ದಕ್ಷಿಣ ಕನ್ನಡ

ಜನಪದ ಕಲೆ ಪ್ರಕಾರ ದಲಿತ ಕೇಂದ್ರಿತ: ಅಭಯ ಕುಮಾರ್

Published On :

ವಿದ್ಯಾಗಿರಿ, ಮೂಡುಬಿದಿರೆ: ಮುಂದಿನ ಪೀಳಿಗೆಗೆ ಕೃಷಿ ಜ್ಞಾನ ಪ್ರಸಾರವಾಗಲಿ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡ ಜನಪದ ಕಲಾ ಪ್ರಕಾರಗಳು ದಲಿತರನ್ನು ಕೇಂದ್ರೀಕರಿಸಿವೆ ಎಂದು ಡಾ. ಅಭಯ್ ಕುಮಾರ್ ಹೇಳಿದ್ದಾರೆ.
 ಆಳ್ವಾಸ್ ವಿಶ್ವ ನುಡಿಸಿರಿಯಲ್ಲಿ 'ಕರಾವಳಿಯ ಜನಪದ ಕುಣಿತಗಳು' ಕುರಿತು ಅವರು ಉಪನ್ಯಾಸ ನೀಡಿದರು.
 ಜನಪದ ಕಲಾ ಪ್ರಕಾರಕ್ಕೆ ದಲಿತರ ಕೊಡುಗೆ ಮಹತ್ವದ್ದು. ಆದರೆ ಕಲೆಗೆ ಅಸ್ಪ ೃಶ್ಯತೆಯ ಸ್ಪರ್ಶವಾಗುತ್ತಿರುವುದು ದುರಂತ. ಆಟಿಕಳೆಂಜ, ಪಿಲಿಮಂಜಿ, ಸಿದ್ಧವೇಷ, ಗೋದೋಳು, ಕುಡುಬಿಯರ ಹೋಳಿ ಕುಣಿತ, ಚೆನ್ನು, ಮಾದಿರವೆಂಬ ನಾನಾ ಆಚರಣೆಗಳಿವೆ. ಇವನ್ನು ನಿರ್ದಿಷ್ಟ ಸಮಯವಾದ ರಾತ್ರಿ ಅಥವಾ ಹಗಲಿನಲ್ಲಿ ಆಚರಿಸಬೇಕೆಂಬ ಕಟು ನಿಯಮವಿದ್ದು, ಇದು ಕೃಷಿ ಹಾಗೂ ಭೂಮಿಯ ಸಂಬಂಧವನ್ನು ಸಾರುತ್ತವೆ. ಇವುಗಳು ಸಂಸ್ಕೃತಿಯ ಭಾಗವಾಗಿದ್ದು, ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಅವನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮ ಕೈಯಲ್ಲಿದೆ ಎಂದರು.
ಮಾಧ್ಯಮಗಳಿಂದಾಗಿ ಮನೆ ಒಳಗಿನ ಮಾನವೀಯ ಸಂಬಂಧಗಳು ಹಾಳಾಗುತ್ತಿವೆ ಎಂದು ಶ್ರೀವತ್ಸ ಸಿ.ಎಸ್. ಪುತ್ತೂರು ಅಭಿಪ್ರಾಯಪಟ್ಟರು. ಈಗಿನ ಮಕ್ಕಳಿಗೆ ಛೋಟಾ ಭೀಮ್ ಮತ್ತು ಮಹಾಭಾರತದ ಭೀಮನ ನಡುವಿನ ವ್ಯತ್ಯಾಸವೇ ಅರಿಯದಂತಾಗಿದೆ ಎಂದರು.
ದಾರಿ ತಪ್ಪಿದ ವಿದ್ಯಾರ್ಥಿ ಚಳವಳಿ: ನಿತೀಶ್ ಕುಮಾರ ಮಾರ್ನಾಡು ಮಾತನಾಡಿ, ಹಿಂದೆ ವಿದ್ಯಾರ್ಥಿಗಳ ಶಕ್ತಿ ಗುಡುಗಿದರೆ ವಿಧಾನಸಭೆ ನಡುಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ವಿದ್ಯಾರ್ಥಿ ಚಳವಳಿ ದಾರಿ ತಪ್ಪಿದ್ದು, ಮಾಧ್ಯಮಗಳ ಕೈಗೆ ಸಿಕ್ಕಿ ಹಾಳಾಗಿದೆ. ಮಾಧ್ಯಮಗಳ ಕೈಗೆ ಸಿಕ್ಕು ಯುವಜನತೆ ಮಾನಸಿಕ ಗುಲಾಮರಾಗುತ್ತಿದ್ದಾರೆ ಎಂದರು. ಸಾಹಿತಿ ಡಾ.ನಾ. ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
-ದೀಕ್ಷಾ ಹೆಗಡೆ ಎಚ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.