ದಕ್ಷಿಣ ಕನ್ನಡ

ಘನತ್ಯಾಜ್ಯ ನಿರ್ವಹಣೆ ಆದ್ಯತೆಗೆ ಸೂಚನೆ

Published On :

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕಾರ್ಯದಕ್ಷತೆ ಹೆಚ್ಚಿಸಲು 60 ವಾರ್ಡ್‌ಗಳನ್ನು 6 ವಿಭಾಗಗಳಾಗಿ ವಿಭಜಿಸಿ, 10 ವಾರ್ಡ್‌ಗಳ ಪ್ರತಿ ವಿಭಾಗದ ನೈರ್ಮಲೀಕರಣದ ಉಸ್ತುವಾರಿಯನ್ನು ಉನ್ನತ ಶ್ರೇಣಿಯ ಅಧಿಕಾರಿಯಿಂದ ನಿರ್ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. ಶನಿವಾರ ನಗರ ಪರಿವೀಕ್ಷಣೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಆರೋಗ್ಯ ವಿಭಾಗದಲ್ಲಿ ಒಟ್ಟು 15 ಜನ ಕಿರಿಯ ಆರೋಗ್ಯ ನಿರೀಕ್ಷಕರ ಕೊರತೆಯಿದೆ. ನಗರದ ನೈರ್ಮಲೀಕರಣ ದಕ್ಷತೆ ಹೆಚ್ಚಿಸು ಸಲುವಾಗಿ ಆರೋಗ್ಯ ನಿರೀಕ್ಷಕರುಗಳ ಹುದ್ದೆಗೆ ನಿವೃತ್ತ ಆರೋಗ್ಯ ನಿರೀಕ್ಷಕರುಗಳು, ಆರೋಗ್ಯ ನಿರೀಕ್ಷಕರುಗಳ ಡಿಪ್ಲೋಮ ಪೂರ್ಣಗೊಳಿಸಿದವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲು ಕ್ರಮಕೈಗೊಳ್ಳಲಾಗಿದೆ. ಮುಂದಿನ 2 ವಾರದೊಳಗೆ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಅಗತ್ಯ ಸಂಖ್ಯೆಗಳ ವಾಕಿಟಾಕಿಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ.

ಜ.4ರಂದು ಜನಸಂಪರ್ಕ ಸಭೆ
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ತಾಲೂಕಿನ ಬಿ ಹೋಬಳಿ ಗ್ರಾಮಗಳಿಗೆ ಸಂಬಂಧಿಸಿ ಜ. 4 ರಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ಬಿ.ಸಿ.ಸಿ. ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.

