದ ರಾವ್, ಶಿವರಾಮ ಶಿಶಿಲ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಪ್ರ. ಕಾರ್ಯದರ್ಶಿ ಡಾ.ಕೆ.ವಿ. ರೇಣುಕಾಪ್ರಸಾದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.