ಧರ್ಮದ ತಳಹದಿಯಲ್ಲಿ ಸಮಾಜ ಸಂಘಟನೆ ಸುಲಭ: ಡಾ. ಹೆಗ್ಗಡೆ
ಬೆಳ್ತಂಗಡಿ: ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಧರ್ಮದ ತಳಹದಿಯಲ್ಲಿ ಸಮಾಜದ ಸಂಘಟನೆ ಸುಲಭ ಸಾಧ್ಯ, ಇಲ್ಲವಾದಲ್ಲಿ ವಿಘಟನೆಯಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ಜೈನ ಸ್ವಯಂಸೇವಕರ ತಂಡಗಳ ಸಂಚಾಲಕರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಜಿನ ಸೇವಕರು ಜನಸೇವಕರೂ ಆಗಬೇಕು. ಮಠ-ಮಂದಿರಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಜೊತೆಗೆ ಧರ್ಮ ಜಾಗೃತಿಗಾಗಿ ಶ್ರಮಿಸಬೇಕು. ಸಮಸ್ಯೆಗಳು ಎದುರಾದಾಗ ಚರ್ಚೆ, ಸಮಾಲೋಚನೆಯಿಂದ ಪರಿಹರಿಸಬೇಕು ಎಂದರು.
ರಾಜ್ಯ ಸಂಚಾಲಕ ಬೆಳ್ತಂಗಡಿಯ ನೇಮಿರಾಜ ಆರಿಗಾ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲಿಯೂ ಸಂಚಾಲಕರನ್ನು ನೇಮಿಸಿ ಸಂಘಟನೆಯನ್ನು ಬಲಪಡಿಸಲಾಗುವುದು. ತಮ್ಮ ಸಂಘಟನೆಯಿಂದ ಯಾವುದೇ ರೀತಿಯಲ್ಲಿ ಧನ ಸಂಗ್ರಹ ಮಾಡುವುದಿಲ್ಲ ಹಾಗೂ ಸಭೆಗಳನ್ನು ನಡೆಸುವುದಿಲ್ಲ. 14-65 ವರ್ಷ ಪ್ರಾಯದವರು ಸಂಘಟನೆಯ ಸದಸ್ಯರಾಗಿ ಸಹಕರಿಸಬೇಕು ಎಂದು ಹೇಳಿದರು.
ರಾಜ್ಯ ಸಹ ಸಂಚಾಲಕ ವಿಮಲ್ ತಾಳಿಕೋಟೆ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಚಾಲಕ ವೃಷಭರಾಜ ಆರಿಗಾ ಮತ್ತು ಉಡುಪಿ ಜಿಲ್ಲಾ ಸಂಚಾಲಕ ಸುನಿಲ್ ಕುಮಾರ್ ಬಜಗೋಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

