ದಕ್ಷಿಣ ಕನ್ನಡ

ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟಿಷ್ ವೀಸಾ ಸುಲಭ

Published On :

ಮಂಗಳೂರು: ಬ್ರಿಟಿಷ್ ಸರ್ಕಾರ ವೀಸಾವನ್ನು ಸರಳೀಕೃತಗೊಳಿಸಿದ್ದು, ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಈ ಸೌಲಭ್ಯ ನೀಡುತ್ತಿದೆ ಎಂದು ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಇಯಾನ್ ಫೆಲ್ಟನ್ ಹೇಳಿದರು.
 ಯುನೈಟೆಡ್ ಕಿಂಗ್‌ಡಮ್ ಮೂಲದ ಅಟ್ಲಾಂಟಾ ಡಾಟಾ ಬ್ಯೂರೊಗೆ ಪಡೀಲ್‌ನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ, ಉದ್ಯಮ ಕ್ಷೇತ್ರದಲ್ಲಿ ಭಾರತ ಮತ್ತು ಇಂಗ್ಲೆಂಡ್‌ಗೆ ಉಪಯೋಗವಾಗುವ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ. ಯುಕೆ ವಿವಿಗಳಲ್ಲಿ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡುತ್ತಿದ್ದೇವೆ. ಮಾನವೀಯತೆ, ಮೂಲ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂಗ್ಲೆಂಡ್ ವಿವಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಕಲಿಕೆಗೆ ಮಿತಿ ಹಾಕಿಲ್ಲ ಎಂದರು.
 ಕೆಸಿಸಿಐ ಅಧ್ಯಕ್ಷ ಮೊಹಮ್ಮದ್ ಅಮೀನ್ ಮಾತನಾಡಿ, ಇಲ್ಲಿನವರು ಸುಶಿಕ್ಷಿತರು ಮತ್ತು ಪ್ರತಿಭಾವಂತರು ಆಗಿರುವುದರಿಂದ ಮಂಗಳೂರನ್ನು ಮಾಹಿತಿ ತಂತ್ರಜ್ಞಾನ ಕಣಜವನ್ನಾಗಿ ಮಾಡಲು ಪ್ರಯತ್ನ ಪಡುತ್ತಿದ್ದೇವೆ ಎಂದರು.
 ಅಲೋಶಿಯಸ್ ತಾಂತ್ರಿಕ ಕಾಲೇಜು ನಿರ್ದೇಶಕ ಡೆಂಝಿಲ್ ಲೋಬೊ ಮಾತನಾಡಿ, ಮಂಗಳೂರಿನ ಸಂಘಟನೆಗಳು ಶಿಕ್ಷಣ ಸಂಸ್ಥೆಗಳು ವಿಶ್ವ ದರ್ಜೆ ಗುಣಮಟ್ಟ ಹೊಂದಿದೆ. ಶಿಕ್ಷಣ ಮಟ್ಟ ಇನ್ನಷ್ಟು ಹೆಚ್ಚಿಸಲು ಆಗಾಗ ಸಿಲೆಬಸ್ ಮೇಲ್ದರ್ಜೆಗೇರಿಸಬೇಕು ಎಂದರು
 ಯುಕೆ ಅಟ್ಲಾಂಟಿಕ್ ಡಾಟಾ ಸಂಸ್ಥೆ ನಿರ್ದೇಶಕ ಮಾರ್ಕ್ ಫೊಲ್ಲೆಟ್, ಮಂಗಳೂರು ಬ್ಯೂರೊ ನಿರ್ದೇಶಕ ದೀಪಕ್ ಶರ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.