ದಕ್ಷಿಣ ಕನ್ನಡ

ಆಶ್ರಮದಲ್ಲಿ ಗೃಹಬಂಧನ: 27 ಮಂದಿ ರಕ್ಷಣೆ

Published On :

ಮಂಗಳೂರು: ನಂತೂರಿನ ಅನಧಿಕೃತ ವೃದ್ಧಾಶ್ರಮಕ್ಕೆ ದಾಳಿ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ ಮತ್ತು ಪೊಲೀಸರು ಸಂಕಷ್ಟದಲ್ಲಿದ್ದ 27 ಮಂದಿಯನ್ನು ರಕ್ಷಿಸಿ, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಿಷನ್ ಕಾಂಪೌಂಡ್ನ ಸಂದೇಶ ಎಂಬ ಬಂಗಲೆಯಲ್ಲಿ ದಾಖಲೆ ಇಲ್ಲದೆ ನಡೆಯುತ್ತಿದ್ದ ವೃದ್ಧಾಶ್ರಮದ ಮೇಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಕದ್ರಿ ಪೊಲೀಸರ ಸಹಕಾರ ಪಡೆದು ಭಾನುವಾರ ತಡರಾತ್ರಿ ದಾಳಿ ನಡೆಸಿದರು.  ಆಶ್ರಮವಾಸಿಗಳ ಮೇಲೆ ಹಲ್ಲೆ ನಡೆಯುತ್ತಿದ್ದು, ವೃದ್ಧರ ಸಹಿತ ಎಲ್ಲರಿಗೂ ಹೊಡೆಯುತ್ತಿದ್ದಾರೆ ಎಂದು ಆಶ್ರಮದಿಂದ ತಪ್ಪಿಸಿಕೊಂಡ ಯುವತಿಯೊಬ್ಬಳು ಸ್ಥಳೀಯ ಪೊಲೀಸರಲ್ಲಿ ನೋವು ತೋಡಿಕೊಂಡಿದ್ದಳು.
ಜೈಲಿನಲ್ಲಿರುವಂಥ ಪುಟ್ಟ, ಪುಟ್ಟ ಶುಚಿತ್ವ ಇಲ್ಲದ ಕೋಣೆಗಳಲ್ಲಿ ಇಬ್ಬರನ್ನು ಇಡಲಾಗುತ್ತಿತ್ತು. ಮಹಿಳೆ ಮತ್ತು ಪುರುಷರನ್ನು ಒಟ್ಟಿಗೆ ಇರಿಸುತ್ತಿದ್ದು, ವೃದ್ಧರನ್ನು ಕಡೆಗಣಿಸಲಾಗುತ್ತಿತ್ತು. ಒಂದೇ ಹೊತ್ತು ಊಟ ನೀಡುತ್ತಿದ್ದರು. ಮಾಲೀಕ ಕೆಟ್ಟದಾಗಿ ನಿಂದಿಸುತ್ತಿದ್ದ ಎನ್ನುವುದು ಆಶ್ರಮವಾಸಿಗಳ ದೂರು.  ಮಕ್ಕಳು ತಮ್ಮ ವೃದ್ಧ ತಂದೆ ತಾಯಿಯನ್ನು ಈ ಆಶ್ರಮದಲ್ಲಿ ಬಿಟ್ಟು ನಿರ್ವಹಣೆಗೆಂದು ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದರು. ವರ್ಷದಿಂದ ಆಶ್ರಮ ನಡೆಸುತ್ತಿದ್ದ ಮಾಲೀಕ ಮಕ್ಕಳು ಕಳುಹಿಸುತ್ತಿದ್ದ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರಲಿಲ್ಲ. ಆಶ್ರಮದೊಳಗೆ ಅನ್ಯರಿಗೆ ಪ್ರವೇಶವೂ ಇರಲಿಲ್ಲ. ಭಾನುವಾರ ರಾತ್ರಿ ಆಶ್ರಮದ ಯುವತಿಯೊಬ್ಬಳು ತಪ್ಪಿಸಿಕೊಂಡ ಬಳಿಕವೇ ಇಲ್ಲೊಂದೈ ಆಶ್ರಮ ನಡೆಯುತ್ತಿದೆ ಎಂಬ ವಿಚಾರ ಹೊರ ಜಗತ್ತಿಗೆ ಗೊತ್ತಾಗಿದೆ.
'ಭಾನುವಾರ ಬೆಳಗ್ಗೆ 8 ಗಂಟೆಗೆ ಯುವತಿಯೊಬ್ಬಳು ಕಾಂಪೌಂಡ್ ಹಾರಿ ಓಡುತ್ತಿದ್ದಳು. ಜನರು ಈಕೆಯನ್ನು ಸಂಪೂರ್ಣ ವಿಚಾರಿಸುವಷ್ಟರಲ್ಲಿ ಮಾಲೀಕ ಉಪೇಂದ್ರ ನಾಯಕ್ ಬಂದು ಹಿಡಿದು, ಕಾರಿನಲ್ಲಿ ಆಶ್ರಮಕ್ಕೆ ವಾಪಸ್ ಕರೆದುಕೊಂಡು ಹೋಗಿದ್ದ' ಎನ್ನುತ್ತಾರೆ ಸ್ಥಳೀಯರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.