ದಕ್ಷಿಣ ಕನ್ನಡ

ಅತ್ಯಾಚಾರ ಪ್ರಕರಣಗಳ ಕಾನೂನು ತಿದ್ದುಪಡಿಯಾಗಲಿ-ಡಾ.ಭಡ್ಕೂರ್

Published On :

ಮಂಗಳೂರು: ಅತ್ಯಾಚಾರ ತನಿಖೆಯಲ್ಲಿ ಬಾಲಾಪರಾಧಿಗಳನ್ನು ಗುರುತಿಸುವ ಕಾನೂನನ್ನು ತಿದ್ದುಪಡಿ ಮಾಡಿ ಬಿಗಿಗೊಳಿಸಬೇಕು. ಅಲ್ಲದೆ ಅತ್ಯಾಚಾರಕ್ಕೆ ಒಳಗಾದವರನ್ನು ವೈದ್ಯಕೀಯ ಪರಿಶೀಲನೆ ನಡೆಸಲು ಮಹಿಳಾ ತಜ್ಞರ ಕಾರ್ಯಪಡೆ ನೇಮಿಸಬೇಕು ಎಂದು ಬೋಪಾಲ್‌ನ ಭಾರತೀಯ ವಿಧಿವಿಜ್ಞಾನ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಸ್. ಭಡ್ಕೂರು ಹೇಳಿದ್ದಾರೆ.
 ನಗರದ ಭಾರತೀಯ ವಿಧಿವಿಜ್ಞಾನ ವೈದ್ಯಕೀಯ ಸಂಸ್ಥೆ ಹಾಗೂ ಮಣಿಪಾಲ ವಿಶ್ವವಿದ್ಯಾಲಯ ವತಿಯಿಂದ ಶುಕ್ರವಾರ ಟಿ.ಎಂ. ಪೈ ಸಭಾಂಗಣದಲ್ಲಿ ನಡೆದ ಫೋರೆನ್ಸಿಕ್ ಮೆಡಿಕಾನ್ 2013 ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ದಿಲ್ಲಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ, ಆರೋಪಿ ಬಾಲಾಪರಾಧಿಯಾಗಿದ್ದು, ಮರಣದಂಡನೆ ನೀಡಲಾಗದು ಎಂಬ ಕಾನೂನಿನ ತೀರ್ಪು ದುರದೃಷ್ಟಕರ. ಹಿಂದೆ ಶಿಕ್ಷಣ ವ್ಯವಸ್ಥೆಗೆ ಅನುಸಾರವಾಗಿ ಕಾನೂನು ರಚನೆಯಾಗಿದೆ. ಪ್ರಬುದ್ಧರಾಗಲು 18 ವರ್ಷ ತುಂಬಬೇಕಾಗಿತ್ತು. ಆದರೆ ಇಂದು ಬಹುಬೇಗನೆ ಪ್ರಬುದ್ಧರಾಗುತ್ತಾರೆ. ಇವುಗಳನ್ನು ಗಮನದಲ್ಲಿರಿಸಿ ಕಾನೂನು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದರು.
 ಅತ್ಯಾಚಾರ ಪ್ರಕರಣದಲ್ಲಿ ವಿಧಿವಿಜ್ಞಾನ ಅಧಿಕಾರಿಗಳು ಹಾಗೂ ವೈದ್ಯರು ನೀಡುವ ವರದಿಯನ್ನು ನ್ಯಾಯಾಲಯ ಪರಿಗಣಿಸುತ್ತದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪರಿಶೀಲನೆ ನಡೆಯುವಾಗ ವೈದ್ಯರು ಕೇಳುವ ಪ್ರಶ್ನೆಗೆ ಉತ್ತರಿಸಲು ಮುಜುಗರ ಉಂಟಾಗಿ, ವೈದ್ಯರು ಸೂಕ್ತ ಮಾಹಿತಿಯನ್ನು ನೀಡದೆ ವರದಿ ಪರಿಷ್ಕೃತವಾಗಿರುವುದಿಲ್ಲ. ಹಾಗಾಗಿ ಸಂಸ್ಥೆ ಮಹಿಳಾ ತಜ್ಞರ ಕಾರ್ಯಪಡೆಯನ್ನು ರಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
 ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆ ಎಡಿಜಿಪಿ ಡಾ. ರಾಜವೀರ್ ಶರ್ಮಾ, ವಿಧಿವಿಜ್ಞಾನ ಶಾಸ್ತ್ರವು ಕಾನೂನಿನ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ವಿದೇಶದಲ್ಲಿ ಪೊಲೀಸರ ಮತ್ತು ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ದೇಶದಲ್ಲಿ ಕಾರ್ಯದಕ್ಷತೆ ಕಡಿಮೆ ಇದೆ.
ಇವುಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ವಿಧಿವಿಜ್ಞಾನ ಶಾಸ್ತ್ರದಲ್ಲಿ ಶಿಕ್ಷಣ, ಸಂಶೋಧನೆ, ತರಬೇತಿಗಳಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
 ಇದೇ ಸಂದರ್ಭ 'ಹಕ್ ಮತ್ತು ಬೋಸ್‌' ಜೀವಮಾನದ ಸಾಧನೆ ಪ್ರಶಸ್ತಿಯನ್ನು ವೈದ್ಯ ಡಾ.ಸಿ. ರಾಮ್ ಮೋಹನ್ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಮಣಿಪಾಲ್ ವಿವಿ ಸಹಕುಲಪತಿ ಡಾ. ಸುರೇಂದ್ರ ವಿ. ಶೆಟ್ಟಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಕೆ. ಅನಿಲ್, ಸಂಸ್ಥೆಯ ಡಾ. ಆದರ್ಶ್, ಡಾ. ಪ್ರದೀಪ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.