ದಕ್ಷಿಣ ಕನ್ನಡ

ಉಜಿರೆ; ಮಾ.1ರಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

Published On :

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ 'ಪತ್ರಿಕೋದ್ಯಮ ಹಾಗೂ ಸಮಾಜ' ಕುರಿತ ರಾಷ್ಟ್ರಮಟ್ಟದ ವಿಚಾರಸಂಕಿರಣ ಆಯೋಜಿಸಿದೆ.
 ಮಾ.1 ರಿಂದ ಎರಡು ದಿನಗಳ ಕಾಲ ನಡೆಯುವ ಈ ವಿಚಾರ ಸಂಕಿರಣಕ್ಕೆ ಹಿರಿಯ ಪತ್ರಕರ್ತ ಶೇಷಚಂದ್ರಿಕ ಚಾಲನೆ ನೀಡಲಿದ್ದಾರೆ. ವಿಚಾರ ಸಂಕಿರಣದಲ್ಲಿ ಗ್ರಾಮೀಣ ಅಭಿವೃದ್ಧಿ, ಅಭಿವೃದ್ಧಿ ವರದಿಗಾರಿಕೆ, ಪತ್ರಿಕೋದ್ಯಮದಲ್ಲಿ ಶಿಕ್ಷಣ ಹಾಗೂ ಶಿಕ್ಷಣದಲ್ಲಿ ಪತ್ರಿಕೋದ್ಯಮ, ಪೇಜ್-3 ಸಂಸ್ಕೃತಿ ಮತ್ತು ಸಮಾಜ, ಪತ್ರಿಕೋದ್ಯಮ ಹಾಗೂ ನೀತಿಸಂಹಿತೆ, ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ಸಹಭಾಗಿತ್ವ ಮೊದಲಾದ ಉಪ ವಿಷಯಗಳ ಕುರಿತು ವಿಚಾರ ಸಂಕಿರಣ, ಚರ್ಚೆ, ಸಂವಾದ, ಗೋಷ್ಠಿ, ಪ್ರಬಂಧ ಮಂಡನೆ, ಮಾಧ್ಯಮ ತಜ್ಞರ ವಿಶೇಷ ಉಪನ್ಯಾಸಗಳು ನಡೆಯಲಿವೆ. ಅಸ್ಸಾಂ, ಕೇರಳ, ತಮಿಳುನಾಡು, ಗುಜರಾತ್, ಕಾಶ್ಮೀರ ಹಾಗೂ ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳ ಪತ್ರಿಕೋದ್ಯಮ ವಿಭಾಗಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿವೆ. ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್‌ಗಳು, ಪ್ರಾಧ್ಯಾಪಕರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕ-ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ: ವಿಚಾರ ಸಂಕಿರಣದ ಅಂಗವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಛಾಯಾಚಿತ್ರ ಸ್ಪರ್ಧೆ, ಮ್ಯಾಡ್ ಆಡ್, ಕೊಲಾಜ್, ವಿಚಾರ ಸಂಕಿರಣದ ಕುರಿತಾದ ಪ್ರಾಯೋಗಿಕ ಪತ್ರಿಕೆ, ವಾರ್ತಾ ವಾಚನ, ಪಿ-ಟು-ಸಿ, ನುಡಿಚಿತ್ರ ಬರಹ, ಪತ್ರಿಕಾ ವರದಿ ತಯಾರಿಯಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಎಲ  ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಹಿರಿಯ ಪತ್ರಕರ್ತ, ಬರಹಗಾರ ಶೇಷಚಂದ್ರಿಕ, ಈಶ್ವರ ದೈತೋಟ, ಜಿ. ಎನ್. ಮೋಹನ್ ಮತ್ತಿತರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಚಾರ ಸಂಕಿರಣದ ಕುರಿತ ಹೆಚ್ಚಿನ ಮಾಹಿತಿಗಾಗಿ ಭಾಸ್ಕರ ಹೆಗಡೆ (9448911926) ಹಾಗೂ ಹಂಪೇಶ್ ಕೆ.ಎಸ್. (9845183586) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಸಹಕಾರಿ ಸಂಘಗಳ ಲಾಭಾಂಶದ ಮೇಲೆ ತರಿಗೆ; ಜಿಐಸಿ ಸೊಸೈಟಿ ಪರ ತೀರ್ಪು  
