ದಕ್ಷಿಣ ಕನ್ನಡ

ಅಪ್‌ಡೇಟ್ ಆಗದ ಆಧಾರ್ ವೆಬ್‌ತಾಣ

Published On :

ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಹೂಪಯೋಗಿ ಗುರುತಿನ ಚೀಟಿ ಆಧಾರ್ ಕಾರ್ಡ್ ಬಗ್ಗೆ ಮಾಹಿತಿಗೆ ವೆಬ್‌ಸೈಟ್‌ಗೆ ಕ್ಲಿಕ್ ಮಾಡಿದರೆ ಕಂಗಾಲಾಗುತ್ತೀರಿ. ಯಾಕೆಂದರೆ ವೆಬ್‌ಸೈಟ್ ಇನ್ನೂ ಅಪ್‌ಡೇಟ್ ಆಗಿಲ್ಲ.
ರಾಜ್ಯದಲ್ಲಿ ಪಡಿತರ ಚೀಟಿ ಗೊಂದಲ ಮುಂದುವರಿದಾಗ ಸರ್ಕಾರ ಸಾರ್ವಜನಿಕರಿಗೆ ವೆಬ್‌ಸೈಟ್ ಮುಖೇನ ಸುಲಭದಲ್ಲಿ ಮಾಹಿತಿಯನ್ನು ತೆರೆದಿಟ್ಟಿತು. ಈಗ ಅದೇ ಮಾದರಿಯಲ್ಲಿ ಆಧಾರ್‌ಗೆ ವೆಬ್‌ಸೈಟ್‌ನ್ನು ರೂಪಿಸಿದ್ದರೂ ಸಾರ್ವಜನಿಕರಿಗೆ ಮಾತ್ರ ಸರಿಯಾದ ಮಾಹಿತಿಯೇ ಸಿಗುತ್ತಿಲ್ಲ.
 ಆಧಾರ್ ವೆಬ್‌ಸೈಟ್‌ಗೆ (ಢಿಢಿಢಿ.್ಡ್ಝಜಛ್ಝ.್ಜ್ಟಢ.್ಝಟಿ)ಭೇಟಿ ನೀಡಿದರೆ ಕೆಲವು ಜಿಲ್ಲೆಗಳ ಹೆಸರೇ ಇಲ್ಲ. ಆಧಾರ್ ಯೋಜನೆ ಎಲ್ಲೆಡೆ ಜಾರಿ ಮಾಡುತ್ತಿರುವುದಾಗಿ ಕೇಂದ್ರ ಹೇಳಿದ್ದು, ಸರ್ಕಾರಿ ಸವಲತ್ತು ಪಡೆಯಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ ಎಂಬುದನ್ನು ಪ್ರಕಟಿಸಿದೆ. ಹಾಗಾಗಿ ಆಧಾರ್ ಕಾರ್ಡ್‌ಗೆ ನಾಗರಿಕರು ಮುಗಿಬೀಳುವ ಸನ್ನಿವೇಶ ಅನಿವಾರ್ಯವಾಗಲಿದೆ.
ವೆಬ್‌ಸೈಟ್‌ನಲ್ಲಿ ಮಾಹಿತಿ ಕೊರತೆ: ಆಧಾರ್‌ನ ಯುಐಡಿ ವೆಬ್‌ಸೈಟ್‌ಗೆ ಕ್ಲಿಕ್ ಮಾಡಿದರೆ ಬಲಭಾಗದಲ್ಲಿ ಇಕೋ ಸಿಸ್ಟಮ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್‌ನ್ನು ಹೇಗೆ ನೋಂದಾಯಿಸಬೇಕು ಎಂಬಲ್ಲಿ ಕ್ಲಿಕ್ ಮಾಡಿದರೆ ರಾಜ್ಯ, ಜಿಲ್ಲೆ, ಸ್ಥಳೀಯ ಪ್ರದೇಶ ಆಯ್ಕೆಯನ್ನು ಕೇಳುತ್ತದೆ. ಅದನ್ನು ಭರ್ತಿ ಮಾಡಬೇಕು. ಆದರೆ ಇದಾವುದೂ ಸಮರ್ಪಕವಾಗಿ ಇಲ್ಲ. ಉದಾಹರಣೆಗೆ ದ.ಕ. ಜಿಲ್ಲೆಯಲ್ಲಿ ಆಧಾರ್ ಅನುಷ್ಠಾನವಾಗುತ್ತಿದೆ. ವೆಬ್‌ಸೈಟ್‌ನಲ್ಲಿ ದ.ಕ.ಜಿಲ್ಲೆಯ ಹೆಸರೇ ನಾಪತ್ತೆ. ಈ ಬಗ್ಗೆ ಜಿಲ್ಲಾಡಳಿತದಲ್ಲಿ ಪ್ರಶ್ನಿಸಿದರೆ ಯಾವುದೇ ಮಾಹಿತಿ ಸಿಗುವುದಿಲ್ಲ.
 ಪ್ರಸ್ತುತ ಅಡುಗೆ ಅನಿಲ ಸಂಪರ್ಕ ಅಥವಾ ರಿಫೀಲ್‌ಗೆ ಮೊಬೈಲ್‌ನಲ್ಲೇ ಕಾಯ್ದಿರುವ ವ್ಯವಸ್ಥೆ ಜಾರಿಗೆ ಬಂದಿದೆ. ಹೀಗೆ ಬುಕ್ಕಿಂಗ್‌ಗೆ ಮುಂದಾಗುವಾಗ ಮೊಬೈಲ್‌ನಲ್ಲಿ 'ಆಧಾರ್ ಕಾರ್ಡ್ ಕಡ್ಡಾಯ, ಆಧಾರ್ ಕಾರ್ಡ್ ಪ್ರತಿಯನ್ನು ಡೀಲರ್‌ಗಳಲ್ಲಿ ಒದಗಿಸಿ' ಎಂದು ಧ್ವನಿಮುದ್ರಿತ ಮಾತು ಹಾಗೂ ಸಂದೇಶ ಬರುತ್ತದೆ. ಈ ಮಧ್ಯೆ ಆಧಾರ್ ಕಾರ್ಡ್‌ಗೆ ಫೆ.15 ಕೊನೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಈಚೆಗೆ ಬೆಂಗಳೂರಲ್ಲಿ ಹೇಳಿಕೆ ನೀಡಿರುವುದು ಅಡುಗೆ ಅನಿಲ ಗ್ರಾಹಕರ ಚಿಂತೆಗೆ ಕಾರಣವಾಗಿದೆ.
7 ಜಿಲ್ಲೆಗಳಲ್ಲಿ ಎನ್‌ಪಿಆರ್: ಈ ಕುರಿತು ಬೆಂಗಳೂರಿನಲ್ಲಿರುವ ಆಧಾರ್ ಯೋಜನೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಇಷ್ಟು, ಕರ್ನಾಟಕದಲ್ಲಿ 21 ಜಿಲ್ಲೆಯಲ್ಲಿ ಆಧಾರ್ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಈಗ ತುಮಕೂರು, ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಆಧಾರ್ ಕಾರ್ಡ್ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಆಧಾರ್ ವಿಸ್ತರಣೆಗೊಂಡಿದೆ. ಬಾಕಿ 7 ಜಿಲ್ಲೆಗಳಲ್ಲಿ ಎನ್‌ಪಿಆರ್(ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಕಾರ್ಡ್ ಮಾತ್ರ. ಎನ್‌ಪಿಆರ್ ಕಾರ್ಡ್ ಇರುವಲ್ಲಿ ಆಧಾರ್ ಕಾರ್ಡ್ ಬೇಕಿಲ್ಲ. ಎರಡೂ ಒಂದೇ ಎನ್ನುತ್ತಾರೆ.

