ದಕ್ಷಿಣ ಕನ್ನಡ

ಸುಬ್ರಹ್ಮಣ್ಯ: ಕಾಡಾನೆ ದಾಳಿ, ಅಪಾರ ಬೆಳೆಹಾನಿ

Published On :

ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ಪರಿಸರದ ತೋಟಗಳಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆ ತನಕ ಕಾಡಾನೆಗಳು ದಾಳಿ ಮಾಡಿ ತೆಂಗು, ಅಡಕೆ ಮರಗಳು ಹಾಗೂ ಬಾಳೆಗಿಡಗಳನ್ನು ದ್ವಂಸ ಮಾಡಿವೆ. ಇಂಜಾಡಿಯ ಪುರುಷೋತ್ತಮ ಭಟ್ ಎಂಬವರ ತೋಟದ ಫಲಭರಿತ ಅಡಕೆ ಮರಗಳನ್ನು ಕಾಡಾನೆಗಳು ನಾಶ ಮಾಡಿವೆ. ಅಲ್ಲದೆ, ಇಂಜಾಡಿಯ ದೇವಸ್ಥಾನದ ತೋಟಕ್ಕೆ ಲಗ್ಗೆಯಿಟ್ಟು ಫಲಭರಿತ ತೆಂಗಿನ ಮರವನ್ನು ಉರುಳಿಸಿದೆ. ಕೃಷಿಕ ರಾಮಶರ್ಮರ ತೋಟಕ್ಕೆ ದಾಳಿಯಿಟ್ಟ ಕಾಡಾನೆ, ರಾತ್ರಿಯಿಂದ ಮುಂಜಾನೆ ತನಕ ತೋಟದಲ್ಲಿ ಅಡ್ಡಾಡಿ ಅಡಕೆ ಮತ್ತು ಬಾಳೆ ಗಿಡಗಳನ್ನು ದ್ವಂಸಗೊಳಿಸಿದೆ. ನೀರಾವರಿಗಾಗಿ ಇರುವ ಸ್ಪ್ರಿಂಕ್ಲರ್, ಜೆಟ್ ಹಾಗೂ ಪೈಪ್‌ಲೈನ್‌ಗಳು ಆನೆಗಳ ತುಳಿತಕ್ಕೆ ಸಿಕ್ಕಿ ಜಖಂಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.