ವಿಟ್ಲದಲ್ಲಿ ಮದ್ಯ ಅಕ್ರಮ ಮಾರಾಟ: ವ್ಯಕ್ತಿ ಸೆರೆ
ವಿಟ್ಲ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಓರ್ವ ಆರೋಪಿ ಸಹಿತ 28 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿ ಸೋಮವಾರ ನಡೆದಿದೆ. ಅನಂತಾಡಿ ಕರಿಂಕ ನಿವಾಸಿ ಶಾಂತಾರಾಮ ಶೆಟ್ಟಿ (40) ಬಂಧಿತ ಆರೋಪಿ. ಈತ ಮಂಗಳಪದವು ಎಂಬಲ್ಲಿರುವ ತನ್ನ ಗೂಡಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಪಡೆದ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ನೇತೃತ್ವದಲ್ಲಿ ಪ್ರವೀಣ್ ರೈ ಹಾಗೂ ರಾಮಚಂದ್ರ ಎಂಬವರ ತಂಡ ದಾಳಿ ನಡೆಸಿದೆ.
ನಿಂತಿದ್ದ ಬಸ್ ಗೆ ಡಿಕ್ಕಿ:ಬೈಕ್ ಸವಾರ ಸಾವು
ಮಂಗಳೂರು: ಕೊಟ್ಟಾರಚೌಕಿ ಶ್ರೀರಾಮ ಬಿಲ್ಡಿಂಗ್ ಎದುರುಗಡೆ ಭಾನುವಾರ ತಡರಾತ್ರಿ ನಿಂತಿದ್ದ ಬಸ್ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ, ಶ್ರೀನಿವಾಸ ಫಾರ್ಮಸಿ ಕಾಲೇಜು ವಿದ್ಯಾರ್ಥಿ ನಿಕುಂಜಿ ಪಟೇಲ್ (23) ಮೃತಪಟ್ಟಿದ್ದಾರೆ. ಕೂಳೂರಿನಿಂದ ಕುಂಟಿಕಾನದತ್ತ ಬೈಕ್ನಲ್ಲಿ ಸಾಗುತ್ತಿದ್ದಾರ ರಾತ್ರಿ 12 ಗಂಟೆಗೆ ಅಪಘಾತ ಸಂಭವಿಸಿದೆ. ಕಾವೂರು ಪೊಲೀಸರಿಗೆ ಶ್ರೀರಾಮ ಬಿಲ್ಡಿಂಗ್ ಕಾವಲುಗಾರ ಮಾಹಿತಿ ನೀಡಿದ್ದಾರೆ. ಪಟೇಲ್ ಗುಜರಾತಿ ಮೂಲದವರು, ಕಪಿತಾನಿಯೊದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮನೆಗೆ ನುಗ್ಗಿ ಹಲ್ಲೆ: ಇಬ್ಬರ ಬಂಧನ
ಸುಳ್ಯ: ರಾತ್ರಿ ವೇಳೆ ಮನೆ ನುಗ್ಗಿದ ಯುವಕರಿಬ್ಬರು ಮನೆಯ ಯಜಮಾನನಿಗೆ ಹಲ್ಲೆ ನಡೆಸಿ, ಮನೆಯೊಡತಿ ಬೊಬ್ಬಿಟ್ಟಾಗ ಪರಾರಿಯಾದ ಘಟನೆ ಕುರುಂಜಿಭಾಗ್ನಲ್ಲಿ ಸಂಭವಿಸಿದೆ. ವಿನೋಬಾನಗರದ ನವೀನ್ ಹಾಗೂ ಯತೀಶ್ ಕಚ್ಚಿಲ ಎಂಬವರು ರಾತ್ರಿ 12ರ ಸುಮಾರಿಗೆ ಕುರುಂಜಿಭಾಗ್ನ ರುಕ್ಮಯ್ಯ ಎಂಬವರ ಮನಗೆ ಹೋಗಿ ರುಕ್ಮಯ್ಯರ ಮೇಲೆ ಹಲ್ಲೆ ನಡೆಸಿದರು. ನಳಿನಿ ಬೊಬ್ಬೆ ಹೊಡೆ ದಾಗ ರುಕ್ಮಯ್ಯರ ಅಣ್ಣ ಬಂದರು. ಆಗ ಯುವಕರಿಬ್ಬರು ಮನೆಯಿಂದ ಓಡಿ ಹೋದರು. ತಕ್ಷಣ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲಿಂದ ತಪ್ಪಿಸಿಕೊಂಡ ಯುವಕರು ಸುಳ್ಯದ ಲಾಡ್ಜ್ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಅವರನ್ನು ಅಲ್ಲಿಂದ ವಶಕ್ಕೆ ಪಡೆದುಕೊಂಡರು.ಘಟನೆಯ ಬಗ್ಗೆ ರುಕ್ಮಯ್ಯರ ಪತ್ನಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

