ಸಂದೀಪ್ ಕೊಲೆ ಪ್ರಕರಣ: ಐವರು ಸಹವರ್ತಿಗಳ ಸೆರೆ
ಮಂಗಳೂರು: ಇಡ್ಯಾ ಸಂದೀಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಆತನ ಸಹವರ್ತಿಗಳೇ ಆದ ಐವರನ್ನು ಬಂಧಿಸಿದ್ದಾರೆ.
ಸಂದೀಪ್‌ನ ರೌಡಿ ತಂಡದ ಸದಸ್ಯ, ಸಂಬಂಧಿಕ ಮನೋಜ್ ಕುಮಾರ್ (32), ಅನ್ನು ಯಾನೆ ಚೇತನ್ (25), ನವೀನ್ ಯಾನೆ ಮೈಕಲ್ ನವೀನ (25), ಲಕ್ಷ್ಮೀಶ ಯಾನೆ ಅನ್ನಿ (22), ರಾಜಾ ಯಾನೆ, ರಾಜು ಯಾನೆ ರಾಘವೇಂದ್ರ (23)ಬಂಧಿತರು. ಎಲ್ಲರೂ ಸುರತ್ಕಲ್ ಪರಿಸರದವರು.
ತಂಡದ ಸಹವರ್ತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಸುರತ್ಕಲ್ ಮನೋಜ್‌ನ ಮನೆ ಬಳಿಯ ಯುವಕನ ಮೇಲೆ ಸಂದೀಪ್ ಹಣ ಪೀಕಿಸಲು ರೌಡಿಸಂ ಸ್ಟೈಲ್‌ನಲ್ಲಿ ಹಲ್ಲೆ ನಡೆಸಿದ್ದರ. ಇದನ್ನು ಮನೋಜ್ ಪ್ರಶ್ನಿಸಿದ್ದ. ಆದರೆ ಸಂದೀಪ 'ಇದೆಲ್ಲ ನಿನಗ್ಯಾಕೆ' ಎಂದು ಮನೋಜ್‌ಗೆ ವಾಪಸ್ ಬೆದರಿಸಿದ್ದ.
ಇದೇ ಕಾರಣಕ್ಕೆ ಮನೋಜ್ ಮತ್ತು ಸಂದೀಪಗೆ ಜಗಳವಾಗಿತ್ತು. ಆಗ ಗೆಳೆಯರಾದ ಚೇತನ್, ನವೀನ್, ಅನ್ನಿ, ರಾಜು ಮನೋಜ್ ಬೆಂಬಲಿಸಿ ಮಾತನಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಂದೀಪ್ ಎಲ್ಲರನ್ನು ಕೊಲ್ಲುವುದಾಗಿ ಸುರತ್ಕಲ್ ಕಡಲ ತೀರದಲ್ಲಿ ತಲವಾರ್ ಹಿಡಿದುಕೊಂಡು ಬೆದರಿಸಿದ್ದನ್ನು ಜನರು ನೋಡಿದ್ದಾರೆ. ಬಳಿಕ ಐವರು ಗೆಳೆಯರು ನಾಪತ್ತೆಯಾಗಿದ್ದರು. ಸಂದೀಪ್ ಮೃತದೇಹ ಮೀನಕಳಿಯ ಬಳಿ ಪತ್ತೆಯಾಗಿತ್ತು. ಮರಳು ಚೀಲವನ್ನು ದೇಹಕ್ಕೆ ಕಟ್ಟಿ ಹಾಕಿದ್ದು, ತಲೆ, ಕೈಗಳಲ್ಲಿ ಗಾಯವಾಗಿತ್ತು. ಸಂದೀಪ ಬಿಟ್ಟರೆ ತಮ್ಮನ್ನು ಕೊಲೆ ಮಾಡಬಹುದು ಎಂಬ ಹೆದರಿಕೆಯಲ್ಲಿ ಗೆಳೆಯರೇ ಸೇರಿಕೊಂಡು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

