ಅಡಕೆ ನಿಷೇಧ; 5 ವರ್ಷ ಭೀತಿ ಬೇಡ: ವರ್ಮುಡಿ
ಮೂಡುಬಿದಿರೆ: ಅಡಕೆ ನಿಷೇಧ ವಿಚಾರ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಕೃಷಿ ವಿಚಾರಗೋಷ್ಠಿಯಲ್ಲೂ ಪ್ರಸ್ತಾಪಗೊಂಡಿತು. ಬೆಳಗ್ಗೆ ಉದ್ಘಾಟನೆಯಲ್ಲಿ ಕರಾವಳಿ ಕೃಷಿಕರ ಜೀವನದ ಉಸಿರಾಗಿರುವ ಅಡಕೆಯ ಮಾತು ಕೇಳಿಬಂದರೆ, ಸಂಜೆ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಆರ್ಥಿಕ ಸಹಕಾರ ವಿಚಾರಗೋಷ್ಠಿಯಲ್ಲೂ ಅಡಕೆ ನಿಷೇಧದ ದುಗುಡ ಪ್ರಸ್ತುತಗೊಂಡಿತು.
ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಗೋಷ್ಠಿಯ ಉಪಸಂಹಾರದಲ್ಲಿ ಹೇಳಿದ್ದು ಇಷ್ಟು: ಅಡಕೆ ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ದಾಖಲೆ ಪತ್ರ ಸಲ್ಲಿಸಿರುವುದು ನಿಜ. ಆದರೆ ತಂಬಾಕು ನಿಷೇಧಕ್ಕೆ 2020 ಗಡುವು ಇರುವಾಗ ಅಡಕೆಯನ್ನು ಬೇಗನೆ ನಿಷೇಧಿಸಲು ಸಾಧ್ಯವಿಲ್ಲ. ಅದಕ್ಕೂ ಮೊದಲು ಅಡಕೆ ಆರೋಗ್ಯಕರ ಎಂಬುದಕ್ಕೆ ಅಗತ್ಯ ಪುರಾವೆಗಳನ್ನು ಸಲ್ಲಿಸಬೇಕಾದ್ದು ಎಲ್ಲರ ಹೊಣೆ. ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ವರದಿಯಲ್ಲಿ ಅಡಕೆಯನ್ನು ಮೆಡಿಸಿನಲ್ ಪ್ಲಾಂಟ್‌ಗೆ ಸೇರಿಸಬೇಕು ಎಂಬ ಶಿಫಾರಸು ಇದೆ. ಇದಲ್ಲದೆ ಇಂಡೋನೇಷ್ಯಾ, ಥೈಲ್ಯಾಂಡ್‌ಗಳಲ್ಲಿ ಅಡಕೆಯನ್ನು ಮೆಡಿಸಿನ್ ಆಗಿ ಬಳಸುತ್ತಾರೆ. ಎಲ್ಲಿಯೂ ಅಡಕೆ ಕ್ಯಾನ್ಸರ್‌ಕಾರಕ ಎಂಬುದಿಲ್ಲ. ಹಾಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅಡಕೆಯನ್ನು ನಿಷೇಧದ ತೂಗುಗತ್ತಿಯಿಂದ ಪಾರು ಮಾಡಬಹುದು. ಇನ್ನು 5 ವರ್ಷವರೆಗೆ ಅಡಕೆ ನಿಷೇಧ ಬಗ್ಗೆ ಹೆದರಿಕೆ ಬೇಡ ಎಂದು ಕೃಷಿಕರಿಗೆ ಧೈರ್ಯದ ಮಾತನ್ನಾಡಿದರು.
ರೈತರಿಗೆ ಉಪಯುಕ್ತ ಸಮಯದಲ್ಲಿ ಬ್ಯಾಂಕ್‌ಗಳು ಸಾಲ ನೀಡಬೇಕು. ರೈತರೂ ನಿರ್ದಿಷ್ಟ ಸಮಯದಲ್ಲಿ ಕೃಷಿ ಚಟುವಟಿಕೆ ನಡೆಸಬೇಕು. ಕೃಷಿಕರ ತಂತ್ರಜ್ಞಾನಕ್ಕೆ ಆರ್ಥಿಕ ಪ್ರೋತ್ಸಾಹ ನೀಡಬೇಕು. ಉತ್ಪನ್ನಗಳ ಮೌಲ್ಯವರ್ಧನೆ ಆಗಬೇಕು. ಹೀಗಾದಲ್ಲಿ ಕೃಷಿಯಲ್ಲಿ ಉತ್ತಮ ಬದುಕು ಸಾಧ್ಯ ಎಂದು ಹೇಳಿದರು.
ಡಾ.ವಿಜಯ್ ಅಂಗಡಿ ಉಪನ್ಯಾಸದಲ್ಲಿ, ಕೃಷಿಕರ ಇಂದಿನ ದುಃಸ್ಥಿತಿಗೆ ಕೃಷಿಕರೇ ಕಾರಣ. ಲಕ್ಸುರಿ ಜೀವನಕ್ಕೆ ಜೋತುಬಿದ್ದು ಕೃಷಿಕರು ಸಂಕಷ್ಟ ಅನುಭವಿಸುವಂತಗಿದೆ ಎಂದರು.
ಡಾ.ಸಂಪತ್ ಕುಮಾರ್ ಗ್ರಾಮಾಭಿವೃದ್ಧಿ ಯೋಜನೆಯ ಅನುಭವ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

