ದಕ್ಷಿಣ ಕನ್ನಡ

ಪುತ್ತೂರು ಪುರಸಭೆ ಚುನಾವಣೆ: 21 ನಾಮಪತ್ರ ಸಲ್ಲಿಕೆ

Published On :

ಪುತ್ತೂರು: ಪುತ್ತೂರು ಪುರಸಭಾ ಚುನಾವಣಾ ನಾಮಪತ್ರ ಸಲ್ಲಿಕೆಯ 5ನೇ ದಿನವಾದ ಗುರುವಾರ 20 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ 9, ಬಿಜೆಪಿಯಿಂದ 5, ಜೆಡಿಎಸ್‌ನಿಂದ 4 ಮತ್ತು 3 ಪಕ್ಷೇತರ ನಾಮಪತ್ರ ಸಲ್ಲಿಕೆಯಾಗಿದೆ. ಓರ್ವ ಕಾಂಗ್ರೆಸ್ ಅಭ್ಯರ್ಥಿ ಪಕ್ಷೇತರರಾಗಿಯೂ ನಾಮಪತ್ರ ಸಲ್ಲಿಸಿದ್ದಾರೆ.
ಕಬಕ 2ನೇ ವಾರ್ಡ್‌ಗೆಗೆ ಜೀವಂದರ್ ಜೈನ್ (ಬಿಜೆಪಿ),  ಬನ್ನೂರು 4ನೇ ವಾರ್ಡ್‌ಗೆ ಗ್ರೆಗೋರಿ ಲೋಬೋ (ಜೆಡಿಎಸ್) ಮತ್ತು ಅಳಿಕೆ ಚಂದ್ರಶೇಖರ ಪಾಟಾಳಿ (ಪಕ್ಷೇತರ), ಚಿಕ್ಕಮುಡ್ನೂರು 7ನೇ ವಾರ್ಡ್‌ಗೆ ಚೇತನ್ ಕುಮಾರ್ (ಜೆಡಿಎಸ್), ಪುತ್ತೂರು ಕಸ್ಬಾ 8ನೇ ವಾರ್ಡ್‌ಗೆ ಇಗ್ನೇಶಿಯಸ್ ಡಯಾಸ್ (ಕಾಂಗ್ರೆಸ್ ಮತ್ತು ಪಕ್ಷೇತರ), ಶರುಣ್ ವಿಲ್‌ಫ್ರೆಡ್ ಸಿಕ್ವೇರಾ (ಕಾಂಗ್ರೇಸ್), ಇ. ಸುಬ್ರಹ್ಮಣ್ಯ ಭಟ್ (ಪಕ್ಷೇತರ) ಮತ್ತು ಜಗನ್ನಾಥ ರೈ (ಬಿಜೆಪಿ), ಪುತ್ತೂರು ಕಸ್ಬಾ 9ನೇ ವಾರ್ಡ್‌ಗೆ ಕೆ. ಗಣೇಶ್ ಕುಮಾರ್ (ಕಾಂಗ್ರೆಸ್) ಮತ್ತು ಚಂದ್ರಾವತಿ (ಕಾಂಗ್ರೆಸ್), ಪುತ್ತೂರು ಕಸ್ಬಾ 10ನೇ ವಾರ್ಡ್‌ಗೆ ವಾಣಿ ಶ್ರೀಧರ್ (ಕಾಂಗ್ರೆಸ್), ಪುತ್ತೂರು ಕಸ್ಬಾ 11ನೇ ವಾರ್ಡ್‌ಗೆ ಅನಿಮೋನ್ (ಜೆಡಿಎಸ್), ಪುತ್ತೂರು ಕಸ್ಬಾ 14ನೇ ವಾರ್ಡ್‌ಗೆ ಸ್ವರ್ಣಲತಾ ಹೆಗ್ಡೆ (ಬಿಜೆಪಿ), ಪುತ್ತೂರು ಕಸ್ಬಾ 19ನೇ ವಾರ್ಡ್‌ಗೆ ದೀಕ್ಷಾ ಪೈ (ಕಾಂಗ್ರೆಸ್), ಪುತ್ತೂರು ಕಸ್ಬಾ 21ನೇ ವಾರ್ಡ್‌ಗೆ ಶಶಿಕಲಾ ಜ್ಞಾನೇಶ್ವರ್ (ಬಿಜೆಪಿ) ಮತ್ತು ಸೀಮಾ ಗಂಗಾಧರ್ (ಕಾಂಗ್ರೇಸ್), ಪುತ್ತೂರು ಕಸ್ಬಾ 22ನೇ ವಾರ್ಡ್‌ಗೆ ರೇಖಾ ಯಶೋಧರ್ (ಕಾಂಗ್ರೆಸ್), ಕೆಮ್ಮಿಂಜೆ 23ನೇ ವಾರ್ಡ್‌ಗೆ ಸುರೇಶ್ ಕುಮಾರ್ ಎಂ. (ಕಾಂಗ್ರೆಸ್), ಆರ್ಯಾಪು 26ನೇ ವಾರ್ಡ್‌ಗೆ ಚೆನ್ನಪ್ಪ ಗೌಡ (ಜೆಡಿಎಸ್) ಮತ್ತು ಬಲ್ನಾಡು 27ನೇ ವಾರ್ಡ್‌ಗೆ ಮೋಹಿನಿ ನಾಯ್ಕ(ಬಿಜೆಪಿ) ನಾಪಪತ್ರ ಸಲ್ಲಿಸಿದ್ದಾರೆ. ಈ ತನಕ 24 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬಂಟ್ವಾಳ ಪುರಸಭೆ: 4 ನಾಮಪತ್ರ ಸಲ್ಲಿಕೆ
ಬಂಟ್ವಾಳ: ಬಂಟ್ವಾಳ ಪುರಸಭೆಗೆ ಮಾ. 7 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ನಾಲ್ಕು ನಾಮಪತ್ರಗಳು ಗುರುವಾರ ಸಲ್ಲಿಕೆಯಾಗಿದೆ. ಜೆಡಿಎಸ್ ಹಾಗೂ ಸಿಪಿಐ ತಲಾ ಎರಡೆರಡು ನಾಮಪತ್ರ ಸಲ್ಲಿಸಿದ್ದು, ವಾರ್ಡ್ ನಂ. 4ಕ್ಕೆ ಹರೀಶ್ ಶೆಟ್ಟಿ(ಜೆಡಿಎಸ್), ವಾರ್ಡ್ 8 ರಲ್ಲಿ ಶೇಖರ (ಸಿಪಿಐ) , ವಾರ್ಡ್ 10ರಲ್ಲಿ ಬಿ. ಮೋಹನ (ಜೆಡಿಎಸ್), ವಾರ್ಡ್ 11ಕ್ಕೆ  ಕೆ. ಈಶ್ವರ (ಸಿಪಿಐ) ರವರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಬಿ. ಮೋಹನ್ ಬಂಟ್ವಾಳ ನಗರ ಪಂಚಾಯಿತಿ ಆಗಿದ್ದ ಅವಧಿಯಲ್ಲಿ ನಗರ ಪಂಚಾಯಿತಿನ ಉಪಾಧ್ಯಕ್ಷರಾಗಿದ್ದರು. ಹರೀಶ್ ಶೆಟ್ಟಿ ಇತ್ತೀಚೆಗಿನವರೆಗೆ ಬಂಟ್ವಾಳ ನಗರ ಬಿಜೆಪಿ ಅಧ್ಯಕ್ಷರಾಗಿದ್ದವರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿಯವರ ಜೊತೆ ಜೆಡಿಎಸ್ ಸೇರ್ಪಡೆಗೊಂಡಿದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.