ಬ್ಯಾಂಕ್ಗಳು ಬದುಕಲು ಬದಲಾವಣೆ ಅನಿವಾರ್ಯ
ಮಂಗಳೂರು: ಅತಿ ಕ್ಷಿಪ್ರಗತಿಯಲ್ಲಿ ಬದಲಾವಣೆ ಕಾಣುತ್ತಿರುವ ಈ ದಶಕದಲ್ಲಿ ಬ್ಯಾಂಕ್ಗಳು ಬದುಕಬೇಕಾದರೆ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಗ್ರಾಹಕರ ಬಳಿಗೆ ಬ್ಯಾಂಕ್ಗಳು ಹೋಗಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಹೇಳಿದರು.
ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು. ಬ್ಯಾಂಕ್ ಪ್ರಗತಿಯಲ್ಲಿ ತಾಂತ್ರಿಕತೆ ಪ್ರಧಾನ ಪಾತ್ರ ವಹಿಸುತ್ತದೆ. ವಿಶ್ವದ ಬ್ಯಾಂಕ್ಗಳು ತಾಂತ್ರಿಕತೆ ಉನ್ನತೀಕರಣಕ್ಕೆ ಬ್ಯಾಂಕ್ಗಳು 10 ಬಿಲಿಯನ್ ಡಾಲರ್ ವ್ಯಯಿಸಿದೆ. ಭಾರತದಲ್ಲಿ 310 ಮಿಲಿಯ ಉಳಿತಾಯ ಖಾತೆಗಳಿವೆ. ಆದರೆ ಜನಸಂಖ್ಯೆಯ ಶೇ.83 ಮಂದಿಗೆ ಬ್ಯಾಂಕ್ ಇನ್ನೂ ಕೈಗೆಟಕಿಲ್ಲ ಎಂದರು. ಯುರೋಪ್ ಬ್ಯಾಂಕ್ಗಳು ಏಕಾಏಕಿ ಕುಸಿತ ಕಂಡಿರುವ ಬಗ್ಗೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಏರಿಳಿತಗಳ ಬಗ್ಗೆ ಕರ್ಣಾಟಕ ಬ್ಯಾಂಕ್ ತಜ್ಞರಿಂದ ಅಧ್ಯಯನ ನಡೆಸಲು ಮುಂದಾಗಬೇಕು ಎಂದರು.
ಬ್ಯಾಂಕ್ಗಳ ಮೂಲಕ ವಂಚನೆ ಹೆಚ್ಚಾಗುತ್ತಿದೆ. ಮುಂಬಯಿಯಲ್ಲಿ ಅತಿ ಹೆಚ್ಚು ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿದೆ. 787 ವಂಚನೆ ಪ್ರಕರಣಗಲ್ಲಿ 1049 ಕೋಟಿ ಕಳೆದುಕೊಂಡಿದ್ದಾರೆ. ಬ್ಯಾಂಕ್ಗಳಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿದ್ದು ದೇಶದಲ್ಲಿ ಪ್ರತಿವರ್ಷ 800 ಮಿಲಿಯ ವಂಚನೆ ನಡೆಯುತ್ತಿದೆ ಎಂದರು. ಕರ್ಣಾಟಕ ಬ್ಯಾಂಕ್ ಪದನಿಮಿತ್ತ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ಮುಂದಿನ ಹತ್ತು ವರ್ಷದಲ್ಲಿ ಕರ್ಣಾಟಕ ಬ್ಯಾಂಕ್ ಶತಮಾನ ಆಚರಿಸಲಿದ್ದು, ಇನ್ನಷ್ಟು ಪ್ರಬಲರಾಗಿ ಮೂಡಿಬರಲಿದ್ದೇವೆ ಎಂದರು. ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಪಿ. ಜಯರಾಮ ಭಟ್ ಸ್ವಾಗತಿಸಿದರು. ಜಯರಾಮ ಹಂದೆ ವಂದಿಸಿದರು. ಬಳಿಕ ಚೆನ್ನೈನ ಗಣೇಶ್ ಮತ್ತು ಕಮರೇಶ್ ಅವರಿಂದ ದ್ವಂದ್ವ ಪಿಟೀಲು ವಾದನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

