ಸೈನೆಡ್ ಮೋಹನ 3ನೇ ಪ್ರಕರಣವೂ ಸಾಬೀತು
ಮಂಗಳೂರು: ಸರಣಿ ಹಂತಕ ಸೈನೆಡ್ ಮೋಹನ ನಡೆಸಿದ ಮೂರನೇ ಕೊಲೆ ಪ್ರಕರಣವೂ ಸಾಬೀತಾಗಿದೆ ಎಂದು 4ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಮೂರು ಪ್ರಕರಣಗಳ ಶಿಕ್ಷೆ ಪ್ರಮಾಣ ಬಗ್ಗೆ ವಾದಿ, ಪ್ರತಿವಾದಿಗಳ ಹಿಯರಿಂಗ್ ಡಿ.19ರಂದು ನಡೆಯಲಿದೆ.
ಸುಳ್ಯ ಪೆರುವಾಜೆ ಸುನಂದಾ 2008ರ ಫೆ.11ರಂದು ನಾಪತ್ತೆಯಾಗಿದ್ದಳು. ಅದೇ ದಿನ ಮೈಸೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸುನಂದಾ ಶವ ಪತ್ತೆಯಾಗಿತ್ತು. ಲಷ್ಕರ್ ಪೊಲೀಸರು ಸುನಂದಾ ಬಳಿ ಸಿಕ್ಕ ಮೊಬೈಲ್ ಮೂಲಕ ತಾಯಿ ರತ್ನಾವತಿಗೆ ಕರೆ ಮಾಡಿ ವಿವರಿಸಿದ್ದರು.
ಯುವತಿಯನ್ನು ಮೋಹನ ವಂಚಿಸಿ ಮೈಸೂರಿಗೆ ಕರೆತಂದು ಸೈನೆಡ್ ತಿನ್ನಿಸಿ ಕೊಲೆ ಮಾಡಿದ್ದು, ಪ್ರಾಸಿಕ್ಯೂಶನ್ ಆರೋಪಗಳನ್ನು ಸಾಬೀತು ಪಡಿಸಿದೆ. ಐಪಿಸಿ ಸೆ.366, 376, 328, 392, 417, 394, 302, 201 ರಂತೆ ಸೈನೆಡ್ ನೀಡಿ ಕೊಲೆ ಮಾಡಿರುವುದು ಸಾಕ್ಷ್ಯಾಧಾರ ನಾಶಪಡಿಸಿದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಬಿ.ಕೆ.ನಾಯ್ಕ್ ಪ್ರಕಟಿಸಿದರು.
'ನಿನ್ನ ಪರವಾಗಿ ಹೇಳುವುದು ಏನಾದರೂ ಇದ್ದರೆ ನಾಳೆ ಹೇಳಪ್ಪಾ' ಎಂದು ನ್ಯಾಯಾಧೀಶರು ಮೋಹನಗೆ ಸೂಚಿಸಿದರು. ನಾಳೆ ಮೋಹನ ಶಿಕ್ಷೆ ಪ್ರಮಾಣ ಕಡಿಮೆಗೊಳಿಸುವಂತೆ ಮನವಿ ಮಾಡಲಿದ್ದಾನೆ.
ಸುನಂದಾ ಪ್ರಕರಣ: ಮಂಗಳೂರು ನೆಹರು ಮೈದಾನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದ ಸುನಂದಾಳನ್ನು ಸೈನೆಡ್ ಮೋಹನ ಶಶಿಧರ ಎಂಬ ಹೆಸರಲ್ಲಿ ಪರಿಚಯ ಮಾಡಿಕೊಂಡಿದ್ದ. 2008ರ ಫೆ.11ರಂದು ಸುನಂದಾ ನಾಪತ್ತೆಯಾಗಿದ್ದಳು.
ಅದೇ ದಿನ ಮೈಸೂರಿನ ಲಷ್ಕರ್ ಪೊಲೀಸರು ತಾಯಿ ರತ್ನಾವತಿ ಮೊಬೈಲ್ ನೋಡಿ ಕರೆ ಮಾಡಿ ವಿಷಯ ತಿಳಿಸುತ್ತಾರೆ. ರತ್ನಾವತಿ ನೆರೆಮನೆಯವರ ಜತೆ ಬಂದು ಮಗಳ ದೇಹವನ್ನು ಗುರುತಿಸುತ್ತಾರೆ.
ವಿಠಲ ಪೂಜಾರಿ ಮಗಳು ಸುನಂದಾ ಬೆಳ್ಳಾರೆ ದುರ್ಗಾ ಸ್ವಸಹಾಯ ಸಂಘ ಸದಸ್ಯೆ. ಇದೇ ಸಂಘದಿಂದ 25 ಸಾವಿರ ಡ್ರಾ ಮಾಡಿಸಿ ತರಿಸುವಲ್ಲಿ ಮೋಹನ ಯಶಸ್ವಿಯಾಗಿದ್ದ. ತಾಯಿ ರತ್ನಾವತಿ, ತಂಗಿ ಹರಿಣಿ, ನೆರೆಹೊರೆಯ ರಾಜೀವಿ ರೈ ಸಾಕ್ಷಿ ನುಡಿದಿದ್ದರು.
ಮೋಹನ ಮತ್ತು ಸುನಂದಾ ತಂಗಿದ್ದ ಉಮಾಮಹೇಶ್ವರಿ ಲಾಡ್ಜ್ ಸಿಬ್ಬಂದಿ ನಾಗೇಶ, ಬಸವಣ್ಣ ಪ್ರಮುಖ ಸಾಕ್ಷಿಗಳು. ಮೋಹನ ಚಿನ್ನಾಭರಣ ಅಡವಿಟ್ಟಿದ್ದ ಆಶೀರ್ವಾದ್ ಫೈನಾನ್ಸ್ ಪ್ರಮುಖರು ಸಾಕ್ಷಿ ನುಡಿದಿದ್ದರು. ವಿಶೇಷ ಸರ್ಕಾರಿ ಅಭಿಯೋಜಕ ಚೆಯ್ಯಬ್ಬ ಬ್ಯಾರಿ ವಾದ ಮಂಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

