ಅಡಕೆ ಕ್ಯಾನ್ಸರ್ಕಾರಕ ಅಲ್ಲ, ಕ್ಯಾನ್ಸರ್ ನಿವಾರಕ!
ಮಂಗಳೂರು: ಕೇಂದ್ರ ಸರ್ಕಾರ ಅಡಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ವಿಚಾರ ಇನ್ನೂ ಇತ್ಯರ್ಥಗೊಂಡಿಲ್ಲ. ರಾಜಕಾರಣಿಗಳಿಂದ, ಸಚಿವರಿಂದ ಕೇವಲ ಭರವಸೆಯ ಮಾತುಗಳಷ್ಟೇ ಕೇಳಿಬರುತ್ತಿದೆ. ಈ ಮಧ್ಯೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ, ಅಡಕೆಯಲ್ಲಿ ಕ್ಯಾನ್ಸರ್ ನಿವಾರಣಾ ಗುಣಗಳಿವೆ ಎಂಬುದು ಅಧ್ಯಯನವೊಂದರಿಂದ ದೃಢಪಟ್ಟಿದೆ.
ತಮಿಳುನಾಡಿನ ಮೆಡಿಕಲ್ ಕಾಲೇಜು ಇತ್ತೀಚೆಗೆ ನಡೆಸಿದ ಅಧ್ಯಯನ ಪ್ರಕಾರ ವೀಳ್ಯದೆಲೆ ಮತ್ತು ಅಡಕೆಯಲ್ಲಿ ಕ್ಯಾನ್ಸರ್ ನಿವಾರಣಾ ಗುಣಗಳಿವೆ ಎಂಬುದು ಪತ್ತೆಯಾಗಿದೆ. ಅಡಕೆ ನಿಷೇಧ ಭೀತಿಯಿಂದ ಪಾರಾಗಲು ಇರುವ ದಾರಿಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಅಡಕೆ ಮಾರುಕಟ್ಟೆ ತಜ್ಞ, ಪುತ್ತೂರು ವಿವೇಕಾನಂದ ಕಾಲೇಜು ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುಡಿ ಈ ಮಾಹಿತಿ ನೀಡಿದ್ದಾರೆ. ಇದು ಅಡಕೆ ನಿಷೇಧಕ್ಕೆ ಚಿಂತನೆ ನಡೆಸುತ್ತಿರುವ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಅಧಿಕೃತ ದಾಖಲೆ ಸಿಕ್ಕಿದಂತಾಗಿದೆ.
ಅಧ್ಯಯನದ ಅಂಶಗಳೇನು?: ತಮಿಳುನಾಡಿನ ಚೆನ್ನೈ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ನ ಮೈಕ್ರೋಬಯಾಲಜಿ ವಿಭಾಗದ ಪ್ರಭು ಎನ್ ನಡೆಸಿದ 'ಆ್ಯಂಟಿ ಮೈಕ್ರೋಬಯಾಲಜಿ ಎಫೆಕ್ಟ್ ಆಪ್ ಚ್ಯೂಯಿಂಗ್ ತಾಂಬೂಲಂ (ಬೀಟಲ್ ಲೀವ್ಸ್ ಅಂಡ್ ಇಟ್ಸ್ ಕಾಂಬಿನೇಷನ್) ಬೈ ಟೆಸ್ಟಿಂಗ್ ಸಲೈವ ಆಫ್ ವಾಲೆಂಟಿಯರಸ್' ಅಧ್ಯಯನದ ವಿಚಾರಗಳನ್ನು ಇಂಡಿಯನ್ ಜರ್ನಲ್ ಆಫ್ ಎಪ್ಲಯಿಡ್ ರಿಸರ್ಚ್ನ 2013 ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟಿದೆ. ತಾಂಬೂಲ (ವೀಳ್ಯದೆಲೆ, ಅಡಕೆ, ಸುಣ್ಣ, ಲವಂಗ, ಏಲಕ್ಕಿ ಮಿಶ್ರಣ)ವನ್ನು ಜನರು ಮುಖ್ಯವಾಗಿ ಜೀರ್ಣಕ್ರಿಯೆ ಸರಿಯಾಗಲು ಅನಾದಿ ಕಾಲದಿಂದ ಬಳಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರ ಸತ್ಯಾಸತ್ಯತೆ ಅರಿಯಲು ಪ್ರಭು ಅವರು ಗರ್ಭಿಣಿ ಮತ್ತು ಗರ್ಭಿಣಿಯೇತರರಿಗೆ ತಾಂಬೂಲ ತಿನ್ನಿಸಿ ಅಧ್ಯಯನ ನಡೆಸಿದ್ದರು. ತಾಂಬೂಲವನ್ನು ಪ್ರತ್ಯೇಕವಾಗಿ ತಿನ್ನಿಸಿದಾಗ ಅದರಿಂದ ಬರುವ ಜೊಲ್ಲು ರಸವನ್ನು ಸಂಗ್ರಹಿಸಿ ವೈಜ್ಞಾನಿಕ ಸಂಸೋಧನೆಗೆ ಒಳಪಡಿಸಿದ್ದರು. ಇದರ ತುಲನಾತ್ಮಕ ಅಧ್ಯಯನದಲ್ಲಿ ತಾಂಬೂಲ ಯಾ ಬೀಡಾ ಯಾ ಪಾನ್ ಸೇವನೆಯಿಂದ ವಿವಿಧ ರೀತಿಯ ರೋಗಗಳ ನಿವಾರಣೆ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದರು.
ಪ್ರಯೋಜನವೇನು?
ಟಿ ತಾಂಬೂಲದಲ್ಲಿ ಔಷಧೀಯ ಗುಣಗಳಿದ್ದು, ಇದನ್ನು ಬಾಯಿಹುಣ್ಣು, ಕ್ಯಾನ್ಸರ್, ಹಲ್ಲಿಗೆ ಸಂಬಂಧಿತ ರೋಗವಲ್ಲದೆ, ಬಾಯಿ ದುರ್ವಾಸನೆ ತಡೆಗೆ ಬಳಸಬಹುದು.
ಟಿ ಅಡಕೆಯಲ್ಲಿ ಒಸಡು ಗಟ್ಟಿಗೊಳಿಸುವ ಮತ್ತು ಹಲ್ಲು ಹಾಳಾಗುವುದನ್ನು ತಡೆಯುವ ಗುಣಗಳಿವೆ.
ಟಿ ತಾಂಬೂಲ ಸೇವನೆಯಿಂದ ಹಲ್ಲು ನೋವು ನಿವಾರಣೆ ಮತ್ತು ಜೀರ್ಣಕ್ರಿಯೆ ಸುಲಭವಾಗುತ್ತದೆ.
ಟಿ ಮಾಂಸಹಾರಿಗಳಿಗೆ ರೋಗ ಹೆಚ್ಚು ಬರಲು ಮುಖ್ಯ ಕಾರಣ, ಪ್ರಾಣಿಗಳನ್ನು ಕೊಲ್ಲುವಾಗ ಅವು ಹೆದರಿ ಅವುಗಳ ಮೂತ್ರ ಪಿಂಡದ ಮೇಲೆ ಪ್ರಭಾವ ಬೀರುವುದು. ಇದರೊಂದಿಗೆ ಮಾಂಸಾಹಾರ ಮತ್ತು ಮದ್ಯ ಸೇವನೆಯಿಂದ ಬರುವ ರೋಗ ಹತೋಟಿಯಲ್ಲಿಡಲು ಆಗಾಗ ತಾಂಬೂಲ ಸೇವನೆ ಉತ್ತಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