ಉಡುಪಿ: ಇಲ್ಲಿನ ಜನರಲ್ ಇನ್ಶೂರೆನ್ಸ್ ಕೋ-ಆಪರೇಟಿವ್ ಸೊಸೈಟಿಯ ಸಂಪೂರ್ಣ ಲಾಭಾಂಶ ಆದಾಯ ತೆರಿಗೆ ಕಾಯ್ದೆ ಕಲಂ 80ಪಿ (2)(ಎ)(ಜಿ)ರನ್ವಯ ತೆರಿಗೆ ವಿನಾಯಿತಿ ಹೊಂದಲು ಅರ್ಹವಾಗಿರುತ್ತದೆ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ ತೀರ್ಪು ನೀಡಿದೆ.
 ಈ ಜನರಲ್ ಇನ್ಶೂರೆನ್ಸ್ ಕೋ-ಆಪರೇಟಿವ್ ಸೊಸೈಟಿ ಪ್ರಾಥಮಿಕ ಸಹಕಾರ ಬ್ಯಾಂಕ್ ಎಂದು ತಪ್ಪಾಗಿ ವ್ಯಾಖ್ಯಾನ ಮಾಡಿ, ಉಡುಪಿಯ ಆದಾಯ ತೆರಿಗೆ ಇಲಾಖೆ 2009-10ನೇ ಸಾಲಿಗೆ ಈ ಸಂಘಕ್ಕೆ ರು. 16,25,720 ಆದಾಯ ತೆರಿಗೆ ವಿಧಿಸಿ 2011ರ ಅ.31ರಂದು ಡಿಮಾಂಡ್ ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ಸಂಘವು ತನ್ನ ಪ್ರಥಮ ಮೇಲ್ಮನವಿಯನ್ನು ಮೈಸೂರು ಆದಾಯ ತೆರಿಗೆ ಆಯುಕ್ತರಿಗೆ ಸಲ್ಲಿಸಿತ್ತು. ಇದರಿಂದ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಸಂಘ ತನ್ನ 2ನೇ ಮೇಲ್ಮನವಿಯನ್ನು ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ದಾಖಲಿಸಿತ್ತು. ಈ ಬಗ್ಗೆ ಮೇಲ್ಮನವಿ ನ್ಯಾಯಾಧೀಕರಣವು ಫೆ.15ರಂದು ತೀರ್ಪು ನೀಡಿದ್ದು, ಈ ಆದೇಶದಲ್ಲಿ ಲಾಭಾಂಶಕ್ಕೆ ಆದಾಯ ತೆರಿಗೆ ನೀಡಬೇಕಾಗಿಲ್ಲ ಎನ್ನುವ ಸಂಘದ ನಿಲುವು ಎತ್ತಿಹಿಡಿದಿದ್ದು, ಆದಾಯ ತೆರಿಗೆ ಸಲ್ಲಿಸಬೇಕು ಎನ್ನುವ ಉಡುಪಿಯ ಆದಾಯ ತೆರಿಗೆ ಇಲಾಖೆಯ ಆದೇಶ ವಜಾ ಮಾಡಿದೆ.
ಹೈಕೋರ್ಟ್ ಮಧ್ಯಪ್ರವೇಶದಿಂದ ಸಾಧ್ಯ: ಸಾಮಾನ್ಯವಾಗಿ ಆದಾಯ ತೆರಿಗೆ ಕರ ಆಕರಣೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳು ಇತ್ಯರ್ಥವಾಗಬೇಕಾದರೆ ಕನಿಷ್ಠ 5-6 ವರ್ಷಗಳು ಬೇಕಾಗುತ್ತವೆ. ಆದರೆ ತಾವು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಈ ಬಗ್ಗೆ 3 ಬಾರಿ ರಿಟ್ ಅರ್ಜಿ ದಾಖಲಿಸಿ, ಹೈಕೋರ್ಟಿನ ಮಧ್ಯಪ್ರವೇಶದಿಂದಾಗಿ ಕೇವಲ 15 ತಿಂಗಳ  ಅವಧಿಯೊಳಗೆ ನ್ಯಾಯ ಪಡೆಯಲು ಸಾಧ್ಯವಾಯಿತು ಎಂದು ರಾವ್ ತಿಳಿಸಿದ್ದಾರೆ.
 ಜಿಲ್ಲೆಯ ಸಹಕಾರ ಸಂಘಗಳನ್ನು ಸಹಕಾರ ಬ್ಯಾಂಕ್‌ಗಳೆಂದು ತಪ್ಪಾಗಿ ಅರ್ಥೈಸಿ ಆದಾಯ ತೆರಿಗೆ ವಿಧಿಸುವ ಇಲಾಖಾ ಧೋರಣೆ ಖಂಡಿಸಿ ಕಳೆದ ಡಿ. 7ರಂದು ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ಬಂದ್ ಆಚರಿಸಿದ್ದವು. ಇದೀಗ ಈ ತೀರ್ಪಿನಿಂದಾಗಿ ಜಿಲ್ಲೆಯ ಸಹಕಾರ ಸಂಘಗಳ ಹೋರಾಟಕ್ಕೆ ತಾತ್ವಿಕ ಜಯ ಸಿಕ್ಕಂತಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರೂ ಆಗಿರುವ ಗೋಪಿಕಷ್ಣ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.