ದಕ್ಷಿಣ ಕನ್ನಡ

ಮಾದಕ ದ್ರವ್ಯ ಮಾರಾಟ: ಮೂವರ ಸೆರೆ

Published On :

ಮಣಿಪಾಲ: ಇಲ್ಲಿನ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ಚಟಕ್ಕೆ ಬಲಿಯಾಗಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತದೆ. ಅಂತಹ ಒಂದು ಘಟನೆ ಗುರುವಾರ ಮತ್ತೇ ಬಹಿರಂಗವಾಗಿದೆ.  ಇಲ್ಲಿನ ಮಣ್ಣಪಳ್ಳದ ಬಳಿ ಗುರುವಾರ ಬೆಳಗ್ಗೆ 10.40 ಗಂಟೆಗೆ ದಾಳಿ ನಡೆಸಿದ ಪೊಲೀಸರು 3 ಮಂದಿ ಆರೋಪಿಗಳನ್ನು ಮಾದಕ ದ್ರವ್ಯಗಳ ಸಹಿತ ಬಂಧಿಸಿದ್ದಾರೆ. ಇವರು ಇಲ್ಲಿನ ವಿದ್ಯಾರ್ಥಿಗಳಿಗೆ ಈ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದರು. ಖಚಿತ ಮಾಹಿತಿಯಂತೆ ಮಣಿಪಾಲ ಠಾಣೆಯ ಇನ್ಸ್‌ಪೆಕ್ಟರ್ ಸದಾನಂದ ಎ.ಟಿ. ಮತ್ತು ಸಿಬ್ಬಂದಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ದೇವನಹಳ್ಳಿಯ ಗೋವಿಂದ ಸ್ವಾಮಿ (37), ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಬಿ.ಆರ್.ಟಿ. ಕಾಲನಿಯ ಅಣ್ಣಪ್ಪ (29) ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರು ಗ್ರಾಮದ ಧರ್ಮಪ್ಪ (50) ಅವರನ್ನು ಬಂಧಿಸಿದ್ದಾರೆ. ಆಗ ಅವರ ಬಳಿ 2,300 ಗ್ರಾಂ ಗಾಂಜಾ ಮತ್ತು ರು. 2000 ನಗದು ವಶಪಡಿಸಿಕೊಳ್ಳಲಾಗಿದೆ. ಅವರು ವಿದ್ಯಾರ್ಥಿಗಳಿಗೆ ಈ ಗಾಂಜಾವನ್ನು ಮಾರಾಟ ಮಾಡಲು ಇಲ್ಲಿ ಕಾದು ಕುಳಿತಿದ್ದರು. ಅವರು ಈ ಅಕ್ರಮ ದಂಧೆಗೆ ಕಾರು ಬಳಸುತ್ತಿದ್ದರು. ಅವರ ಬಳಿ 4 ಮೊಬೈಲು, 5 ಎಂಟಿಎಂ ಕಾರ್ಡುಗಳೂ ಪತ್ತೆಯಾಗಿವೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.