ಪುತ್ತೂರು ಪುರಸಭೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪುತ್ತೂರು: ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧತಾ ಸಭೆ ಮಂಗಳವಾರ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ನಲ್ಲಿ ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕಿ, ಈ ಬಾರಿ ಪುರಸಭಾ ಚುನಾವಣೆಯಲ್ಲಿ 27 ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈ ನಿಟ್ಟಿನಲ್ಲಿ ಯಾವುದೇ ಅಪಸ್ವರವಿಲ್ಲದೆ ಎಲ್ಲಾ ಕಾರ್ಯಕರ್ತರು ಪಕ್ಷದ ಅಭ್ಯಥರ್ಗಳ ಗೆಲುವಿಗೆ ಶ್ರಮಿಸಬೇಕು ಎಂದರು. ಪಕ್ಷದ ಚುನಾವಣಾ ಉಸ್ತುವಾರಿಗಳಾದ ಸ್ಥಳೀಯ ಪ್ರಾಧಿಕಾರದ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಮತ್ತು ಬಿಜೆಪಿ ರಾಜ್ಯ ಪ್ರಕೋಷ್ಠದ ಕಾರ್ಯಕಾರಿಣಿ ಸದಸ್ಯ ವಿಶ್ವೇಶ್ವರ ಭಟ್ ಬಂಗಾರಡ್ಕ ಚುನಾವಣಾ ಮಾಹಿತಿ ನೀಡಿದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಪ್ರಧಾನ ಕಾರ್ಯದರ್ಶಿಗಳಾದ ರಾಜೀವ ಭಂಡಾರಿ ಮತ್ತು ಜಯರಾಮ ಪೂಜಾರಿ ಮತ್ತಿತತರರು ಇದ್ದರು.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಪುರಸಭೆಯ 27 ವಾರ್ಡ್ಗಳ ಪೈಕಿ ಪ್ರಥಮ ಹಂತದ 18 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
17ನೇ ವಾರ್ಡ್ಗೆ ಹಾಲಿ ಉಪಾಧ್ಯಕ್ಷರಾಗಿದ್ದ ವಿನಯ ಭಂಡಾರಿ (2ನೇ ವಾರ್ಡ್) ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜೀವಂದರ್ ಜೈನ್ (ಕಬಕ 2ನೇ ವಾರ್ಡ್) ಹಿಂದಿನ ಸದಸ್ಯರಾಗಿದ್ದ ಸೋಮಪ್ಪ ಸಫಲ್ಯ (ಕಬಕ 1ನೇ ವಾರ್ಡ್), ರಾಮಣ್ಣ ಗೌಡ ಹಲಂಗ (ಬನ್ನೂರು 4ನೇ ವಾರ್ಡ್), ವಿಶ್ವನಾಥ ಗೌಡ (ಬನ್ನೂರು 5ನೇ ವಾರ್ಡ್), ಜ್ಯೋತಿ ಆರ್.ನಾಯಕ್ (ಪುತ್ತೂರು ಕಸ್ಬಾ 12ನೇ ವಾರ್ಡ್), ರಮೇಶ್ ರೈ (ಆರ್ಯಾಪು 26ನೇ ವಾರ್ಡ್), ಮೋಹಿನಿ ನಾಯ್ಕ (ಬಲ್ನಾಡು 27ನೇ ವಾರ್ಡ್), ಚಂದ್ರಸಿಂಗ್ (ಪುತ್ತೂರು ಕಸ್ಬಾ 8ನೇ ವಾರ್ಡ್), ಯಶೋಧಾ ಹರೀಶ್ (ಪುತ್ತೂರು ಕಸ್ಬಾ 14ನೇ ವಾರ್ಡ್), ಶಶಿಕಲಾ ಸಿ.ಎಸ್.ಕೆಮ್ಮಿಂಜೆ 25ನೇ ವಾರ್ಡ್), ಹೊಸ ಅಭ್ಯರ್ಥಿಗಳಾದ ವನಿತಾ (ಪುತ್ತೂರು ಕಸ್ಬಾ 13ನೇ ವಾರ್ಡ್), ವಸಂತಿ (ಪುತ್ತೂರು ಕಸ್ಬಾ 16ನೇ ವಾರ್ಡ್), ರತ್ನಾವತಿ (ಪುತ್ತೂರು ಕಸ್ಬಾ 18ನೇ ವಾರ್ಡ್), ಉಮಾವತಿ(ಪುತ್ತೂರು ಕಸ್ಬಾ 19ನೇ ವಾರ್ಡ್), ಶ್ವೇತಾ ನಾಯಕ್ (ಪುತ್ತೂರು ಕಸ್ಬಾ 21ನೇ ವಾರ್ಡ್), ಸುಜಯ ಮೋಹನ್ ನಾಯತ್ (ಪುತ್ತೂರು ಕಸ್ಬಾ 22ನೇ ವಾರ್ಡ್) ಮತ್ತು ಹರೀಶ್ ಚಿಕ್ಕಮುಡ್ನೂರು (7ನೇ ವಾರ್ಡ್) ಪಟ್ಟಿಯಲ್ಲಿದ್ದಾರೆ. ಉಳಿದ 9 ಅಭ್ಯರ್ಥಿಗಳ ಪಟ್ಟಿ 2ನೇ ಹಂತದಲ್ಲಿ ಬಿಡುಗಡೆಯಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

