ದಕ್ಷಿಣ ಕನ್ನಡ

'ಪಶ್ಚಿಮಘಟ್ಟದಲ್ಲಿ ಕಿರುಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಿಲ್ಲ'

Published On :

ಮಂಗಳೂರು: ಪಶ್ಚಿಮ ಘಟ್ಟದಲ್ಲಿ  ಯಾವುದೇ ಹೊಸ ಕಿರು ಜಲ ವಿದ್ಯುತ್ ಯೋಜನೆಗಳಿಗೆ ಸರ್ಕಾರ ಅನುಮತಿ ನೀಡಿಲ್ಲ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದ್ದಾರೆ.  
ಪಶ್ಚಿಮ ಘಟ್ಟದಲ್ಲಿ ಕಿರು ಜಲ ವಿದ್ಯುತ್ ಯೋಜನೆಗಳಿಗೆ 220 ಕಂಪನಿಗಳನು ಅರ್ಜಿ ಸಲ್ಲಿಸಿವೆ.  60 ಕಂಪನಿಗಳು ಭೂಸ್ವಾಧೀನ ಪಡಿಸಿಕೊಳ್ಳುವ ಕೆಲಸ ಆರಂಭಿಸಿದೆ. 10 ಸಂಸ್ಥೆಗಳು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರಕ್ಕೆ ಅರ್ಜಿ ಸಲ್ಲಿಸಿವೆ. ಆದರೆ ಸರ್ಕಾರ ಇವುಗಳಿಗೆ ಅನುಮತಿ ನೀಡಿಲ್ಲ. ಕೇವಲ ಸಮೀಕ್ಷೆಗೆ ನೀಡಿದ ಅನುಮತಿ ಪತ್ರವನ್ನೇ ಮುಂದಿಟ್ಟುಕೊಂಡು ಪಶ್ಚಿಮ ಘಟ್ಟಪ್ರದೇಶದಲ್ಲಿ ಖಾಸಗಿ ಜಾಗ ಖರೀದಿ ಮಾಡುತ್ತಿವೆ. ಇನ್ನು ಕೆಲವೆಡೆ ಕಂಪನಿಗಳು ಲಾಭ ಆಸೆ ತೋರಿಸಿ, ಕಂಪನಿ ಪರವಾಗಿ ಜನರನ್ನು ಒಟ್ಟು ಮಾಡುತ್ತಿವೆ. ಗ್ರಾಮಗಳಲ್ಲಿನ ಜನರನ್ನು ಒಡೆಯುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಡುಗಳಲ್ಲಿ ಜೇನು ನೊಣಗಳಿಗೆ ಬೇಕಾದ ಹೂವುಗಳಿಲ್ಲ, ಮರಗಳಿಲ್ಲ. ನಶಿಸುತ್ತಿರುವ ಜೇನುಗಳ ಸಂರಕ್ಷಣೆ ಆಗಬೇಕು. ಹರಾಜು ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು. ಬೆಂಕಿ ಇಟ್ಟು ಕೊಲ್ಲಬಾರದು. ಸ್ಥಳೀಯರಿಗೆ ಜೇನು ಸಂಗ್ರಹಿಸಲು ಅನುಮತಿ ನೀಡಬೇಕು. ಹಳ್ಳಿ ಪ್ರದೇಶಧಲ್ಲಿ ಔಷಧೀಯ ಸಸ್ಯ, ಗಿಡಮೂಲಿಕೆ ಬೆಳೆಸುವ, ಬಳಸು ಜಾಗೃತಿ ಮೂಡಿಸಬೇಕು ಎಂದರು.
ಜೇನು ಕಾರ್ಯಾಗಾರ: ಫೆ.28ರಂದು ಯಲ್ಲಾಪುರದಲ್ಲಿ ಜೇನು ಕೃಷಿ ವಿವಿ ಅಧ್ಯಯನ ವರದಿ ಬಿಡುಗಡೆಯಾಗಲಿದೆ. ಜೇನು ಸಂಸ್ಕರಣೆ ಘಟಕ ಆರಂಭವಾಗಲಿದೆ. ಸುಳ್ಯದಲ್ಲಿ 15ರಂದು ಜೇನು ಕಾರ್ಯಾಗಾರ ನಡೆಯಲಿದೆ. ಹಲಸು ಮರ ಬೆಳಸಲು ವಿಶೇಷ ಅಭಿಯಾನ ನಡೆಸಬೇಕು. ಹಲಸು ಮೇಳ ನಡೆಸಬೇಕು ಎಂದರು.
1 ಸಾವಿರ ಕೋಟಿ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವವರ ಪುನರ್ವಸತಿಗೆ 10 ಕೋಟಿ ಅನುದಾನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಕರಾವಳಿ ಹಸಿರು ಕವಚಕ್ಕೆ 10 ಕೋಟಿ ಅನುದಾನ, ಅಳಿವೆ ಕಾಂಡ್ಲಾ ರಕ್ಷಣೆಗೆ ಮೊದಲ ಬಾರಿಗೆ ಬಜೆಟ್‌ನಲ್ಲಿ ಹಣ ಇಡಲಾಗಿದೆ ಎಂದರು.
ಪಶ್ಚಿಮ ಘಟ್ಟ ಕಾರ್ಯಪಡೆ ಶಿಫಾರಸಿನಂತೆ ಈ ಬಾರಿ ಅರಣ್ಯ ಸಂರಕ್ಷಣೆ, ಹಸೀರೀಕರಣಕ್ಕೆ 1 ಸಾವಿರ ಕೋಟಿ ಹಣ ಇಡಲಾಗಿದ್ದು ಇದೊಂದು ದಾಖಲೆ ಎಂದರು.
ಕಸ ಮತ್ತು ಗ್ಯಾಸ್ ಸಮಸ್ಯೆಗೆ ಪರಿಹಾರ ಬಯೋ ಗ್ಯಾಸ್: ಅಡುಗೆ ತ್ಯಾಜ್ಯದಿಂದ ಬಯೋ ಗ್ಯಾಸ್  ಉತ್ಪಾದನೆಗೆ ಸಬ್ಸಿಡಿ ಇದೆ. ನಗರದಲ್ಲಿ ಆರಂಭಿಸಲು ಉತ್ತೇಜನ ನೀಡಲಾಗುತ್ತದೆ. ಇದರಿಂದ ಕಸದ ಸಮಸ್ಯೆಗೂ ಪರಿಹಾರ ಲಭಿಸುತ್ತದೆ. ಗ್ಯಾಸ್ ಸಮಸ್ಯೆಯೂ ನಿವಾರಣೆಯಾಗುತ್ತದೆ. ಬಜಪೆ ಮತ್ತು ಹೊಸಂಗಡಿ ಶಾಲೆಗಳಲ್ಲಿ ಬಯೋ ಗ್ಯಾಸ್ ನಿಂದ ಅಕ್ಷರ ದಾಸೋಹ ನಡೆಯುತ್ತಿದೆ ಎಂದು ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಆಯುಷ್ ರೇಂಜಲ್ ಕ್ಲಿಫರ್ಡ್ ಡಿಸೋಜ, ಅರಣ್ಯ ಇಲಾಖೆ ಪ್ರಭಾರ ಅಧಿಕಾರಿ ಪದ್ಮನಾಭ ಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.