ಮರಕತಬೈಲಿನಲ್ಲಿ ಮೆಸ್ಕಾಂನಿಂದ ಮರ ಹನನ; ಆರೋಪ
ವಿಟ್ಲ: ವಿದ್ಯುತ್ ತಂತಿ ಹಾದು ಹೋಗಲು ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಮೆಸ್ಕಾಂ ಇಲಾಖೆ ವ್ಯಕ್ತಿಯೊಬ್ಬರ ಜಮೀನಿನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಮರಗಳನ್ನು ಕಡಿದು ಹಾಕಿದ ಘಟನೆ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಸಮೀಪದ ಮರಕತಬೈಲು ನಾರ್ಶ ಎಂಬಲ್ಲಿ ನಡೆದಿದೆ. ಇದರಿಂದ ನೊಂದ ವ್ಯಕ್ತಿ ಮೆಸ್ಕಾಂನ ತಾರತಮ್ಯ ನೀತಿಯವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಮೊಹಿದ್ದೀನ್ ಅವರ ಪುತ್ರ ಬಿ. ಅಬ್ಬಾಸ್ ಅವರಿಗೆ ಸೇರಿದ ಸರ್ವೇ ನಂ. 264-1ಬಿ ಈ ಭಾಗದಲ್ಲಿ ಹೈಟೆನ್ಷನ್ ಲೈನ್ ಹಾದು ಹೋಗುತ್ತಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡ ಮೆಸ್ಕಾಂ ವತಿಯಿಂದ ಜಮೀನಿನ ಮಾಲೀಕರಿಗೆ ಯಾವುದೇ ಸೂಚನೆ ನೀಡದೇ ವಿದ್ಯುತ್ ಲೈನಿನ ಆಸುಪಾಸಿನಲ್ಲಿದ್ದ ಅಕೇಶಿಯಾ, ಗಾಳಿ ಮರ, ಸಾಗುವಾನಿ, ಕಲ್ಮರ ಮುಂತಾದ ಒಟ್ಟು ಸುಮಾರು 20 ಕ್ಕೂ ಅಧಿಕ ಮರಗಳನ್ನು ಯಂತ್ರಗಳ ಮೂಲಕ ಕಡಿದು ನೆಲಸಮ ಮಾಡಿದ್ದಾರೆ ಎಂದು ಜಮೀನಿನ ಮಾಲೀಕ ಅಬ್ಬಾಸ್ ಆರೋಪಿಸಿದ್ದಾರೆ.
ನನ್ನ ಮೇಲೆ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡವರ ಒತ್ತಡಕ್ಕೆ ಮಣಿದು ಮೆಸ್ಕಾಂ ಈ ರೀತಿಯಾಗಿ ಮರಗಳನ್ನು ಕಡಿದಿದ್ದಾರೆ ಎಂದಿದ್ದಾರೆ.
ಮೆಸ್ಕಾಂ ಇಲಾಖೆಯವರಿಗೆ ಯಂತ್ರಗಳ ಮೂಲಕ ಮರಗಳನ್ನು ಕಡಿಯಬಾರದು ಎಂಬ ನಿಯಮವಿದ್ದರೂ ಅವುಗಳನ್ನು ಯಂತ್ರಗಳ ಮೂಲಕ ಕಡಿಯಲಾಗಿದೆ. ಈ ಬಗ್ಗೆ ಅಬ್ಬಾಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ, ಸಂಬಂಧಪಟ್ಟವರಿಗೆ ನೋಟಿಸು ಜಾರಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