ವೆಬ್‌ಸೈಟ್ ಅಪ್‌ಡೇಟ್ ಮಾಡ್ತಾರಂತೆ
'ಆಧಾರ್ ಯೋಜನೆಯ ಮಾಹಿತಿಯನ್ನು ಅಪ್‌ಡೇಟ್ ಮಾಡಿಲ್ಲ. ಅದರಲ್ಲಿರುವ ಹಳೆ ಮಾಹಿತಿಗಳು ಅಪ್‌ಡೇಟ್ ಆಗಿಲ್ಲ. ಈಗಷ್ಟೇ ಅಪ್‌ಡೇಟ್ ಮಾಡಲು ನಿರ್ಧರಿಸಲಾಗಿದೆ. ಒಂದೆರಡು ದಿನಗಳಲ್ಲಿ ಅಪ್‌ಡೇಟ್ ಆಗಲಿದ್ದು, ನಂತರ ಸಾರ್ವಜನಿಕರಿಗೆ ಆಧಾರ್ ಯೋಜನೆ ಸಂಪರ್ಕಕ್ಕೆ ಸುಲಭವಾಗಲಿದೆ' ಎನ್ನುವುದು ಆಧಾರ್ ಯೋಜನೆಯ ಸಲಹೆಗಾರ ಸಂದೀಪ್‌ರ ಸಮಜಾಯಿಷಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.