ದಕ್ಷಿಣ ಕನ್ನಡ

ಇಂದಿನಿಂದ ಅಟ್ಟಾಮುಟ್ಟ ಮಕ್ಕಳ ನಾಟಕೋತ್ಸವ

Published On :

ಪುತ್ತೂರು: ನಿರತನಿರಂತ ಪುತ್ತೂರು, ಬಹುವಚನಂ ಆಯೋಜನೆಯ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವಕ್ಕೆ  ಹತ್ತನೇ ವರ್ಷದ ರಂಗಸಂಭ್ರಮ. ಈ ರಂಗ ಸಂತಸದ ಅಂಗವಾಗಿ 6ರಿಂದ 8 ರ ವರೆಗೆ ಪ್ರೇಮಾ ಕಾರಂತ ನೆನಪಿನ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವವನ್ನು ಪುತ್ತೂರು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು,  ಮೂರು ಮಕ್ಕಳ ನಾಟಕಗಳ ಸಹಿತ ಒಟ್ಟು ಐದು ನಾಟಕಗಳು ಪ್ರದರ್ಶನಗೊಳ್ಳಲಿದೆ. 6ರಂದು ಸಂಜೆ 6 ಗಂಟೆಗೆ ಆರಂಭಗೊಳ್ಳುವ  ನಾಟಕೋತ್ಸವವನ್ನು ಪುತ್ತೂರು ಪೂರ್ವದ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಪುತ್ತೂರಾಯ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಪ್ರೊ.ವಿ.ಬಿ. ಅರ್ತಿಕಜೆ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಆಶಯದ ನುಡಿ ಹಂಚಿಕೊಳ್ಳುವರು. ಬಳಿಕ ರಾಮಕೃಷ್ಣ ಪ್ರೌಢಶಾಲಾ ಮಕ್ಕಳ ವಿಜ್ಞಾನ ಸಂಘದಿಂದ ಸೇವ್ ವಾಟರ್ ನಿರ್ದೇಶನ- ವಸಂತಿ .ಕೆ ಬಹುಭಾಷಾ ನಾಟಕ ಹಾಗೂ ಕಿನ್ನರ ಮೇಳ ತುಮರಿ ತಂಡದ ಸುಶೀಲಾ ಕೆಳಮನೆ ಅಭಿನಯದ ಗಿರಿಬಾಲೆ (ನಿ-ಬಿ.ಆರ್. ವೆಂಕಟ್ರಮಣ ಐತಾಳ್) ನಾಟಕ ಪ್ರದರ್ಶನಗೊಳ್ಳಲಿದೆ. 7 ರಂದು ಸಂಜೆ ರಂಗಸಂತಸವು ಸುದಾನ ವಸತಿಯುತ ಶಾಲಾ ಸಂಚಾಲಕ ರೆ. ವಿಜಯ ಹಾವರ್‌ನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಳಿಕ ಪುತ್ತೂರು ಸುದಾನ ವಸತಿಯುತ ಶಾಲೆಯ ಲಹರಿ ರಂಗತಂಡದ ವಿದ್ಯಾರ್ಥಿಗಳಿಂದ ಉತ್ತರ (ನಿ- ಮೌನೇಶ ವಿಶ್ವಕರ್ಮ) ನಾಟಕ ಹಾಗೂ ಮೈಸೂರಿನ ಜೆ.ಎಸ್.ಎಸ್. ಕಲಾಮಂಟಪದ ಪುಟಾಣಿಗಳಿಂದ ಪುಷ್ಪರಾಣಿ (ನಿ- ಚಂದ್ರಶೇಖರ ಆಚಾರ್) ನಾಟಕ ಪ್ರದರ್ಶನಗೊಳ್ಳಲಿದೆ. 8 ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ಪುತ್ತೂರು ತಾಲೂಕು ಕಸಾಪ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ಸಮಾರೋಪದ ನುಡಿಗಳನ್ನು ಹಂಚಿಕೊಳ್ಳುವರು ಎಂದು ನಿರತನಿರಂತ-ಬಹುವಚನಂ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.