ದಕ್ಷಿಣ ಕನ್ನಡ

ಧನ, ತೋಳ್ಬಲ, ಜಾತಿ ರಾಜಕಾರಣದಿಂದ ಅಧಿಕಾರ ಯಂತ್ರ ಕುಸಿತ: ಮದನ್ ಪಟೇಲ್

Published On :

ಕಾಪು: ರಾಜ್ಯದಲ್ಲಿ ಧನಬಲ, ತೋಳ್ಬಲ ಹಾಗೂ ಜಾತಿ ರಾಜಕಾರಣದಿಂದಾಗಿ ಅಧಿಕಾರ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮದನ್ ಪಟೇಲ್  ಆರೋಪಿಸಿದ್ದಾರೆ.
ಇತ್ತೀಚೆಗೆ ಇಲ್ಲಿನ ಹೊಸಮಾರಿ ಗುಡಿ ಬಳಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ನೂತನ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಕ್ಷವು ಮುಂದಿನ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರುವುದು ಖಚಿತ ಎಂದು ಅವರು ಹೇಳಿದರು.
ನೂತನ ಕಚೇರಿ ಹಾಗೂ ಸಮಾವೇಶವನ್ನು ಅಂಧ ಮಹಿಳೆ ಸರೋಜಿನಿ ಚೋಂಗ್ಲ ಪೂಜಾರಿ ಕೈಯಲ್ಲಿ ಉದ್ಘಾಟಿಸಲಾಯಿತು.
ಪಕ್ಷದ ರಾಜ್ಯ ವಕ್ತಾರ ರವೀಂದ್ರ ರೇಶ್ಮೆ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಜನರನ್ನು ವಂಚಿಸಿ ಹೈಕಮಾಂಡನ್ನು ಮೆಚ್ಚಿಸುವ ಕಾರ್ಯ ಮಾಡುತ್ತಿವೆ. ಕೋಮುವಾದ, ಜಾತಿ ಸಂಘರ್ಷ, ನೈತಿಕ ಪೊಲೀಸ್ ಗಿರಿಯಿಂದಾಗಿ ಕರಾವಳಿ ಜನ ಬೇಸತ್ತು ಹೋಗಿದೆ ಎಂದರು. ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಕಾಪು ಘಟಕಾಧ್ಯಕ್ಷ ಪ್ರವೀಣ್ ಪೂಜಾರಿ, ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಕೆಎಂ ಇಬ್ರಾಹಿಂ ಕೋಟಾ, ಮುಖಂಡರಾದ ಇಸ್ಮಾಯಿಲ್, ಚೇತನ್   ರಾಜ್ ಶೆಟ್ಟಿ, ರೇಣುಕಾ ರಾಜೇಶ್, ಭಾರತಿ ನಾಯಕ್, ಪುಷ್ಪಾ ನಾಯಕ್, ಸತೀಶ್ ಪೂಜಾರಿ, ಮಂಜುನಾಥ ಬಳ್ಕೂರು, ದೇವರಾಜ್ ಪಾಟೀಲ್, ಪ್ರಶಾಂತ್ ಕರ್ಕೇರ ಮತ್ತಿತರರು ಇದ್ದರು. ಉದಯ ಕುಮಾರ್ ಶಿರ್ವ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.