ದಕ್ಷಿಣ ಕನ್ನಡ

ಮುಷ್ಕರಕ್ಕೆ ಜಿಲ್ಲಾ ಸರ್ಕಾರಿ ನೌಕರರ ಬೆಂಬಲವಿಲ್ಲ

Published On :

ಮಂಗಳೂರು: ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದ ಸರ್ಕಾರಿ ನೌಕರರ ಸಂಘವು ಫೆ. 20 ಮತ್ತು 21 ರಂದು ನಡೆಸುವ ಮುಷ್ಕರಕ್ಕೆ ದ.ಕ. ಜಿಲ್ಲಾ ಸರ್ಕಾರಿ ನೌಕರರ ಸಂಘವು ಭಾಗವಹಿಸುತ್ತಿಲ್ಲ ಎಂದು ಹೇಳಿದೆ.
ಸರ್ಕಾರದ ಮಲತಾಯಿ ಧೋರಣೆ ಹಾಗೂ ತಾರತಮ್ಯ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಜಿಲ್ಲಾ ಸರ್ಕಾರಿ ನೌಕರರ ಸಂಘ ಸಮಿತಿ ರಚನೆ ಮಾಡಿದ್ದು, ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಜಿ. ಪಿಂಟೋ  ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಬಾಡಿಗೆ ಮನೆ ಭತ್ಯೆ ಮಂಜೂರಲ್ಲಿ ಸರ್ಕಾರ ಬೆಂಗಳೂರು ಮತ್ತು ನಗರದ ಇತರ ಭಾಗದಲ್ಲಿ ವಾಸಿಸುವ ನೌಕರರಿಗೆ ವಿಭಿನ್ನ ರೀತಿಯಲ್ಲಿ ನೀತಿ ಅನುಷ್ಠಾನಗೊಳಿಸಿ ಮೋಸ ಮಾಡಿದೆ. ಬೆಂಗಳೂರು ನಗರ ಪ್ರದೇಶದ ಸರ್ಕಾರಿ ನೌಕರರಿಗೆ 2007ರ ಅಧಿಸೂಚನೆಯಂತೆ ಬಾಡಿಗೆ ಮನೆ ಭತ್ಯೆಯಲ್ಲಿ ಶೇ. 30 ಮಂಜೂರು ನೀಡಿದ್ದು, ರಾಜ್ಯದ ಇತರ ನಗರದಲ್ಲಿ ವಾಸಿಸುವ ನೌಕರರಿಗೆ ಮಾತ್ರ 2001ರ ಅಧಿಸೂಚನೆಯಂತೆ ಶೇ 25 ಮಂಜೂರಾತಿ ನೀಡಿ ಅನ್ಯಾಯವೆಸಗಿದೆ ಎಂದು ಹೇಳಿದರು.
 ಸಂಘದ ಕಾರ್ಯದರ್ಶಿ ಪ್ರಕಾಶ್ ನಾಯಕ್, ಕೋಶಾಧಿಕಾರಿ ಗೋಪಾಲಕೃಷ್ಣ ಮತ್ತಿತ್ತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.