ಪರೀಕ್ಷೆಗೆ ಅರ್ಜಿ ಆಹ್ವಾನ
ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ ನವದೆಹಲಿ ವತಿಯಿಂದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ-1 ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪರೀಕ್ಷೆಯ ಮೂಲಕ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾದಳಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಭಾರತೀಯ ಸೇನೆಗೆ ದ್ವಿತೀಯ ಪಿ.ಯು.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಾಯುಪಡೆ ಹಾಗೂ ನೌಕಾದಳಕ್ಕೆ ದ್ವಿತೀಯ ಪಿ.ಯು.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ಪಾಸಾಗಿರಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು 02-07-1995 ಹಾಗೂ 01-07-1998 ರೊಳಗೆ ಜನಿಸಿರಬೇಕು. ಜ. 20 ಕೊನೆ ದಿನ. ಅರ್ಜಿಯನ್ನು ಢಿಢಿಢಿ.್ಡಠಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅಭ್ಯರ್ಥಿಗೆ ಎತ್ತರ 157.5 ಸೆಂ.ಮೀ ದೇಹಾರ್ಡ್ಯತೆ ಇರತಕ್ಕದ್ದು. ಎಸ್.ಸಿ, ಎಸ್.ಟಿ, ಜೆ.ಸಿ.ಓ. ಮಕ್ಕಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ರು. 100 ಅರ್ಜಿ ಶುಲ್ಕ ಪಾವತಿಸಬೇಕು. ಏ. 4 ಪರೀಕ್ಷೆ  ಬೆಂಗಳೂರು ಹಾಗೂ ಧಾರವಾಡ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ 0824-2450169, 2457139  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನಿವೇಶನ ರದ್ದು ಆದೇಶ ಹಿಂದಕ್ಕೆ
ಸುಳ್ಯ: ಜಾಲ್ಸೂರು ಗ್ರಾಮದಲ್ಲಿ 1983-84 ರಲ್ಲಿ ನೀಡಲಾಗಿದ್ದ 7 ಮನೆ ನಿವೇಶನಗಳನ್ನು ಫಲಾನುಭವಿಗಳು ಅದರಲ್ಲಿ ಇಲ್ಲವೆಂಬ ಕಾರಣಕ್ಕಾಗಿ ಎ.ಸಿ.ಯವರ ಆದೇಶದಂತೆ ರದ್ದುಗೊಳಿಸಿ ಮಾಡಿದ ಆದೇಶವನ್ನು ಹೈ ಕೋರ್ಟ್‌ನ ಸೂಚನೆ ಮೇರೆಗೆ ತಹಸೀಲ್ದಾರರು ಹಿಂತೆಗೆದುಕೊಂಡಿರುವುದಾಗಿ ತಿಳಿದಿಬಂದಿದೆ. ನಿವೇಶನಗಳು ಪಡೆದ ಫಲಾನುಭವಿಗಳಲ್ಲಿಲ್ಲದೆ ಗಂಗಾಧರ ಕಾಳಮನೆ ಎಂಬವರಲ್ಲಿ ಆಶ್ರಯವಾಗಿ ಇದೆ ಎಂದು ಚಂದ್ರಕುಮಾರ್ ಕಾಳಮನೆ ಎಂಬವರು ನೀಡಿದ ದೂರಿನ ಆಧಾರದಲ್ಲಿ ಎ.ಸಿ.ಯವರು ತನಿಖೆ ನಡೆಸಿ, ತಹಸೀಲ್ದಾರರಿಗೆ ಸೂಕ್ತ ಕ್ರಮಕ್ಕೆ ಆದೇಶಸಿದ್ದರು. ಅದರಂತೆ ತಹಸೀಲ್ದಾರ್ ಡಾ. ಔದ್ರಾಮರವರು ಆ ನಿವೇಶನಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಆದೇಶ ಮಾಡಿದ್ದರು. ಆದರೆ, ಆ ವೇಳೆಗೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ಹೈ ಕೋರ್ಟ್ ಹೊಸದಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿರುವ ಮೇರೆಗೆ ತಹಸೀಲ್ದಾರರು ತಮ್ಮ ಆದೇಶವನ್ನು ಹಿಂತೆಗೆದುಕೊಂಡು ಹೊಸದಾಗಿ ತನಖೆಗೆ ಫಲಾನುಭವಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತುಳುತೇರು ಇಂದು ಉಪ್ಪಿನಂಗಡಿಗೆ
ಉಪ್ಪಿನಂಗಡಿ: ಶ್ರೀ ಕ್ಷೇತ್ರ ಒಡಿಯೂರು ವಿಜಯ ರಜತ ಸಂಭ್ರಮ 2014 ರ ಅಂಗವಾಗಿ ತುಳುನಾಡ್ದ ಜಾತ್ರೆ  ಬಲೆ ತುಳು ತೇರು ಒಯಿಪುಗ ದ ರಥವು 31ರಂದು ಉಪ್ಪಿನಂಗಡಿಗೆ ಆಗಮಿಸುವ ಮೂಲಕ ಪುತ್ತೂರು ತಾಲೂಕು ಪ್ರವೇಶಗೈಯಲಿದ್ದು, ಉಪ್ಪಿನಂಗಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.  ತುಳು ನಾಡಿನ ಪರಂಪರೆಯ ಸ್ವಾಗತದೊಂದಿಗೆ ಆಗಮಿಸುವ ರಥವನ್ನು ಉಪ್ಪಿನಂಗಡಿಯ ಪ್ರಮುಖ ಬೀದಿಯಲ್ಲಿ ಸಾಗಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಬೆಳಗ್ಗೆ 11.30 ರ ವೇಳೆಗೆ ಸಾರ್ವಜನಿಕ ಸಭೆಯನ್ನು ನಡೆಸಲಾಗುವುದು. ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರು ಸಾದ್ವಿ ಶ್ರೀ ಮಾತಾನಂದಮಯಿ ಅಶೀರ್ವಚನ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಅಲಿಮಾರ ರಘುನಾಥ ರೈ, ಮುಖ್ಯ ಭಾಷಣವನ್ನು ಉಬಾರ್ ಕೂಟದ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾಕ್ಷಿ ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಧನ್ಯಕುಮಾರ್ ರೈ, ತುಳು ತೇರ್ ಕೂಟದ ತಾಲೂಕು ಅಧ್ಯಕ್ಷ ಸವಣೂರು ಸೀತಾರಾಮ ರೈ, ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ತುಳು ತೇರ್ ಕೂಟದ ಸಂಚಾಲಕ ಪದ್ಮಾನಾಭ ಶೆಟ್ಟಿ ಭಾಗವಹಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ತುಳು ತೇರ್ ಸ್ಪರ್ಧಾ ಕೂಟದಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಗುವುದಲ್ಲದೆ, ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಉದ್ಯೋಗದಾತರಿಗೆ ಸೂಚನೆ
ಮಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಗೊಳಪಟ್ಟ ಸಂಸ್ಥೆಗಳ ಉದ್ಯೋಗದಾತರು ನಿರ್ಗಮಿತ ಕಾರ್ಮಿಕರ ಭವಿಷ್ಯನಿಧಿಗೆ ಸಂಬಂಧಿಸಿ ಸಲ್ಲಿಸಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸದಿರುವುದು ಸಂಸ್ಥೆ ಗಮನಕ್ಕೆ ಬಂದಿದೆ.
ಈ ಬಗ್ಗೆ ಅನೇಕ ಭವಿಷ್ಯನಿಧಿ ಸದಸ್ಯ ಕಾರ್ಮಿಕರು ಅನಗತ್ಯ ಕಿರುಕುಳ ಮತ್ತು ತೊಂದರೆಗೊಳಪಟ್ಟ ಕುರಿತು ದೂರು ಸಲ್ಲಿಸುತ್ತಿದ್ದಾರೆ. ಕಾರ್ಮಿಕರು ಭವಿಷ್ಯನಿಧಿಗೆ ಸಂಬಂಧಪಟ್ಟ ಅರ್ಜಿಗಳನ್ನು ತಮ್ಮ ಉದ್ಯೋಗದಾತರ ಮೂಲಕವೇ ಸಲ್ಲಿಸಬೇಕಾಗಿದ್ದು, ಅರ್ಜಿಯನ್ನು ಭರ್ತಿ ಮಾಡಿ 5 ದಿನದೊಳಗೆ ಆಯಾ ಪ್ರದೇಶದ ಭವಿಷ್ಯನಿಧಿ ಕಚೇರಿಗೆ ಸಲ್ಲಿಸವುದು ಉದ್ಯೋಗದಾತರ ಕರ್ತವ್ಯ.ಇಲ್ಲವಾದಲ್ಲಿ ಕಾಯ್ದೆ ಪ್ರಕಾರ ದಂಡನೆಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.