ಅನಧಿಕೃತ ಆಶ್ರಮದಲ್ಲಿ ಗೃಹಬಂಧನ: 27 ಮಂದಿ ರಕ್ಷಣೆ
ಮಂಗಳೂರು: ನಂತೂರಿನ ಅನಧಿಕೃತ ವೃದ್ಧಾಶ್ರಮಕ್ಕೆ ದಾಳಿ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರು ಸಂಕಷ್ಟದಲ್ಲಿ ಬದುಕುತ್ತಿದ್ದ 27 ಮಂದಿಯನ್ನು ರಕ್ಷಿಸಿದ ಪೊಲೀಸರು, ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಿಶನ್ ಕಂಪೌಂಡ್ನ ಆಶ್ರಯ ಎಂಬ ಬಂಗಲೆಯಲ್ಲಿ ಯಾವುದೇ ದಾಖಲೆ ಇಲ್ಲದೆ ಆಶ್ರಮ ನಡೆಸಲಾಗುತ್ತಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಕದ್ರಿ ಪೊಲೀಸರ ಸಹಕಾರ ಪಡೆದು ಭಾನುವಾರ ತಡರಾತ್ರಿ ದಾಳಿ ನಡೆಸಿದರು.
ಆಶ್ರಮವಾಸಿಗಳ ಮೇಲೆ ಹಲ್ಲೆ ನಡೆಯುತ್ತಿದ್ದು, ರಕ್ಷಣೆ ಒದಗಿಸುವಂತೆ ಅಲ್ಲಿನ ಯುವತಿಯೊಬ್ಬಳು ಸ್ಥಳೀಯರಲ್ಲಿ ಮನವಿ ಮಾಡಿದ್ದಳು. ಆಶ್ರಮದಲ್ಲಿ ವೃದ್ಧರ ಸಹಿತ ಎಲ್ಲರಿಗೂ ಹೊಡೆಯುತ್ತಾರೆ. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಆಶ್ರಮದಲ್ಲಿ ತಪ್ಪಿಸಿಕೊಂಡಿದ್ದ ಯುವತಿ ಪೊಲೀಸರಲ್ಲಿ ಆರೋಪ ಮಾಡಿದ್ದಾರೆ.
ಜೈಲು ಕೊಣೆಯಂತಿರುವ ಪುಟ್ಟ, ಪುಟ್ಟ ಕೋಣೆಗಳಲ್ಲಿ ಇಬ್ಬರನ್ನು ಇಡಲಾಗುತ್ತಿತ್ತು. ಮಹಿಳೆ ಮತ್ತು ಪುರುಷರನ್ನು ಒಟ್ಟಿಗೆ ಇರಿಸುತ್ತಿದ್ದರು. ವೃದ್ಧರನ್ನು ಕಡೆಗಣಿಸುತ್ತಿದ್ದರು. ಒಂದೇ ಹೊತ್ತು ಊಟ ನೀಡುತ್ತಿದ್ದರು. ಶುಚಿತ್ವ ಇಲ್ಲ, ಮಾಲೀಕ ಕೆಟ್ಟದಾಗಿ ನಿಂದಿಸುತ್ತಿದ್ದ ಎನ್ನುವುದು ಆಶ್ರಮವಾಸಿಗಳ ದೂರು.
ಮಕ್ಕಳು ತಮ್ಮ ವೃದ್ಧ ತಂದೆ ತಾಯಿಯನ್ನು ಈ ಆಶ್ರಮದಲ್ಲಿ ಬಿಟ್ಟು ಅವರ ನಿರ್ವಹಣೆಗೆ ಪ್ರತಿ ತಿಂಗಳ ಹಣ ನೀಡುತ್ತಿದ್ದರು. ಆ ಹಣವನ್ನು ಆಶ್ರಮದ ಮಾಲೀಕ ಸರಿಯಾಗಿ ವಿನಿಯೋಗಿಸುತ್ತಿರಲಿಲ್ಲ. ಒಂದು ವರ್ಷದಿಂದ ಆಶ್ರಮ ನಡೆಯುತ್ತಿದೆ. ಆದರೆ ಆಶ್ರಮದ ಒಳಗೆ ಕಿರುಕುಳ, ದೌರ್ಜನ್ಯ ನಡೆಯುವ ವಿಚಾರ ತಿಳಿದಿಲ್ಲ.
ಆಶ್ರಮವನ್ನು ನಡೆಸುತ್ತಿದ್ದವರು, ಉಡಾಫೆಯಿಂದ ವರ್ತಿಸಿ, ಕಂಪೌಂಡ್ ಒಳಗೆ ಯಾರನ್ನು ಬರಲು ಬಿಡುತ್ತಿರಲಿಲ್ಲ.
ಭಾನುವಾರ ರಾತ್ರಿ ಆಶ್ರಮದ ಯುವತಿಯೊಬ್ಬಳು ತಪ್ಪಿಸಿಕೊಂಡ ಬಳಿಕವೇ ಇಲ್ಲೊಂದು ಆಶ್ರಮ ನಡೆಯುತ್ತಿದೆ ಎಂಬ ವಿಚಾರ ಹೊರ ಜಗತ್ತಿಗೆ ಗೊತ್ತಾಗಿದೆ. 'ವೃದ್ಧರಿಗೆ ಹಲ್ಲೆ ನಡೆಸಿದರೆ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡುಲಾಗುತ್ತಿತ್ತು. ಆಹಾರದಲ್ಲಿ ಮದ್ದು ಬೆರೆಸಿ ಕೊಡುತ್ತಿದ್ದರು. ಅಗತ್ಯ ಇಲ್ಲದ ಔಷಧ ನೀಡುತ್ತಿದ್ದರು. ಆಶ್ರಮ ಒಳಗೆ ಹೋದವರಿಗೆ ಬಾಹ್ಯ ಜಗತ್ತಿನ ಸಂಪರ್ಕವೇ ಇರಲಿಲ್ಲ' ಎಂಬುದು ಯುವತಿಯ ಆರೋಪ.
'ಭಾನುವಾರ ಬೆಳಗ್ಗೆ 8 ಗಂಟೆಗೆ ಯುವತಿಯೊಬ್ಬಳು ಕಂಪೌಂಡ್ ಹಾರಿ ತಪ್ಪಿಸಿಕೊಂಡು ಓಡುತ್ತಿದ್ದಳು. ಜನರು ಈಕೆಯನ್ನು ಸಂಪೂರ್ಣ ವಿಚಾರಿಸುವಷ್ಟರಲ್ಲಿ ಮಾಲೀಕ ಉಪೇಂದ್ರ ನಾಯಕ್ ಬಂದು ಹಿಡಿದು, ಕಾರಿನಲ್ಲಿ ಆಶ್ರಮಕ್ಕೆ ವಾಪಸ್ ಕರೆದುಕೊಂಡು ಹೋಗಿದ್ದ' ಎಂದು ಸ್ಥಳೀಯರು ಹೇಳುತ್ತಾರೆ.
ಅನಧಿಕೃತ ಆಶ್ರಮ ನಡೆಸುತ್ತಿದ್ದ ಮಾಲಿಕ ಉಪೇಂದ್ರ ನಾಯಕ್ಗೆ ಸ್ಥಳೀಯರು ಥಳಿಸಿದ್ದಾರೆ. ಆರೋಪಿಯನ್ನು ಕದ್ರಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

