ನೆಲ್ಯಾಡಿ ಕೇಂದ್ರಆಗ್ಲಿ, ಇಲ್ಲ ಇದ್ದ ಹಾಗೇ ಇರ್ಲಿ
ಉಪ್ಪಿನಂಗಡಿ: ರಾಜ್ಯ ಮುಖ್ಯಮಂತ್ರಿಗಳು ತನ್ನ ಬಜೆಟ್ ಮಂಡನೆಯಲ್ಲಿ ಕಡಬ ತಾಲೂಕಿನ ಘೋಷಣೆ ಮಾಡಿ ಕಡಬ ಪರಿಸರದಲ್ಲಿ ಹಬ್ಬದ ವಾತಾವರಣ ಮೂಡಿಸುತ್ತಿದ್ದಂತೆಯೆ, ನೆಲ್ಯಾಡಿಯಲ್ಲಿ ಅಸಮಾಧಾನ ಹೊಗೆಯಾಡಿದೆ.
ಕಡಬ ಕೇಂದ್ರಿತ ತಾಲೂಕು ರಚನೆಗೆ ಅಸಮ್ಮತಿ ಸೂಚಿಸಿ, ತಾಲೂಕು ರಚನೆಯಾಗುವುದಾದರೆ ನೆಲ್ಯಾಡಿ ಕೇಂದ್ರಿತ ತಾಲೂಕು ರಚನೆಯಾಗಲಿ, ಅಸಾಧ್ಯವೆಂದಾದರೆ ಈಗಿರುವ ಸ್ಥಿತಿಯೇ ಮುಂದುವರಿಯಬೇಕೆಂದು ಒತ್ತಾಯಿಸಲಾಗಿದೆ.
ಇದ್ದಹಾಗೇ ಇರಲಿ: ನೆಲ್ಯಾಡಿಯ ತಾಲೂಕು ಹೋರಾಟ ಸಮಿತಿಯ ಸದಸ್ಯರು ಮತ್ತು ಬೆಳ್ತಂಗಡಿ ತಾಲೂಕಿನಿಂದ ಸೇರ್ಪಡೆಗೊಳ್ಳಲಿರುವ ಗ್ರಾಮಗಳ ಗ್ರಾಮಸ್ಥರು ಶನಿವಾರ ನೆಲ್ಯಾಡಿಯ ಕೃಷ್ಣ ಭವನ ಸಭಾಂಗಣದಲ್ಲಿ ತುರ್ತು ಸಭೆ ಸೇರಿ ಕಡಬ ತಾಲೂಕು ಘೋಷಣೆ ಬಗ್ಗೆ ವಿರೋಧ ವಿಲ್ಲ. ಆದರೆ ತಮ್ಮ ಗ್ರಾಮಗಳನ್ನು ಕಡಬಕ್ಕೆ ಸೇರ್ಪಡೆಗೊಳಿಸುವಲ್ಲಿ ನೆಲ್ಯಾಡಿಯನ್ನು ಕೇಂದ್ರವಾಗಿರಿಸಬೇಕು. ಇದಕ್ಕೆ ಅವಕಾಶವಿಲ್ಲದಿದ್ದಲ್ಲಿ ಈಗ ಇರುವ ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲೇ ಉಳಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಲಾಯಿತು.
ನೆಲ್ಯಾಡಿ ತಾ. ಹೋರಾಟ ಸಮಿತಿ ಅಧ್ಯಕ್ಷ ಮಹಮ್ಮದ್ ಮತ್ತು, ಗೌರವಾಧ್ಯಕ್ಷ ಅಬ್ರಹಾಂ ವರ್ಗೀಸ್ , ಕಾರ್ಯದರ್ಶಿ ಹರಿಪ್ರಸಾದ್, ಸಲಹೆಗಾರರಾದ ಕೆ.ಪಿ. ಥೋಮಸ್, ನ್ಯಾಯವಾದಿ ಇಸ್ಮಾಯಿಲ್ , ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ, ಮಾಜಿ ತಾ.ಪಂ. ಸದಸ್ಯ ಸರ್ವೋತ್ತಮ ಗೌಡ, ಗೋಳಿತ್ತೊಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರಾ, ಜಯಾನಂದ ಬಂಟ್ರಿಯಾಲ್, ಜಯಕರ್ನಾಟಕ ತಾಲೂಕು ಉಪಾಧ್ಯಕ್ಷ ನಾಝಿಂ ಸಾಹೇಬ್, ಶಿರಾಡಿ ಗ್ರಾ.ಪಂ. ಸದಸ್ಯ ಸೆಬಾಸ್ಟಿನ್, ಇಚಿಲಂಪಾಡಿಯ ಜಾರ್ಜಿ ಕುಟ್ಟಿ ಉಪದೇಶಿ, ಬೆಳ್ತಂಗಡಿ ತಾಲೂಕು ಜಾತ್ಯಾತೀತ ಜನತಾದಳ ಅಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ, ಅರಸಿನಮಕ್ಕಿ ತಾ.ಪಂ.ಸದಸ್ಯೆ ಚೇತನಾ ಚಂದ್ರಶೇಖರ್, ಮಾಜಿ ತಾ.ಪಂ. ಸದಸ್ಯ ವಾಮನ ತಾಮಣಕರ್, ಕೊಕ್ಕಡ ತಾ.ಪಂ ಸದಸ್ಯೆ ಸುಗುಣಾ, ನಿಡ್ಲೆ ತಾ.ಪಂ. ಸದಸ್ಯ ವಿಷ್ಣು ಮರಾಠೆ, ಶಿಶಿಲ ಗ್ರಾ.ಪಂ. ಅಧ್ಯಕ್ಷ ಶ್ರೀಧರ ದಾಮ್ಲೆ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ಶಿಶಿಲ, ಬೋಳೋಡಿ ಶ್ಯಾಮ ಭಟ್ ಹಾಗೂ ಸಾರ್ವಜನಿಕರು ಇದ್ದರು.
ಬುಧವಾರ ಪ್ರತಿಭಟನೆ
ನೆಲ್ಯಾಡಿ ಮತ್ತದರ ಸುತ್ತಮುತ್ತಲ ಗ್ರಾಮವಾಸಿಗರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಬುಧವಾರದಂದು ನೆಲ್ಯಾಡಿಯಲ್ಲಿ ಪಕ್ಷ ರಹಿತವಾಗಿ ಬೃಹತ್ ಪ್ರತಿಭಟನೆಗೆ ನಿರ್ಣಯಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

